ಹಿಜಬ್ ನಮ್ಮ ಕುಟುಂಬದ ವಿವಾದ ಪಾಕಿಸ್ತಾನ ತಲೆಹಾಕಬಾರದು: ಫಾತಿಮಾ ಹುಸೇನ್ ಆಕ್ರೋಶ

Public TV
1 Min Read
Fatima Hussain 1

ರಾಯಚೂರು: ರಾಜ್ಯದಲ್ಲಿ ನಡೆದಿರುವ ಹಿಜಬ್, ಕೇಸರಿ ಶಾಲು ವಿವಾದದಲ್ಲಿ ಪಾಕಿಸ್ತಾನ ತಲೆದೂರಿಸಬಾರದು. ಇದು ನಮ್ಮ ಕುಟುಂಬದ ಮಧ್ಯೆ ನಡೆಯುತ್ತಿರುವ ಸಮಸ್ಯೆ ಇದನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ರಾಯಚೂರು ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ನಾಯಕಿ ಫಾತಿಮಾ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Fatima Hussain 2

ಹಿಜಾಬ್‍ಗೆ ಪಾಕಿಸ್ತಾನದಿಂದ ಬೆಂಬಲ ವಿಚಾರ ಹಿನ್ನೆಲೆ ನಮ್ಮ ದೇಶದ ಆಂತರಿಕ ವಿಚಾರದ ಬಗ್ಗೆ ಮಾತನಾಡಲು ಪಾಕಿಸ್ತಾನಕ್ಕೆ ಏನು ಹಕ್ಕಿದೆ. ಇದನ್ನು ನಾವೇ ಸರಿಪಡಿಸಿಕೊಳ್ಳುತ್ತೇವೆ. ನಿಮ್ಮ ದೇಶದಲ್ಲಿ ಭಯೋತ್ಪಾದನೆಯಂತಹ ವಿಚಾರಗಳಿವೆ. ಆ ಬಗ್ಗೆ ಮೊದಲು ಗಮನಹರಿಸಿ ಸರಿಪಡಿಸಿಕೊಳ್ಳಿ ಅಂತ ಕಿಡಿಕಾರಿದ್ದಾರೆ. ಇದನ್ನೂ ಓದಿ: 7.47 ಕೋಟಿ ರೂ.ಗೆ ವಿಮೆ ಮಾಡಿಸಿದ್ದ ಪೇಂಟಿಂಗ್ ನಾಶ ಮಾಡಿದ ಸೆಕ್ಯೂರಿಟಿ!

ಹಿಜಾಬ್ ಬಗ್ಗೆ ಮಾತನಾಡಲು ಯೋಗ್ಯತೆ ಬೇಕು. ನಮ್ಮ ದರ್ಗಾ ಮೇಲೂ ಕೇಸರಿ ಬಟ್ಟೆ ಹಾಕುತ್ತೇವೆ. ಧ್ವಜದಲ್ಲಿರುವ ಎಲ್ಲಾ ಬಣ್ಣಗಳು ಶಾಂತಿ ಪ್ರತೀಕ ನಮ್ಮನ್ನು ನಿಮ್ಮ ಅಕ್ಕ, ತಂಗಿಯರ ರೀತಿ ನೋಡಿ ಅಂತ ಫಾತಿಮಾ ಹುಸೇನ್ ಹೇಳಿದ್ದಾರೆ. ಇದನ್ನೂ ಓದಿ: ಪಂಜಾಬ್ ಚುನಾವಣೆ – ಸೋದರ ಮಾವನ ಪರ ಕೇಜ್ರಿವಾಲ್ ಪತ್ನಿ ಪ್ರಚಾರ!

Share This Article