ಹಾವೇರಿ: ಹಿಜಬ್ ಮತ್ತು ಕೇಸರಿ ಶಾಲು ಫೈಟ್ ಈಗ ಸಿಎಂ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಗೆ ಕಾಲಿಟ್ಟಿದೆ. ಸಮವಸ್ತ್ರವನ್ನು ಕಡ್ಡಾಯ ಎಂದು ಆದೇಶ ಮಾಡಿದ ಬಳಿಕವೂ ವಿದ್ಯಾರ್ಥಿಗಳು ಕೇಸರಿಶಾಲು ಧರಿಸಿ ಕಾಲೇಜು ಕ್ಯಾಂಪಸ್‍ಗೆ ಬರುತ್ತಿರುವ ಘಟನೆ ಹಾವೇರಿ ತಾಲೂಕಿನ ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
Advertisement
ಡಿಗ್ರಿ ಕಾಲೇಜಿನಲ್ಲಿ ಕೇಸರಿಶಾಲು ಧರಿಸಿಕೊಂಡು ಸುಮಾರು 50ಕ್ಕೂ ಅಧಿಕ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಕ್ಯಾಂಪಸ್‍ನಲ್ಲಿ ಜೈ ಶ್ರೀರಾಮ್, ಜೈ ಶಿವಾಜಿ, ಜೈ ಭವಾನಿ ಎಂದು ಘೋಷಣೆ ಹಾಕಿದ್ದಾರೆ. ಮೊದ ಮೊದಲು ಕಾಲೇಜು ಗೇಟ್ ಬಂದ್ ಮಾಡಿದ ಕಾಲೇಜು ಸಿಬ್ಬಂದಿ ನಂತರ ವಿದ್ಯಾರ್ಥಿಗಳನ್ನು ಕಾಲೇಜ್ ಒಳಗೆ ಬಿಟ್ಟ ಉಪನ್ಯಾಸಕರು ಏನೂ ಮಾಡದೇ ಅಸಹಾಯಕರಾಗಿದ್ದರು. ಇದನ್ನೂ ಓದಿ: ಕೊರೊನಾಗೆ ಗೆಳೆಯ ಮೃತ – ಸ್ನೇಹಿತನ ಮಡದಿಯನ್ನ ಮದುವೆಯಾದ ಯುವಕ
Advertisement
Advertisement
ವಿಷಯ ತಿಳಿದು ಕಾಲೇಜಿಗೆ ಆಗಮಿಸಿದ ಗ್ರಾಮೀಣ ಠಾಣೆ ಸಿಪಿಐ ನಾಗಮ್ಮ ಹಾಗೂ ಪೊಲೀಸರು ವಾತಾವರಣವನ್ನು ತಿಳಿಗೊಳಿಸಿದರು. ಕಾಲೇಜು ಸಿಬ್ಬಂದಿ ಜೊತೆಗೆ ಮಾತನಾಡಿದ ಪೊಲೀಸರು ಮಾತುಕತೆ ನಡೆಸಿದರು.
Advertisement
ಪ್ರಾಚಾರ್ಯರು ಕಾಲೇಜು ಬಂದ್ ಮಾಡಿ ಎಲ್ಲ ವಿದ್ಯಾರ್ಥಿಗಳನ್ನು ಹೊರಹಾಕಿದ್ದಾರೆ. ನಾಳೆಯಿಂದ ಎಲ್ಲರೂ ಸಮವಸ್ತ್ರ ಸಹಿತ ಕಾಲೇಜಿಗೆ ಆಗಮಿಸಬೇಕು. ಯಾರೂ ಕೇಸರಿ ಶಾಲೂ ಹಾಗೂ ಬೂರ್ಕಾ ಹಾಕಿಕೊಂಡು ಬರಬಾರದು ಎಂದು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದ ಬ್ರಾಂಡ್ ಅಂಬಾಸಿಡರ್ ಆಗಿ ಅಕ್ಷಯ್ ಕುಮಾರ್ ನೇಮಕ