ಉಡುಪಿ: ಆಲ್‍ಖೈದಾ ಉಗ್ರ ವೀಡಿಯೋ ಬಿಡುಗಡೆ ಮಾಡುವ ಮೂಲಕ ಕರ್ನಾಟಕದ ಹಿಜಬ್ ಹೋರಾಟವನ್ನು ಬೆಂಬಲಿಸಿದ್ದಾನೆ. ವೀಡಿಯೋ ಬಿಜೆಪಿ ಮತ್ತು ಸಂಘ ಪರಿವಾರದ ಸೃಷ್ಟಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಹಿಂದೂ ಜಾಗರಣ ವೇದಿಕೆ ತೀವ್ರ ವಾಗ್ದಾಳಿ ನಡೆಸಿದೆ.
ಉಡುಪಿ ಜಿಲ್ಲೆಯಲ್ಲಿ ಡಿಸೆಂಬರ್ ಅಂತ್ಯಕ್ಕೆ ಹಿಜಬ್ ಹೋರಾಟ ಆರಂಭವಾಗಿತ್ತು. ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿ ಹೋರಾಟದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಬಿಜಾಪುರ ನಂತರ ಬೇರೆ ಬೇರೆ ಆಯಾಮಗಳಲ್ಲಿ ಹಿಂದೂ-ಮುಸಲ್ಮಾನರ ನಡುವೆ ಸಂಘರ್ಷ ಏರ್ಪಟ್ಟಿದೆ. ಈ ನಡುವೆ ಹಿಜಬ್ ಹೋರಾಟವನ್ನು ಮುಂದುವರಿಸಿದರು. ಆಲ್-ಖೈದಾ ಉಗ್ರ ಆಯ್ಮಾನ್ ಅಲ್ ಜವಹಿರಿ ವೀಡಿಯೋ ಬಿಡುಗಡೆ ಮಾಡಿದ್ದಾನೆ. ಇದು ಬಿಜೆಪಿ ಸಂಘಪರಿವಾರ ಸೃಷ್ಟಿಸಿದ ವೀಡಿಯೋ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Advertisement
Advertisement
ಹಿಜಬ್‍ನ್ನು ಸಿದ್ದರಾಮಯ್ಯ ಬಲವಾಗಿ ಬೆಂಬಲಿಸುತ್ತಾ ಬಂದಿದ್ದಾರೆ. ಡಿಕೆಶಿ ಈಗ ನಡೆಯುತ್ತಿರುವ ಬೆಳವಣಿಗೆಯನ್ನು ಎಲ್ಲೂ ಸಮರ್ಥಿಸಿಕೊಂಡು ಹೋಗಿಲ್ಲ. ಡಿ.ಕೆ. ಶಿವಕುಮಾರ್‌ಗೆ ವಾಸ್ತವದ ಅರಿವಿದೆ. ಸಿದ್ದರಾಮಯ್ಯ ಹಿಂದೂ ಸಮಾಜ ಪರವಾಗಿ ಎಂದೂ ನಿಂತಿಲ್ಲ. ಜೀವನಪೂರ್ತಿ ಮುಸಲ್ಮಾನ ತುಷ್ಟೀಕರಣ ಅನುಸರಿಸಿದವರು. ಹಿಂದೂ ಸಮಾಜ ಯಾವುದೇ ನಿರೀಕ್ಷೆಯನ್ನು ಇಟ್ಟುಕೊಂಡಿಲ್ಲ ಎಂದು ಹಿಂದೂ ಜಾಗರಣ ವೇದಿಕೆಯ ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ ಕಿಡಿಕಾರಿದರು.
Advertisement
Advertisement
ಸಿಎಂ ಇಬ್ರಾಹಿಂ ಕೂಡಾ, ವಿಡಿಯೋ ಬಿಡುಗಡೆಯನ್ನು ಪ್ರಶ್ನಿಸಿ ಹೇಳಿಕೆ ನೀಡಿದ್ದಾರೆ. ಇದು ಸುಳ್ಳು ಎಂದಿದ್ದರು. ಸಿಎಂ ಇಬ್ರಾಹಿಂ ಕಾಮಿಡಿ ಪೀಸ್. ನಾವದನ್ನು ಗಂಭೀರವಾಗಿ ಕಾಮಿಡಿಯಾಗಿಯೇ ಪರಿಗಣಿಸಿಲ್ಲ. ಉಗ್ರನ ವೀಡಿಯೋ ಸಂಘ ಪರಿವಾರ ಸೃಷ್ಟಿ ಅಂತಾರೆ. ವೀಡಿಯೋದಲ್ಲಿ ಇರುವ ಆಲ್ ಖೈದ ಮುಖ್ಯಸ್ಥ ಆರ್‌ಎಸ್‍ಎಸ್‍ನ ಸ್ವಯಂಸೇವಕ ಎಂದು ಹೇಳುವ ಸಾಧ್ಯತೆ ಇದೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ವಿಗ್ರಹ ಮಾಡೋದು ಹರಾಮ್, ಆದ್ರೇ ಜೀವನೋಪಾಯಕ್ಕೆ ಅದು ಅನಿವಾರ್ಯ: ಉಮರ್ ಷರೀಫ್
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸ್ಥಿತಿ ಮತ್ತು ಮಾನಸಿಕತೆಗೆ ತಕ್ಕಂತೆ ಮಾತನಾಡುತ್ತಾರೆ. ಮುಸಲ್ಮಾನರ ತುಷ್ಟೀಕರಣವೇ ಅವರಿಗೆ ಮುಖ್ಯ. ಈಶ್ವರಪ್ಪರ ನಾಲಿಗೆ ಮತ್ತು ಮೆದುಳಿಗೆ ಸಂಬಂಧ ಇಲ್ಲ ಅಂತೀರಿ. ನಿಮ್ಮ ಮೆದುಳು ಮತ್ತು ನಾಲಿಗೆಗೆ ಸಂಬಂಧ ಇದೆಯೇ ಎಂದು ಪ್ರಕಾಶ್ ಕುಕ್ಕೆಹಳ್ಳಿ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರೈತಸಂಘದಿಂದ ಪರ್ಯಾಯ ರಾಜಕಾರಣ: ಕೋಡಿಹಳ್ಳಿ