ಚಿಕ್ಕಮಗಳೂರು: ಹಿಜಬ್ ವಿವಾದದ ಕುರಿತು ಕಾಫಿನಾಡಿನಲ್ಲೂ ಹೈಡಾಮಾ ಮುಂದುವರಿದಿದ್ದು ಇದನ್ನು ನೋಡಿ ಕೇಸರಿ ಶಾಲನ್ನು ವಿದ್ಯಾರ್ಥಿಯೊಬ್ಬ ತೆಗೆದ ಘಟನೆ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಮದಲ್ಲಿರುವ ಮೌಲನಾ ಅಬ್ದುಲ್ ಅಲ್ಪಸಂಖ್ಯಾತರ ಶಾಲೆಯಲ್ಲಿ ನಮಗೆ ಎಕ್ಸಾಂ ಬೇಡ, ಹಿಜಬ್ ಬೇಕು ಎಂದು ಎಕ್ಸಾಂ ಬಿಟ್ಟು ಮಕ್ಕಳು ಹೊರ ನಿಂತಿದ್ದರು. ಮಕ್ಕಳಿಗೆ ಪೋಷಕರು ಸಾಥ್ ನೀಡಿದ್ದರು.
Advertisement
ಬೆಳಗ್ಗಿನಿಂದಲೂ ಹಿಜಬ್ ಕುರಿತು ಶಾಲಾ ಮಂಡಳಿಯ ಜೊತೆಗೆ ಪೋಷಕರು ವಾದ ವಿವಾದ ನಡೆಯುತ್ತಿತ್ತು. ಇದನ್ನೆಲ್ಲಾ ನೋಡಿದ ವಿದ್ಯಾರ್ಥಿಯೊಬ್ಬ ಬ್ಯಾಗ್‌ನಿಂದ ಕೇಸರಿ ಶಾಲನ್ನು ತೆಗೆದು ಕೈನಲ್ಲಿ ಹಿಡಿದುಕೊಂಡಿದ್ದಾನೆ. ನಂತರ ಪೊಲೀಸರು ಶಲ್ಯವನ್ನು ಬ್ಯಾಗಿನಲ್ಲಿ ಇರಿಸಿದ್ದಾರೆ. ಇದನ್ನೂ ಓದಿ: ರೈತನಿಗೆ ಪರಿಹಾರ ನೀಡಲು ವಿಳಂಬ – ಜಿಲ್ಲಾಧಿಕಾರಿ ಕಾರು ಜಪ್ತಿಗೆ ನ್ಯಾಯಾಲಯ ಆದೇಶ
Advertisement
Advertisement
ವಿದ್ಯಾರ್ಥಿಗಳು ಹಿಜಬ್ ಧರಿಸದೇ ತರಗತಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಗೇಟಿನ ಹೊರಗಡೆ ಇದ್ದ ಮಕ್ಕಳನ್ನು ಡಿಡಿಪಿಐ ಒಳಗಡೆ ಕರೆದುಕೊಂಡು ಹೋಗಿದ್ದರು. ಶಾಲೆಯ ಒಳಗೆ ಹೋಗಲು ಹಿಜಬ್ ತೆಗೆಯುವಂತೆ ಮಕ್ಕಳಲ್ಲಿ ಮನವಿ ಮಾಡಿದರು. ಆದರೆ ಡಿಡಿಪಿಐ ಮನವಿಯನ್ನು ವಿದ್ಯಾರ್ಥಿಗಳು ತಿರಸ್ಕರಿಸಿದ್ದಾರೆ. ತರಗತಿಯ ಒಳಪ್ರವೇಶ ಮಾಡಿದ ವಿದ್ಯಾರ್ಥಿಗಳನ್ನು ಚಪ್ಪಾಳೆ ಮೂಲಕ ಇತರೆ ವಿದ್ಯಾರ್ಥಿಗಳು ಸ್ವಾಗತಿಸಿದರು. ಮುಂಜಾಗೃತಾ ಕ್ರಮವಾಗಿ ಡಿಡಿಪಿಐ ಮಲ್ಲೇಶಪ್ಪ ಶಾಲೆಗೆ ರಜೆ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿ ಬರಲು ಬಿಡಲ್ಲ: ಸಚಿವ ಅಶ್ವತ್ಥ ನಾರಾಯಣ
Advertisement
ರಾಜ್ಯಾದ್ಯಂತ ಶಾಲೆ ಪ್ರಾರಂಭವಾಗಿದ್ದರೂ, ಹಿಜಬ್ ಧರಿಸಿದ ವಿದ್ಯಾರ್ಥಿನಿಯರು ತರಗತಿಯನ್ನು ಬಹಿಷ್ಕರಿಸಿ ವಾಪಸ್ ತರೆರುಳುತ್ತಿರುವ ಘಟನೆ ರಾಜ್ಯಾದ್ಯಂತ ನಡೆಯುತ್ತಿದೆ. ಇದಕ್ಕೆ ಪೋಷಕರು ಬೆಂಬಲ ನೀಡುತ್ತಿದ್ದಾರೆ.