ಬೆಂಗಳೂರು: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೂರ್ಣ ಪೀಠದಲ್ಲಿ 4ನೇ ದಿನವೂ ಹಿಜಬ್ ಅರ್ಜಿ ವಿಚಾರವನ್ನ ಕಾವೇರಿದ ವಾದ ನಡೀತು.
ಅರ್ಜಿದಾರರ ಪರ ವಕೀಲರಾದ ರವಿವರ್ಮ ಕುಮಾರ್ ವಾದ ಮಂಡನೆ ಮಾಡಿದ್ರು. ಶಿಕ್ಷಣ ಕಾಯ್ದೆ ಪ್ರಕಾರ 5 ವರ್ಷಗಳ ಕಾಲ ಸಮವಸ್ತ್ರ ಬದಲಿಸಲು ಆಗಲ್ಲ. ಬದಲು ಮಾಡಿದ್ರೂ 1 ವರ್ಷ ಮುಂಚಿತವಾಗಿ ಪೋಷಕರಿಗೆ ಮಾಹಿತಿ ನೀಡಬೇಕು. ಸರ್ಕಾರ ಯೂನಿಫಾರಂ ನಿರ್ಧರಿಸುವ ಅಧಿಕಾರವನ್ನು ಕಾಲೇಜು ಸಮಿತಿಗೆ ನೀಡಿದೆ. ಆ ಅಧಿಕಾರ ಕಾಲೇಜು ಸಮಿತಿಗೆ ಇಲ್ಲ.
Advertisement
Advertisement
ಸಮಿತಿಯನ್ನು ಸರ್ಕಾರದ ಅಧೀನ ಎಂದು ಪರಿಗಣಿಸುವುದಾದರೆ, ಶಾಸಕ ಕೂಡ ಸರ್ಕಾರದ ಅಧೀನ ಆಗ್ತಾರೆ. ಶಾಸಕರು ರಾಜಕೀಯ ಪಕ್ಷವೊಂದನ್ನು ಪ್ರತಿನಿಧಿಸುತ್ತಾರೆ. ಶಾಸಕರ ಅಧ್ಯಕ್ಷತೆಯ ಸಮಿತಿಗೆ ಆಡಳಿತಾತ್ಮಕ ಅಧಿಕಾರ ನೀಡುವುದು ತಪ್ಪು. ಕಾಲೇಜು ಸಮಿತಿಗೆ ಅಧಿಕಾರ ನೀಡಿರುವ ಆದೇಶವನ್ನ ವಜಾ ಮಾಡಿ ಅಂತ ಕೇಳಿಕೊಂಡರು. ಇದನ್ನೂ ಓದಿ: ಈಶ್ವರಪ್ಪ vs ಡಿಕೆಶಿ ವಾಕ್ಸಮರ: ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಸದನದ ಕದನ
Advertisement
Advertisement
ಶಾಲೆಗಳಲ್ಲಿ ದುಪ್ಪಟ್ಟ ನಿಷೇಧಿಸಲಾಗಿಲ್ಲ. ಬಳೆ, ಬಿಂದಿ, ಶಿಲುಬೆ, ಟರ್ಬನ್‍ಗಿಲ್ಲದ ನಿರ್ಬಂಧ ಹಿಜಬ್‍ಗೆ ಮಾತ್ರ ಯಾಕೆ..? ಧಾರ್ಮಿಕ ಕಾರಣಕ್ಕಾಗಿ ತಾರತಮ್ಯ ಮಾಡುವಂತಿಲ್ಲ. ಹಾಗಾಗಿ ಮಧ್ಯಂತರ ಆದೇಶ ತೆರವಿಗೆ ರವಿವರ್ಮಕುಮಾರ್ ಮನವಿ ಮಾಡಿದ್ರು. ಇದಕ್ಕೆ ಆಕ್ಷೇಪಣೆ ಸಲ್ಲಿಕೆಗೆ ಅಡ್ವೋಕೇಟ್ ಜನರಲ್‍ಗೆ ಸೂಚನೆ ನೀಡಿ, ವಿಚಾರಣೆಯನ್ನು ನಾಳೆ ಮಧ್ಯಾಹ್ನಕ್ಕೆ ತ್ರಿಸದಸ್ಯ ಪೀಠ ಮುಂದೂಡಿತು. ಇದನ್ನೂ ಓದಿ: ಹಿಜಬ್ ಗಲಾಟೆ ಹುಬ್ಬಳ್ಳಿ ಕಾಲೇಜುಗಳಿಗೆ ರಜೆ ಘೋಷಣೆ- ಕಾಲೇಜು ಸುತ್ತಲೂ 144 ಸೆಕ್ಷನ್ ಜಾರಿ