ಬೆಂಗಳೂರು: ರಾಜ್ಯದಲ್ಲಿ ಹಿಜಬ್ ಸಂಘರ್ಷದ ನಡುವೆ ಇದೀಗ ರಾಜಧಾನಿಯಲ್ಲಿ ಟರ್ಬನ್ ಚರ್ಚೆ ಭಾರೀ ಸದ್ದು ಮಾಡುತ್ತಿದೆ.
ಹೈಕೋರ್ಟ್ ಆದೇಶದಂತೆ ವಿದ್ಯಾರ್ಥಿಗಳ ಹಿಜಬ್ ತೆಗೆಸಿದಂತೆ ಟರ್ಬನ್ ತೆಗೆಸಿ ಎಂದು ನಗರದ ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿಗಳು ಪ್ರಿನ್ಸಿಪಾಲ್‍ಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ; ಗಗನಕ್ಕೇರಿದ ತೈಲ, ಚಿನ್ನದ ಬೆಲೆ – ಭಾರತದ ಶೇರು ಮಾರುಕಟ್ಟೆಯಲ್ಲಿ ತಲ್ಲಣ
Advertisement
Advertisement
2000ಕ್ಕೂ ಹೆಚ್ಚು ವಿದ್ಯಾರ್ಥಿ ಇರುವ ಈ ಕಾಲೇಜಿನಲ್ಲಿ ಸಿಖ್ ಸಮುದಾಯದ ಒಬ್ಬರು ವಿದ್ಯಾರ್ಥಿನಿ, ಅದು ಸ್ಟೂಡೆಂಟ್ ಯೂನಿಯನ್ ಅಧ್ಯಕ್ಷೆಯಾಗಿರುವ ಯುವತಿ ಮಾತ್ರ ಟರ್ಬನ್ ಧರಿಸಿ ಕಾಲೇಜಿಗೆ ಬರುತ್ತಿದ್ದರು. ಹೀಗಾಗಿ ವಿದ್ಯಾರ್ಥಿಗಳು ಹಿಜಬ್ ತೆಗೆಸಿದಂತೆ ಟರ್ಬನ್ ತೆಗೆಸುವಂತೆ ಕಾಲೇಜ್ ಪ್ರಿನ್ಸಿಪಾಲ್‍ಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ವಿರುದ್ಧದ ದಾಳಿ ವಿಪತ್ಕಾರಕ ಜೀವಹಾನಿಗೆ ಕಾರಣವಾಗಬಹುದು: ಜೋ ಬೈಡೆನ್
Advertisement
ನಂತರ ಪ್ರಿನಿಪಾಲ್ ಮತ್ತು ಆಡಳಿತ ಮಂಡಳಿ ಟರ್ಬನ್ ತೆಗೆಯುವಂತೆ ವಿದ್ಯಾರ್ಥಿನಿಗೆ ಮನವಿ ಮಾಡಿದ್ದಾರೆ. ಬಳಿಕವೂ ವಿದ್ಯಾರ್ಥಿನಿ ಟರ್ಬನ್ ತೆಗೆಯಲ್ಲ ಇದು ಸಿಖ್ ಸಮುದಾಯದ ಸಂಕೇತ ಎಂದು ಹೇಳಿದ್ದಾರೆ. ಕೊನೆಗೆ ಪೋಷಕರಿಗೆ ಟರ್ಬನ್ ತೆಗೆಯಬಹುದಾ ಎಂದು ಮೇಲ್ ಮಾಡಿದ್ದಾರೆ. ಜೊತೆಗೆ ಕಾಲೇಜಿನ ಆಡಳಿತ ಮಂಡಳಿ ಕೂಡ ಟರ್ಬನ್ ತೆಗೆಸಬಹುದೆ ಎಂದು ಕರೆಮಾಡಿ ಕೇಳಿದ್ದಾರೆ. ಇದಕ್ಕೆ ವಿದ್ಯಾರ್ಥಿ ಪೋಷಕರು ಹೈಕೋರ್ಟ್‍ನಲ್ಲಿ ಟರ್ಬನ್ ಬಗ್ಗೆ ಉಲ್ಲೇಖ ಆಗಿಲ್ಲ. ಸಿಖ್ ಸಮುದಾಯದ ಸಂಕೇತವನ್ನು ನಾವು ತೆಗೆಯಲ್ಲ ಎಂದು ಹೇಳಿದ್ದಾರೆ. ಇದೀಗ ವಿದ್ಯಾರ್ಥಿನಿ ಕಾಲೇಜಿಗೆ ಟರ್ಬನ್ ಹಾಕಿಕೊಂಡೇ ಆಗಮಿಸುತ್ತಿದ್ದಾರೆ.
Advertisement
ಸದ್ಯ ಈ ಕುರಿತಂತೆ ಪ್ರತಿಕ್ರಿಯಿಸಿರುವ ಮೌಂಟ್ ಕಾರ್ಮೆಲ್ ಕಾಲೇಜ್ ಪ್ರಿನ್ಸಿಪಾಲ್ ಭಬಿತಾ ಅವರು, ಹೈಕೋರ್ಟ್ ಆದೇಶವನ್ನು ನಾವು ಪಾಲನೆ ಮಾಡುತ್ತಿದ್ದೇವೆ. ಹೈಕೋರ್ಟ್ ಆದೇಶದಂತೆ ಹಿಜಬ್ ತೆಗೆಸಿ ವಿದ್ಯಾರ್ಥಿಗಳು ಒಳಗಡೆ ಬರುತ್ತಿದ್ದರು. ಈ ವೇಳೆ ಸಿಖ್ ಸಮುದಾಯದ ಒಂದು ವಿದ್ಯಾರ್ಥಿನಿ ಟರ್ಬನ್ ಹಾಕಿದ್ದರು. ನಮ್ಮ ಹಿಜಬ್ ತೆಗೆಸಿದಂತೆ ಅವರ ಟರ್ಬನ್ ತೆಗೆಸಿ ಅಂತ ಇತರೆ ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಟರ್ಬನ್ ಹಾಕಿದ್ದ ವಿದ್ಯಾರ್ಥಿನಿ ನಮ್ಮ ಕಾಲೇಜಿನ ಸ್ಟೂಡೆಂಟ್ ಯೂನಿಯನ್ ನಾ ಪ್ರೆಸಿಡೆಂಟ್ ಆಗಿದ್ದು, ಟರ್ಬನ್ ತೆಗೆಸಿ ಅಂತ ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ. ನೀನು ಟರ್ಬನ್ ತೆಗೆಯಲು ಸಾಧ್ಯತೆವೇ ಅಂತ ವಿದ್ಯಾರ್ಥಿಯನ್ನು ಕೇಳಿದೆವು. ನಾನು ಟರ್ಬನ್ ತೆಗೆಯೋಕೆ ಆಗಲ್ಲ ಇದು ನಮ್ಮ ಸಿಖ್ ಸಮುದಾಯದ ಸಂಕೇತ ಎಂದು ಹೇಳಿದ್ದರು. ನಾವು ಅವರ ಪೋಷಕರನ್ನು ಕಾಲೇಜ್‍ಗೆ ಬರಬಹುದ ಅಂತ ಕೇಳಿದೇವು. ಅವರು ನಾವು ಬ್ಯುಸಿ ಇದ್ದೇವೆ ಬರುವುದಕ್ಕೆ ಆಗಲ್ಲ ಅಂದರು. ಹಾಗಾಗಿ ನಾವು ಕರೆ ಮಾಡಿಯೇ ಟರ್ಬನ್ ತೆಗೆಸುವ ಸಾಧ್ಯತೆ ಇದೆಯೇ ಎಂದು ಕೇಳಿದೇವು. ಅದಕ್ಕೆ ವಿದ್ಯಾರ್ಥಿನಿ ಪೋಷಕರು ಕೂಡ ಸಿಖ್ ಧರ್ಮದ ಸಂಕೇತ ತೆಗೆಯಲ್ಲ ಎಂದಿರುವುದಾಗಿ ತಿಳಿಸಿದ್ದಾರೆ.