ಚಿಕ್ಕೋಡಿ: ರಾಜ್ಯಾದ್ಯಂತ ಭುಗಿಲೆದ್ದಿರುವ ಹಿಜಬ್ ವಿವಾದದ ನಡುವೆಯೇ ಮುಸ್ಲಿಂ ಶಿಕ್ಷಣ ಸಂಸ್ಥೆಯೊಂದು ಮಾದರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.
Advertisement
ಹುಕ್ಕೇರಿ ಪಟ್ಟಣದಲ್ಲಿರುವ ಟಿಪ್ಪು ಪ್ರೌಢ ಶಾಲೆಯಲ್ಲಿ ಹಿಜಬ್ ಧರಿಸಿ ತರಗತಿಗಳಿಗೆ ತೆರಳದಂತೆ ಶಿಕ್ಷಕರು ಕ್ರಮ ವಹಿಸಿದ್ದಾರೆ. ಹಿಜಬ್ ಧರಿಸಿ ಬರುವ ವಿದ್ಯಾರ್ಥಿನಿಯರ ಹಿಜಬ್ ತೆಗಿಸಿ ತರಗತಿಗಳಿಗೆ ಶಿಕ್ಷಕರು ಕಳಿಸಿ ಕೊಡುವ ಕಾರ್ಯ ಮಾಡಿದ್ದಾರೆ. ಇದನ್ನೂ ಓದಿ: ಅಕ್ರಮ ಆಸ್ತಿಗಳಿಕೆ ಆರೋಪ – ವಿಚಾರಣೆ ನಡೆಸಲು ಹೈಕೋರ್ಟ್‍ಗೆ ಸುಪ್ರೀಂ ಸೂಚನೆ
Advertisement
Advertisement
ನ್ಯಾಯಾಲಯದ ಆದೇಶವೇ ಅಂತಿಮ ಎಂದು ಆಡಳಿತ ಮಂಡಳಿ ಹಾಗೂ ಶಿಕ್ಷಕರು ಹೇಳಿದ್ದು, ನ್ಯಾಯಾಲಯದ ಆದೇಶ ಬರುವವರೆಗೂ ತರಗತಿಗಳಲ್ಲಿ ಹಿಜಬ್ ಧರಿಸದಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದಾರೆ. ಮುಸ್ಲಿಂ ಶಿಕ್ಷಣ ಸಂಸ್ಥೆಯಾಗಿದ್ದರೂ ಹಿಜಬ್ ವಿವಾದಕ್ಕೆ ಧ್ವನಿಗೂಡಿಸದೇ ಸರ್ಕಾರದ ಆದೇಶ ಪಾಲನೆಯನ್ನು ಈ ಶಾಲೆಯಲ್ಲಿ ಮಾಡಲಾಯಿತು.
ಹಿಜಬ್ ವಿವಾದಕ್ಕೆ ತುಪ್ಪ ಸುರಿಯುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಟಿಪ್ಪು ಪ್ರೌಢ ಶಾಲೆ ಮಾದರಿಯಾಗಿದೆ. ಇದನ್ನೂ ಓದಿ: ಬಹುಕೋಟಿ ಮೇವು ಹಗರಣ, ಲಾಲೂ ಪ್ರಸಾದ್ ಯಾದವ್ ದೋಷಿ – CBI ಕೋರ್ಟ್