ಬೆಂಗಳೂರು: ಹಿಜಬ್- ಕೇಸರಿ ವಿವಾದ ಉಡುಪಿ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಹಬ್ಬಿದೆ. ಅದರಲ್ಲೂ ಕುಂದಾಪುರದ ಪ್ರತಿಯೊಂದು ಕಾಲೇಜಿನಲ್ಲೂ ಹಿಜಬ್-ಕೇಸರಿ ಫೈಟ್ ನಡೆದಿದೆ.
Advertisement
ನಿನ್ನೆ ಮೊನ್ನೆಯೆಲ್ಲಾ ಬರೀ ಹುಡುಗರು ಕೇಸರಿ ಶಾಲಿನೊಂದಿಗೆ ಕಾಣಿಸಿಕೊಳ್ತಿದ್ರು. ಇದೀಗ ಭಂಡಾರ್ಕಾರ್ಸ್ ಕಾಲೇಜಿನ ಹೆಣ್ಮಕ್ಕಳು ಕೂಡ ಕೇಸರಿ ಶಾಲು ಹಾಕಿಕೊಂಡು ಕುಂದಾಪುರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅವರು ಹಿಜಬ್ ಕಳಚುವ ತನಕ ನಾವು ಕೇಸರಿ ಶಾಲು ತೆಗೆಯಲ್ಲ ಎಂದು ಆ ಹೆಣ್ಮಕ್ಕಳು ಶಪಥ ಮಾಡಿದ್ದಾರೆ.
Advertisement
Advertisement
ಎನ್‍ಆರ್ ಶೆಟ್ಟಿ ಕಾಲೇಜಿನಲ್ಲಿಯೂ ಹಿಜಬ್-ಕೇಸರಿಧಾರಿಗಳ ಪ್ರತಿಭಟನೆ ನಡೆದಿದೆ. ಜೈಶ್ರೀರಾಮ್-ಹರಹರ ಮಹಾದೇವ್ ಘೋಷಣೆಗಳು ಮುಗಿಲುಮುಟ್ಟಿವೆ. ಇದರಿಂದ ಎಚ್ಚೆತ್ತ ಆಡಳಿತ ಮಂಡಳಿ ಹೈಕೋರ್ಟ್ ಆದೇಶ ಬರುವ ತನಕ ಕಾಲೇಜಿಗೆ ರಜೆ ಘೋಷಿಸಿದೆ. ಪೊಲೀಸರ ಸೂಚನೆ ಮೇರೆಗೆ ಮಕ್ಕಳು ಮನೆಗೆ ವಾಪಸ್ ಆಗಿವೆ. ಇದನ್ನೂ ಓದಿ: ಹಿಜಬ್‍ಗೆ ಬ್ರೇಕ್ – ಏಕರೂಪ ವಸ್ತ್ರಸಂಹಿತೆ ಜಾರಿಮಾಡಿದ ಸರ್ಕಾರ
Advertisement
ಈ ಮಧ್ಯೆ ಕುಂದಾಪುರದ ಸರ್ಕಾರಿ ಕಾಲೇಜಿನಲ್ಲಿ ಇನ್ಮುಂದೆ ಹಿಜಬ್, ಕೇಸರಿ ಶಲ್ಯಕ್ಕೆ ಅವಕಾಶ ಇಲ್ಲ. ಸೋಮವಾರದಿಂದ ಮಕ್ಕಳು ಕೇವಲ ಸಮವಸ್ತ್ರದಲ್ಲಿ ಬರಬೇಕು ಎಂದು ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಸೂಚಿಸಿದೆ. ಯಾರೂ ಕೂಡ ಕಾಲೇಜಿನ ಹೊರಗೆ ಕುಳಿತುಕೊಳ್ಳಬಾರದು. ಹಿಜಬ್‍ಗಾಗಿ ಒತ್ತಾಯಿಸುವವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗುವುದು ಎಂದು ಆದೇಶ ಹೊರಡಿಸಿದೆ.
ಅತ್ತ ಭಂಡಾಕಾರ್ಸ್ ಕಾಲೇಜಿನಲ್ಲಿ ಪೋಷಕರ ಸಭೆ ನಡೀತು. ಹಿಜಬ್ ಧರಿಸಲು ಅವಕಾಶ ಕೊಡಿ ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಪ್ರಾಂಶುಪಾಲರನ್ನು ಕೋರಿದ್ರು. ರಾಜಕೀಯ ಸಂಘಟನೆಗಳ ಎಂಟ್ರಿಗೆ ಅವಕಾಶ ಕೊಡಬೇಡಿ ಅಂತಲೂ ಮನವಿ ಮಾಡಿಕೊಂಡರು. ಇದನ್ನೂ ಓದಿ: ಕೇಂದ್ರದ ಬೇಟಿ ಬಚಾವೋ, ಬೇಟಿ ಪಡಾವೋ ಈಗ ಬೇಟಿ ಹಠಾವೋ ಆಗಿ ಬದಲಾಗುತ್ತಿದೆ: ಹೆಚ್‍ಡಿಕೆ