ಶ್ರೀನಗರ: ನಾನು ಹೃದಯದಿಂದ ಮುಸ್ಲಿಂ ಮಗಳು ಆದರೆ ಹಿಜಬ್‍ನಿಂದಲ್ಲ. ಹೀಗಾಗಿ ನಾನು ಉತ್ತಮ ಮುಸ್ಲಿಂ ಎಂದು ಸಾಬೀತು ಪಡಿಸುವ ಅಗತ್ಯವಿಲ್ಲ ಎಂದು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಕಾಶ್ಮೀರಕ್ಕೆ ಪ್ರಥಮ ಸ್ಥಾನ ಪಡೆದ ಶ್ರೀನಗರದ ಆರೂಸಾ ಪರ್ವೇಜ್ ತಿಳಿಸಿದ್ದಾರೆ.
ಫೆ. 8ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿತ್ತು. ಇದರಲ್ಲಿ ಆರೂಸಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗಕ್ಕೆ 500ಕ್ಕೆ 499 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆರೂಸಾಗೆ ಸನ್ಮಾನ ಕಾರ್ಯಕ್ರಮವೊಂದು ನಡೆದಿತ್ತು. ಆದರೆ ಆರೂಸಾ ಹಿಜಬ್ ಧರಿಸದ ಕಾರಣ ಅವರನ್ನು ಟ್ರೋಲ್ ಮಾಡಲಾಗಿತ್ತು. ಜೊತೆಗೆ ಅವರಿಗೆ ಅನೇಕ ಕೊಲೆ ಬೆದರಿಕೆಗಳು ಬಂದಿದ್ದವು.
ಇದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ನನ್ನ ಧರ್ಮ, ನನ್ನ ಹಿಜಬ್ ಮತ್ತು ನನ್ನ ಅಲ್ಲಾ ಇವೆಲ್ಲವೂ ನನ್ನ ವೈಯಕ್ತಿಕ. ನನ್ನ ಧರ್ಮದ ಶ್ರೇಷ್ಠತೆಯನ್ನು ನಂಬುವವರಿಗೆ ನಾನು ಹಿಜಬ್ ಧರಿಸಬೇಕು ಅಥವಾ ಧರಿಸಬಾರದು ಎಂದು ಏಕೆ ಒತ್ತಾಯಿಸಬೇಕು. ಈ ಕಾಮೆಂಟ್‍ಗಳು ನನಗೆ ಅಪ್ರಸ್ತುತವಾಗುತ್ತದೆ. ಆದರೆ ನನ್ನ ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದ ಜನತೆಗೆ ಕರೆಂಟ್ ಶಾಕ್ – ಪ್ರತಿ ಯೂನಿಟ್‍ಗೆ 30 ಪೈಸೆ ಹೆಚ್ಚಳ?
ನೀವು ಟ್ರೋಲ್ ಮಾಡುವುದಕ್ಕಿಂತಲೂ ಹೆಚ್ಚಾಗಿ ನಾನು ಅಲ್ಲಾಹುನನ್ನು ನಂಬುವೆ ಮತ್ತು ಇಸ್ಲಾಮಿಕ್ ತತ್ವಗಳನ್ನು ಪಾಲಿಸುತ್ತೇನೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ನಾಳೆ ಹೈಕೋರ್ಟ್‍ನಲ್ಲಿ ಹಿಜಬ್ ಸಂಘರ್ಷ ವಿಚಾರಣೆ – ಪೊಲೀಸ್ ಭದ್ರತೆಯಲ್ಲಿ ಹೈಸ್ಕೂಲ್ ಓಪನ್