ಭೋಪಾಲ್: ಕರ್ನಾಟಕದಲ್ಲಿ ಹಿಜಬ್ ಬ್ಯಾನ್ (Hijab Ban) ವಿಚಾರ ಕೋರ್ಟ್ ನಲ್ಲಿದೆ. ಈ ನಡುವೆ ಮಧ್ಯಪ್ರದೇಶದ ಶಾಲೆಯೊಂದರಲ್ಲಿ ಹಿಂದೂ (Hindu Students Hijab) ವಿದ್ಯಾರ್ಥಿನಿಯರೂ ಕೂಡ ಹಿಜಬ್ ಧರಿಸಿದ್ದು, ಇದೀಗ ಈ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿದೆ.
ಹೌದು. ಮಧ್ಯಪ್ರದೇಶದ ದಾಮೋಹ್ (Damoh) ಜಿಲ್ಲೆಯ ಗಂಗಾ ಜಮ್ನಾ ಹೈಯರಿ ಸೆಕೆಂಡರಿ ಸ್ಕೂಲ್ ಚರ್ಚೆಗೆ ಗ್ರಾಸವಾಗಿದೆ. ಈ ಶಾಲೆಯ ಪೋಸ್ಟರ್ ಒಂದರಲ್ಲಿ ಹಿಂದೂ ಹೆಣ್ಮಕ್ಕಳು ಕೂಡ ಹಿಜಬ್ ಧರಿಸಿರುವುದನ್ನು ಕಾಣಬಹುದಾಗಿದ್ದು, ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ (Viral Poster) ವೈರಲ್ ಆಗಿದೆ. ಇದನ್ನೂ ಓದಿ: ಮಂಥರ್ ಗೌಡ ಗೆಲುವು – 135 ಕಿಮೀ ದೂರದ ಚಾಮುಂಡಿ ಬೆಟ್ಟಕ್ಕೆ ಪಾದಯಾತ್ರೆ
Advertisement
Advertisement
ಪೋಸ್ಟರ್ ವೈರಲ್ ಆದ ಬಳಿಕ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ (Narattoma Mishra) ತನಿಖೆಗೆ ಆದೇಶಿಸಿದ್ದಾರೆ. ಆದರೆ ಈ ಸಂಬಂಧ ಹಿಜಬ್ ಧರಿಸಿದ ಹಿಂದೂ ವಿದ್ಯಾರ್ಥಿನಿಯರ ಪೋಷಕರು ಯಾವುದೇ ದೂರು ನೀಡಿಲ್ಲ ಎಂಬುದಾಗಿ ವರದಿಯಾಗಿದೆ. ಈ ನಡುವೆ ಶಾಲೆಯ ಮಾಲೀಕ ಮುಶ್ತಾಖ್ ಖಾನ್ ಪ್ರತಿಕ್ರಿಯೆ ನೀಡಿ, ಹಿಜಬ್ ರೀತಿಯ ಶಿರವಸ್ತ್ರ ಕೂಡಾ ಶಾಲೆಯ ಸಮವಸ್ತ್ರದ ಭಾಗವಾಗಿದೆ. ಈ ಬಗ್ಗೆ ನಾವು ಯಾರೂ ಮೇಲೂ ಒತ್ತಡ ಹೇರಿಲ್ಲ ಎಂದಿದ್ದಾರೆ.
Advertisement
Advertisement
ಇತ್ತ ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ನೇತೃತ್ವದ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಬ್ ಬ್ಯಾನ್ ಮಾಡಿತ್ತು. ಸದ್ಯ ಈ ವಿಚಾರ ಕೋರ್ಟ್ ನಲ್ಲಿದೆ. ಆದರೆ ಹಿಜಬ್ ವಿವಾದದಿಂದ ಸಾವಿರಾರು ಹೆಣ್ಣುಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಮವಸ್ತ್ರ ಕುರಿತು ಸರ್ಕಾರ ಆದೇಶವನ್ನು ಪರಿಷ್ಕರಿಸಬೇಕು ಎಂದು ಸಾಹಿತಿಗಳು, ಬರಹಗಾರರು ಹಾಗೂ ಜನಪರ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇತ್ತೀಚೆಗೆ ಮನವಿ ಮಾಡಿದರು.