ಬೆಂಗಳೂರು: ಸಿದ್ದರಾಮಯ್ಯ, ರಾಹುಲ್ ಗಾಂಧಿ, ರಮ್ಯಾ, ಪ್ರಿಯಾಂಕಾ, ಮಲಾಲಾ, ಕಮಲ್ ಹಾಸನ್, ಅಲ್ ಜಜೀರಾ ಇದೆಲ್ಲವೂ ಭಾರತ ವಿರೋಧಿ ಟೂಲ್ ಕಿಟ್ ಗ್ಯಾಂಗ್ ಎಂದು ಬಿಜೆಪಿ ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡಿ ಕಿಡಿಕಾರಿದೆ.
Advertisement
ಟ್ವೀಟ್ನಲ್ಲಿ ಏನಿದೆ?:
ಸಿದ್ದರಾಮಯ್ಯ, ರಾಹುಲ್ ಗಾಂಧಿ, ರಮ್ಯಾ, ಪ್ರಿಯಾಂಕಾ, ಮಲಾಲಾ, ಕಮಲ್ ಹಾಸನ್, ಅಲ್ ಜಜೀರಾ ಇವರೆಲ್ಲರೂ ಹಿಜಬ್ ವಿವಾದದ ಹಿಂದಿರುವ ಧ್ವನಿಗಳು. ಒಡೆದು ಅಳುವ ನೀತಿ ಕಾಂಗ್ರೆಸ್ ಪಕ್ಷದ ಹುಟ್ಟು ಗುಣ. ಯುವ ಜನಾಂಗ ಈ ರೀತಿ ಇಬ್ಭಾಗವಾಗಲು ಕಾಂಗ್ರೆಸ್ ಪಕ್ಷವೇ ನೇರ ಕಾರಣ. ಇದನ್ನೂ ಓದಿ: ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಹಿಜಬ್ ಅರ್ಜಿ ವರ್ಗಾವಣೆ
Advertisement
ಕೆಪಿಸಿಸಿ ಅಧ್ಯಕ್ಷ @DKShivakumar ಅವರೇ,
ಇದುವರೆಗೆ ಇಲ್ಲದ ಹಿಜಾಬ್ ವಿವಾದವನ್ನು ಸೃಷ್ಟಿಸಲು ವಿದ್ಯಾರ್ಥಿನಿಯರಿಗೆ ಹಿಜಾಬ್ ಪೂರೈಕೆ ಮಾಡಿದ್ದು ಕೆಪಿಸಿಸಿ ಕಚೇರಿಯಿಂದಲೇ?#AntiSocialDKS
— BJP Karnataka (@BJP4Karnataka) February 9, 2022
Advertisement
ಕೊತ್ವಾಲ್ ಶಿಷ್ಯ ಈಗ ಹಿಟ್ & ರನ್ ರಾಜಕೀಯ ಪ್ರಾರಂಭಿಸಿದ್ದಾರೆ. ಬಿಜೆಪಿಯವರು ಸೂರತ್ನಿಂದ ಪೇಟಗಳನ್ನು ತರಿಸಿದ್ದಾರೆ ಎಂದು ಇನ್ನೊಂದು ಸುಳ್ಳು ಆರೋಪ ಮಾಡಿದ್ದಾರೆ. ಡಿಕೆಶಿಯವರೇ, ಹಿಜಬ್ ವಿವಾದ ಮುಗಿಯುವವರೆಗೆ ಇನ್ನೆಷ್ಟು ಸುಳ್ಳು ಹೇಳುತ್ತೀರಿ? ಇದುವರೆಗೆ ಇಲ್ಲದ ಹಜಬ್ ವಿವಾದವನ್ನು ಸೃಷ್ಟಿಸಲು ವಿದ್ಯಾರ್ಥಿನಿಯರಿಗೆ ಹಿಜಬ್ ಪೂರೈಕೆ ಮಾಡಿದ್ದು ಕೆಪಿಸಿಸಿ ಕಚೇರಿಯಿಂದಲೇ?. ಇದನ್ನೂ ಓದಿ: ನಾನು ಭಯ ಯಾಕೆ ಪಡಬೇಕು, ಧರ್ಮ ಪಾಲನೆ ಮಾಡಿದ್ದೇನೆ: ಮಂಡ್ಯ ವಿದ್ಯಾರ್ಥಿನಿ
Advertisement