ಬೆಳಗಾವಿ: ಹಿಜಬ್ ಕುರಿತು ಹೈಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟವಾಗಿದ್ದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್ ಸ್ವಾಗತಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಗೊತ್ತಿದ್ದರೂ ಹಿಜಬ್ ಪರ ನಿಂತು ಕರ್ನಾಟಕದಲ್ಲಿ ಕಾಂಗ್ರೆಸ್ ಅಶಾಂತಿ ನಿರ್ಮಾಣ ಮಾಡುವ ಪಯತ್ನ ಮಾಡುತ್ತಿದ್ದಾರೆ. ಅಶಾಂತಿ ನಿರ್ಮಾಣ ಮಾಡುವ ಪ್ರಯತ್ನ ಮಾಡಿದ ಸಿಎಫ್‍ಐ ಕೆಲ ವಿದ್ಯಾರ್ಥಿ ಸಂಘಟನೆಗಳ ಜೊತೆ ಕಾಂಗ್ರೆಸ್ ಸಹ ಒಂದು. ಹೀಗಾಗಿ ಇನ್ನಾದರೂ ಕಾಂಗ್ರೆಸ್‍ಗೆ ಬುದ್ದಿ ಬರಲಿ ಅಂತ ದೇವರಲ್ಲಿ ಬೇಡಿಕೊಳ್ಳತ್ತೇನೆ ಎಂದರು. ಇದನ್ನೂ ಓದಿ: ಮಹಿಳೆಯರು ಎಲ್ಲಿ, ಏನು ಬೇಕಾದರೂ ಧರಿಸಬಹುದು, ಆದರೆ…: ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ
ಇವತ್ತು ಹೈಕೋರ್ಟ್ ತನ್ನ ನಿರ್ಣಯ ಹೇಳಿದೆ. ಹಿಜಬ್ ಪ್ರಕರಣ ಮಾಡೋರಿಗೆ ನೇರ ಸಂದೇಶ ಹೋಗಿದೆ. ಅದಕ್ಕಿಂತ ಹೆಚ್ಚು ಕಾಂಗ್ರೆಸ್ ನವರಿಗೆ ಸಂದೇಶ ಹೋಗಿದೆ. ಒಂದು ಸಮಾಜವನ್ನು ಎತ್ತಿ ಕಾನೂನು ವಿರುದ್ಧವಾಗಿ ತಲೆಯಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದರು. ಇದ್ದಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ ಎಂದು ಹೇಳಿದರು. ಇದನ್ನೂ ಓದಿ: ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್
ಹಿಜಬ್ ಪ್ರಕರಣ ಪ್ರಾರಂಭವಾದಾಗಿನಿಂದ ಹಿಂದೂತ್ವ ಸಂಘಟನೆ, ಹಿಂದೂಗಳ ಬಗ್ಗೆ ಅನಾಚಾರ ಮಾಡುವ ಕೆಲಸ ಕಾಂಗ್ರೆಸ್ ಪ್ರಾರಂಭ ಮಾಡಿತ್ತು. ಅದಕ್ಕೆ ಇವತ್ತು ಹೈಕೋರ್ಟ್ ಉತ್ತರ ಕೊಟ್ಟಿದೆ. ಇನ್ನಾದರೂ ಹೈಕೋರ್ಟ್ ಆದೇಶ ಪಾಲನೆ ಮಾಡಬೇಕು. ಹಿಜಾಬ್ ಅಂತ ಘೋಷನೆ ಕೂಗುವವರ ಜೊತೆ ಕಾಂಗ್ರೆಸ್ ಸಹ ಆದೇಶ ಪಾಲನೆ ಮಾಡಬೇಕು ಎಂದರು.