ಕೋಲಾರ: ಹಿಜಬ್ ಮತ್ತು ಕೇಸರಿ ಧಾರಣೆ ಕುರಿತು ಮಕ್ಕಳಲ್ಲಿ ವಿಷ ಬೀಜ ಬಿತ್ತನೆ ಮಾಡಲಾಗುತ್ತಿದೆ. ಇದು ದೇಶಕ್ಕೆ ಮಾರಕ ಎಂದು ಸಚಿವ ಮುನಿರತ್ನ ಕಳವಳ ವ್ಯಕ್ತಪಡಿಸಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಬ್ ಸಂಬಂಧ ಕೆಲವರು ರಾಜಕೀಯ ಮಾಡಲು ಹೊರಟ್ಟಿದ್ದಾರೆ. ರಾಜಕಾರಣ ಜನ ಸೇವೆಗೆ ಇರಬೇಕು. ಅದು ಬಿಟ್ಟು ಇಂತಹ ವಿಚಾರಗಳಲ್ಲಿ ರಾಜಕಾರಣ ಮಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶಕ್ಕೂ ಹಿಜಬ್ ವಿವಾದ ಎಂಟ್ರಿ – ನಿಷೇಧ ಮಾಡ್ತೀವಿ ಎಂದ ಶಿಕ್ಷಣ ಸಚಿವ
Advertisement
Advertisement
ಇಂತಹ ವಿಚಾರವನ್ನು ಬಳಸಿಕೊಳ್ಳುವವರು ಪಾಪಿಗಳು. ಈ ಬೆಳವಣಿಗೆ ದೇಶಕ್ಕೆ ಮಾರಕವಾಗಿದೆ. ಮಕ್ಕಳಲ್ಲಿ ಬೇಧ-ಬಾವ ಮಾಡ ಬಾರದು. ಇದು ಹೀಗೆ ಮುಂದುವರಿದರೆ ದೇಶಕ್ಕೆ ದೊಡ್ಡ ಸಂಚಕಾರವಾಗಲಿದೆ. ಈ ಬಗ್ಗೆ ಬುದ್ದಿಜೀವಿಗಳು ಅಲೋಚನೆ ಮಾಡಬೇಕು. ಮಕ್ಕಳ ಮನಸ್ಸಲ್ಲಿ ವಿಷ ಬಿತ್ತಬೇಡಿ ಎಂದು ತಿಳಿಸಿದ್ದಾರೆ.
Advertisement
ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ಕೊಡಬೇಕು. ಇಂತಹ ವಿಚಾರಕ್ಕೆ ಬೆಂಬಲ ಕೊಟ್ಟರೆ ತಾರತಮ್ಯ ಮಾಡಿದಂತೆ. ಎಲ್ಲರೂ ಸಹ ಸಮವಸ್ತ್ರವನ್ನು ಪಾಲನೆ ಮಾಡಬೇಕು. ಇದನ್ನು ಹೀಗೆ ಮುಂದುವರಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ. ಹಿಜಬ್ ಮತ್ತು ಕೇಸರಿ ಧಾರಣೆ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್-ಕೇಸರಿ ವಿವಾದ ತಣ್ಣಗಾಗಿಸುವ ಪ್ರಯತ್ನ ರಾಜ್ಯ ಸರ್ಕಾರ ಮಾಡಲಿ: ಸತೀಶ್ ಜಾರಕಿಹೊಳಿ
Advertisement
ಈ ಸಂಬಂಧ ತಿಳಿವಳಿಕೆ ನೀಡಬೇಕೇ ಹೊರತು, ಯಾರು ಸಹ ಪ್ರೋತ್ಸಾಹ ಮಾಡಬಾರದು. ಆಸ್ಪತ್ರೆಗಳಲ್ಲಿ ರೋಗಿಗಳಿಗೂ ಸಹ ಒಂದೇ ತರಹದ ಯೂನಿಫಾರ್ಮ್ ನೀಡಲಾಗುತ್ತದೆ. ಇದರ ಅರ್ಥ, ಎಲ್ಲಾರೂ ಒಟ್ಟಾಗಿ ಇರಬೇಕು ಎಂಬುದಾಗಿದೆ. ಹಾಗೆಯೇ ಶಾಲೆಯಲ್ಲಿ ಸಮವಸ್ತ್ರಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.