InternationalLatestLeading NewsMain Post

ಹಿಜಬ್‌ ಕಡ್ಡಾಯ ಖಂಡಿಸಿ ಬೀದಿಗಿಳಿದ ಇರಾನ್‌ ಮಹಿಳೆಯರು

Advertisements

ಟೆಹರಾನ್‌: ಹಿಜಬ್‌ ಕಡ್ಡಾಯಗೊಳಿಸಿದ ಸರ್ಕಾರದ ಆದೇಶವನ್ನು ಖಂಡಿಸಿ ಇರಾನ್‌ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಈಶಾನ್ಯ ಇರಾನ್‌ನ ಮಶ್ಹದ್ ನಗರದ ಡೆಪ್ಯೂಟಿ ಪ್ರಾಸಿಕ್ಯೂಟರ್, ಮೆಟ್ರೋ, ಸರ್ಕಾರಿ ಕಚೇರಿ, ಬ್ಯಾಂಕ್‌ಗಳ ಪ್ರವೇಶಕ್ಕೆ ಹಿಜಬ್‌ ಕಡ್ಡಾಯಗೊಳಿಸಿ ಆದೇಶ ಪ್ರಕಟಿಸಿದ್ದರು. ಈ ನಿರ್ಧಾರಕ್ಕೆ ನಗರದ ಮೇಯರ್ ವಿರೋಧ ವ್ಯಕ್ತಪಡಿಸಿದ್ದರೂ ಕೊನೆಗೆ ಅನುಮತಿ ನೀಡಿದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: ಸಿದ್ದರಾಮೋತ್ಸವ ಮಾದರಿಯಲ್ಲೇ ಶಿವಕುಮಾರೋತ್ಸವ ಮಾಡಿ – ಡಿಕೆಶಿ ಶಿಷ್ಯನಿಂದ ಪತ್ರ

ಜುಲೈ 12 ರಂದು ಸರ್ಕಾರ “ಹಿಜಬ್‌ ಮತ್ತು ಪರಿಶುದ್ಧತೆ ದಿನ”ವನ್ನಾಗಿ ಆಚರಿಸಲು ಕರೆ ನೀಡಿತ್ತು. ಆದರೆ ಮಹಿಳೆಯರು ಈ ಆಚರಣೆಯನ್ನು ಖಂಡಿಸಿ ಸಾರ್ವಜನಿಕವಾಗಿ ಹಿಜಬ್‌ ತೆಗೆದು ಪ್ರತಿಭಟನೆ ನಡೆಸಿದ್ದಾರೆ.#No2hijab ಹ್ಯಾಶ್‌ಟ್ಯಾಗ್‌ ಬಳಸಿ ಇರಾನಿ ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ. ಇದನ್ನೂ ಓದಿ: ಮುಂದಿನ ವಾರ ಸೂಕ್ತ ಪೀಠದಲ್ಲಿ ಹಿಜಬ್ ಅರ್ಜಿ ವಿಚಾರಣೆ – ಸುಪ್ರೀಂಕೋರ್ಟ್

ಹಿಜಬ್‌ ಕಾನೂನು ಹೇಗಿದೆ?
1979ರ ಇಸ್ಲಾಮಿಕ್ ಕ್ರಾಂತಿಯ ನಂತರ ರಚಿಸಲಾದ ಇರಾನಿನ ಕಾನೂನಿನ ಪ್ರಕಾರ 9 ವರ್ಷ ಮೀರಿದ ಎಲ್ಲ ಹುಡುಗಿಯರು/ಮಹಿಳೆಯರು ಹಿಜಬ್‌ ಧರಿಸುವುದು ಕಡ್ಡಾಯ. ಈ ಕಾನೂನು ಉಲ್ಲಂಘನೆ ಮಾಡಿದರೆ ಭಾರೀ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ. 2017 ರಿಂದ 2019ರ ಅವಧಿಯಲ್ಲಿ ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಹಿಜಬ್‌ ಕಡ್ಡಾಯ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯ ಬಳಿಕ 2019ರಲ್ಲಿ ಸಾರ್ವಜನಿಕವಾಗಿ ಹಿಜಬ್‌ ತೆಗೆದು ವೀಡಿಯೋ ಮಾಡಿದರೆ  10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ.

Live Tv

Leave a Reply

Your email address will not be published.

Back to top button