ನವದೆಹಲಿ: ಜಿಪಿಎಸ್ ಆಧಾರಿತ ಟೋಲ್ (Satellite-based Tolling) ವ್ಯವಸ್ಥೆಯ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಸ್ಪಷ್ಟನೆ ನೀಡಿದ್ದು, ಸದ್ಯ ಚಾಲ್ತಿಯಲ್ಲಿರುವ ಫಾಸ್ಟ್ಯಾಗ್ (FASTag) ಟೋಲ್ ವ್ಯವಸ್ಥೆಯೇ ಮುಂದುವರೆಯಲಿದೆ.
Clarification on Launch of Satellite-based Tolling System from 1st May 2025
🔰 Some sections of the media have reported that a Satellite-based Tolling System will be launched from 1st May 2025 and will replace the existing #FASTag-based toll collection system
🔰 This is to…
— PIB India (@PIB_India) April 18, 2025
ಮೇ 1ರಿಂದ ಜಿಪಿಎಸ್ ಆಧಾರಿತ ಫಾಸ್ಟ್ಯಾಗ್ ಟೋಲ್ ಇರಲಿದೆ ಎಂಬ ಸುದ್ದಿಯು ಹರಿದಾಡಿತ್ತು. ಈ ವರದಿಯನ್ನು ತಳ್ಳಿ ಹಾಕಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು, ಈ ರೀತಿಯ ಯಾವುದೇ ಚಿಂತನೆ ಇಲ್ಲ. ಸದ್ಯ ಫಾಸ್ಟ್ಯಾಗ್ ಟೋಲ್ ವ್ಯವಸ್ಥೆಯೇ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ನಿನ್ ಜೊತೆ ಮಲ್ಕೋಬೇಕು ಬಾ – ಟೀಂ ಇಂಡಿಯಾ ಮಾಜಿ ಆಟಗಾರ ಬಂಗಾರ್ ಪುತ್ರಿಗೆ ಕ್ರಿಕೆಟಿಗರಿಂದ ಲೈಂಗಿಕ ಕಿರುಕುಳ
ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆ ಬಗ್ಗೆ ಸಲಹೆಗಳು ಬಂದಿವೆ. ಆದರೆ ಅದನ್ನು ಜಾರಿಗೆ ತರುತ್ತಿಲ್ಲ. ಕೆಲವು ಕಡೆ ಪ್ರಯೋಗಿಕವಾಗಿ ಎನ್‌ಪಿಆರ್ ಫಾಸ್ಟ್ಯಾಗ್ (NPR FASTag) ಆಳವಡಿಕೆಗೆ ಚಿಂತನೆ ಮಾಡಲಾಗುತ್ತಿದೆ. ನಂಬರ್ ಪ್ಲೇಟ್ ಆಧಾರಿತ ಫಾಸ್ಟ್ಯಾಗ್ ಇದಾಗಿದ್ದು, ಇದರ ಸಾಧಕ ಭಾದಕಗಳನ್ನ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎನ್ನುವ ಮೂಲಕ ವರದಿಯನ್ನು ತಳ್ಳಿಹಾಕಿದೆ.