ಚಾಮರಾಜನಗರ: ಅಂಗಡಿಗಳ ಮುಂದೆ ರೇಷನ್ ಗಾಗಿ ಕ್ಯೂ ನಿಂತಿರುವುದನ್ನು ನೀವು ನೋಡಿರಬಹುದು. ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆ ಮುಂದೆ ಕ್ಯೂ ನಿಂತಿರೋದನ್ನು ನೋಡಿರ್ತಿರಿ. ಆದ್ರೆ ಮದ್ಯಕ್ಕಾಗಿ ಕ್ಯೂ ನಿಂತಿರೋದನ್ನ ನೋಡಿದ್ದೀರಾ..?
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹೆದ್ದಾರಿಗಳಲ್ಲಿ ಮದ್ಯ ಮಾರಾಟವನ್ನು ಬಂದ್ ಆಗಿದ್ದೆ ತಡ, ಈ ಹಿನ್ನೆಲೆಯಲ್ಲಿ ಎಣ್ಣೆ ಗಾಗಿ ಮದ್ಯಪ್ರಿಯರು ಸರತಿ ಸಾಲಿನಲ್ಲಿ ನಿಂತು ಮದ್ಯವನ್ನು ಕೊಂಡುಕೊಳ್ಳುತ್ತಿದ್ದಾರೆ.
ಸದ್ಯ ಇಂತಹ ದೃಶ್ಯ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ವೈನ್ ಶಾಪ್ ನಲ್ಲಿ ಕಂಡು ಬಂದಿದೆ. ಕೋರ್ಟ್ ತೀರ್ಪಿನಿಂದ ಬಾರ್ ಗಳು ಬಂದಾಗಿರುವ ಹಿನ್ನೆಲೆಯಲ್ಲಿ ಬಹಳಷ್ಟು ಜನರು ಅಲ್ಲಿ ಇಲ್ಲಿ ಇರುವ ಒಂದೆರಡು ಬಾರ್ ಗಳಿಗೆ ಮುಗಿ ಬಿದ್ದು ಮದ್ಯವನ್ನ ಕೊಂಡುಕೊಳ್ಳುತ್ತಿದ್ದಾರೆ.