Connect with us

ಬಿಬಿಎಂಪಿ ಬಜೆಟ್: ಆಸ್ತಿಗಳ ಡಿಜಿಟಲೀಕರಣ, ಕಸಕ್ಕಾಗಿ 600 ಕೋಟಿ ರೂ., ರಸ್ತೆ ಅಗೆದರೆ 10 ಲಕ್ಷ ರೂ. ದಂಡ

ಬಿಬಿಎಂಪಿ ಬಜೆಟ್: ಆಸ್ತಿಗಳ ಡಿಜಿಟಲೀಕರಣ, ಕಸಕ್ಕಾಗಿ 600 ಕೋಟಿ ರೂ., ರಸ್ತೆ ಅಗೆದರೆ 10 ಲಕ್ಷ ರೂ. ದಂಡ

ಬೆಂಗಳೂರು: ಬಿಬಿಎಂಪಿಯಲ್ಲಿ ಇಂದು 2017-18ನೇ ಸಾಲಿನ ಆಯವ್ಯಯ ಮಂಡನೆಯಾಗಿದ್ದು, 9241 ಕೋಟಿ ಗಾತ್ರದ ಬಜೆಟನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿಸಮಿತಿ ಅಧ್ಯಕ್ಷ ಗುಣಶೇಖರ್ ಮಂಡಿಸಿದ್ದಾರೆ. ಬಜೆಟ್‍ನ ಹೈಲೈಟ್ಸ್ ಹೀಗಿದೆ:

ಬಜೆಟ್‍ನಲ್ಲಿ ಬಿಬಿಎಂಪಿ ತನ್ನ ನಿರೀಕ್ಷಿತ ಆದಾಯದ ಮೂಲಗಳನ್ನು ಪ್ರಕಟಿಸಿದೆ. ಬಿಬಿಎಂಪಿ ಆದಾಯದ ಮೂಲಗಳು ಹೀಗಿದೆ.
ತೆರಿಗೆ ಆದಾಯ – 2681 ಕೋಟಿ ರೂ.
ತೆರಿಗೆಯೇತರ ಆದಾಯ – 1509 ಕೋಟಿ ರೂ.
ರಾಜ್ಯ ಸರ್ಕಾರದ ಅನುದಾನ – 4249 ಕೋಟಿ ರೂ.
ಬಾಕಿ ಮತ್ತು ಮುಟ್ಟುಗೋಲಿನಿಂದ ಆದಾಯ – 802 ಕೋಟಿ ರೂ.
ಒಟ್ಟು – 9243.41 ಕೋಟಿ

ಇಂದಿನ ಬಜೆಟ್‍ನಲ್ಲಿ ಮೇಯರ್ ಫಂಡ್ 150 ಕೋಟಿ ರೂ. ಹಾಗೂ ನಗರ ಅಭಿವೃದ್ಧಿ ಸಚಿವರ ಫಂಡ್‍ಗೆ 200 ಕೋಟಿ ರೂ. ಮೀಸಲಿಡಲಾಗಿದೆ. ಬೆಂಗಳೂರು ಆಸ್ತಿಗಳಿಗೆ ಡಿಜಿಟಲ್ ಸಂಖ್ಯೆ ನೀಡಲು ತೀರ್ಮಾನ ಮಾಡಿದೆ. ಬಿಬಿಎಂಪಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಹೈಟೆಕ್ ಪಾರ್ಕಿಂಗ್ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ. ಮಾತ್ರವಲ್ಲದೇ ರೋಡ್ ಕಟ್ಟಿಂಗ್ ಶುಲ್ಕ ಹೆಚ್ಚಳ ಮಾಡಿದ್ದು, ಅನಧಿಕೃತ ರೋಡ್ ಕಟ್ಟಿಂಗ್ ಮಾಡಿದ್ರೆ 10 ಲಕ್ಷ ರೂ. ದಂಡ ವಿಧಿಸಲು ತೀರ್ಮಾನಿಸಲಾಗಿದೆ. ಇನ್ನು ಆಸ್ತಿ ತೆರಿಗೆಯಲ್ಲಿ ಯಾವುದೇ ಹೆಚ್ಚಳವಿಲ್ಲ.

ಮೂಲಭೂತ ಸೌಲಭ್ಯಗಳು:

* 690 ಕೋಟಿ ರೂ. ವೆಚ್ಚದಲ್ಲಿ 80 ಕಿ.ಮೀ ಆಯ್ದ 43 ಪ್ರಮುಖ ರಸ್ತೆಗಳು ಶ್ರೇಷ್ಠ ದರ್ಜೆಗೆ.
* 250 ಕೋಟಿ ರೂ. ವೆಚ್ಚದಲ್ಲಿ 3ನೇ ಹಂತದ ಟೆಂಡರ್ ಶ್ಯೂರ್ ಮಾದರಿಯ 25 ಕಿ.ಮೀ ಉದ್ದದ 25 ಅಂತರ್ ಸಂಪರ್ಕ ರಸ್ತೆ.
* 12 ಕಾರಿಡಾರ್‍ಗಳನ್ನ ಗುರುತಿಸಿ 150 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ.
* 200 ಕಿ.ಮೀ ಉದ್ದದ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ 200 ಕೋಟಿ ರೂ.
* ಆಯ್ದ 9 ವಾಹನ ದಟ್ಟಣೆ ಜಂಕ್ಷನ್‍ಗಳಲ್ಲಿ ಗ್ರೇಡ್ ಸೆಪರೇಟರ್ ನಿರ್ಮಾಣಕ್ಕೆ 421 ಕೋಟಿ ರೂ.
* ಮೇಲ್ಸೇತುವೆ ಮತ್ತು ಕೆಳ ಸೇತುವೆ ನಿರ್ಮಾಣಕ್ಕೆ 150 ಕೋಟಿ ರೂ.
* ಬೃಹತ್ ಮಳೆ ನೀರು ಮತ್ತು ಚರಂಡಿಗಳ ಅಭಿವೃದ್ಧಿಗೆ 300 ಕೋಟಿ ರೂ.
* ಸಂಚಾರಿ ಇಂಜಿನಿಯರಿಂಗ್ ಕಾಮಗಾರಿಗಳಿಗೆ 200 ಕೋಟಿ ರೂ.
* ಸ್ಕೈವಾಕ್‍ಗಳ ನಿರ್ಮಾಣಕ್ಕೆ 80 ಕೋಟಿ ರೂ.
* ಸಾವಿರ ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ 50 ಕೋಟಿ ರೂ.
* 198 ವಾರ್ಡ್‍ಗಳಲ್ಲಿ ನಮ್ಮ ಕ್ಯಾಂಟೀನ್ ನಿರ್ಮಾಣ 100 ಕೋಟಿ ರೂ. : ಬೆಳಗಿನ ಉಪಹಾರ 5 ರೂಪಾಯಿ, ಮಧ್ಯಾಹ್ನ ಹಾಗೂ ರಾತ್ರಿ ಉಪಹಾರಕ್ಕೆ 10 ರೂಪಾಯಿ

* ಸ್ವಚ್ಛ ಭಾರತ್ ಅಭಿಯಾನಕ್ಕೆ 10 ಕೋಟಿ ರೂ.

* ಅಮೃತ್ ಯೋಜನೆಯಡಿ ಉದ್ಯಾನವನಗಳಿಗೆ 10 ಕೋಟಿ
* ಆರೋಗ್ಯ ನಗರ ಅಭಿಯಾನದಡಿ 73 ಕೋಟಿ ರೂ.
* ಕೆರೆಗಳ ಅಭಿವೃದ್ಧಿಗೆ 50 ಕೋಟಿ ರೂ.
* ಭೂಸ್ವಾಧೀನ ಹಾಗೂ ರಸ್ತೆಗಳ ಅಗಲೀಕರಣಕ್ಕೆ 60 ಕೋಟಿ ರೂ.
* ಹೊಸ ವಲಯದಲ್ಲಿ 210 ಉದ್ಯಾನವನ ಅಭಿವೃದ್ಧಿ
* ನಗರದ ಬೀದಿ ದೀಪ ಎಲ್‍ಇಡಿಯಾಗಿ ಪರಿವರ್ತನೆ
* ಮರಗಳ ಸಮೀಕ್ಷೆಗಾಗಿ 4 ಕೋಟಿ ರೂ.
* ಕೆರೆ ನಿರ್ವಹಣೆಗೆ 5 ಕೋಟಿ ರೂ.

* ರುದ್ರ ಭೂಮಿ ವಿದ್ಯುತ್ ಚಿತಾಗಾರದಲ್ಲಿ ಸ್ವಚ್ಛತೆ ಕಾಪಾಡುವುದು.
* ಅಲ್ಪಾವಧಿ – ದೀರ್ಘಾವಧಿ ಕಾಮಗಾರಿ ಯೋಜನೆ ಜಾರಿ.
* ನಗರದ ಹಸಿರು ಉದ್ಯಾನವನ ಕೆರೆಗಳ ಪುನಶ್ಚೇತನ.
* ಗಣಕೀಕೃತ ಇ ಖಾತಾ ನೊಂದಣಿ.
* ಅನ್ ಲೈನ್ ನಲ್ಲಿ ಕಟ್ಟಡ ನಕ್ಷೆ ಪರಿಶೀಲನೆ ಹಾಗೂ ಅನುಮೋದನೆ ಜಾರಿ.
* ಡಿಜಿಟಲ್ ಮನೆ ನಂಬರ್ ಜಾರಿಗೆ ನಿರ್ಣಯ.

ಆರೋಗ್ಯ ವಿಭಾಗಕ್ಕೆ ಒಟ್ಟು 23 ಕೋಟಿ:

* ಮಧ್ಯಮ ವರ್ಗದ ಹೃದಯ ರೋಗಿಗಳಿಗೆ ಸ್ಟೆಂಟ್ ಅಳವಡಿಕೆಗೆ 4 ಕೋಟಿ.
* ಹಿರಿಯ ನಾಗರೀಕರಿಗಾಗಿ ಜನರಲ್ ಓಪಿಡಿ ಮತ್ತು ಡೇ ಕೇರ್ ಸೆಂಟರ್, ಕ್ಯಾನ್ಸರ್ ತಪಾಸಣೆಗೆ ಆರು ಆಸ್ಪತ್ರೆಗಳಿಗೆ ಮಮೊಗ್ರೋ ಮಷಿನ್‍ಗಳ ಅಳವಡಿಕೆ 1 ಕೋಟಿ ರೂ.
* 40 ಕೋಟಿ ರೂ. ವೆಚ್ಚದಲ್ಲಿ ಕನಕಪಾಳ್ಯದಲ್ಲಿ ಮಲ್ಟಿ ಸ್ಪೆಷಲ್ ಆಸ್ಪತ್ರೆ ನಿರ್ಮಾಣ.
* 20 ವಿಧಾನಸಭಾ ಕ್ಷೇತ್ರಗಳಲ್ಲಿ 20 ಡಯಾಲಿಸಿಸ್ ಕೇಂದ್ರಗಳು- 30 ಕೋಟಿ ರೂ.
* ಬೀದಿ ನಾಯಿಗಳ ನಿಯಂತ್ರಣಕ್ಕೆ 3 ಕೋಟಿ ರೂ.
* ಪ್ರಾಣಿಗಳನ್ನ ಹಿಡಿಯೋದು, ಸತ್ತ ಪ್ರಾಣಿಗಳ ಶವ ಸಾಗಿಸೋದಕ್ಕೆ 3 ಕೋಟಿ ರೂ.
* ಸಂಚಾರಿ ಆರೋಗ್ಯ ಘಟಕಗಳನ್ನ ಸ್ಥಾಪಿಸಲು 3 ಕೋಟಿ ರೂ.

ಶಿಕ್ಷಣ ವಿಭಾಗಕ್ಕೆ ಒಟ್ಟು 89.36 ಕೋಟಿ:

* ಹೊಸ ಶಾಲಾ ಕಾಲೇಜುಗಳ ನಿರ್ಮಾಣಕ್ಕೆ 20 ಕೋಟಿ ರೂ.
* ಶಾಲಾ ಕಾಲೇಜುಗಳ ದುರಸ್ಥಿಗೆ 15 ಕೋಟಿ ರೂ.
* ಸಿಸಿಟಿವಿ ಅಳವಡಿಕೆ ಅಗ್ನಿ ಶಾಮಕ ಉಪಕರಣ ಪ್ರಥಮ, ಚಿಕಿತ್ಸಾ ಸಲಕರಣೆಗಳು ಮತ್ತು ಕುಡಿಯಲು ನೀರು ಒದಗಿಸುವಿಕೆ.
* ಪಾಲಿಕೆ ಶಾಲಾ ಕಾಲೇಜು ಮಕ್ಕಳಿಗೆ ಆರೋಗ್ಯ ವಿಮೆ 1.75 ಕೋಟಿ ರೂ.
* ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷಾ ಶುಲ್ಕ ಪಾವತಿ- 15 ಲಕ್ಷ ರೂ.
* ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ಕಂಪ್ಯೂಟರ್ ಕೋರ್ಸ್ – 2 ಕೋಟಿ ರೂ.
* 32 ಪ್ರೌಢಶಾಲೆಗಳಲ್ಲಿ ಟೆಲಿ ಎಜುಕೇಷನ್.
* ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಕೆಗೆ 1 ಕೋಟಿ ರೂ.
* ಕ್ರೀಡಾ ಸಾಮಾಗ್ರಿಗಳ ವಿತರಣೆ 50 ಲಕ್ಷ ರೂ.

ಕಲ್ಯಾಣ ಕಾರ್ಯಕ್ರಮಗಳಿಗಾಗಿ 503.2 ಕೋಟಿ ರೂ.:

* ಒಂಟಿ ಮನೆ ಯೋಜನೆಗೆ 124 ಕೋಟಿ ರೂ.
* ಎಸ್‍ಸಿ ಎಸ್‍ಟಿ ವಾಸಿಸುವ ಪ್ರದೇಶಾಭಿವೃದ್ಧಿಗೆ 167 ಕೋಟಿ ರೂ.
* ಪೌರ ಕಾರ್ಮಿಕರ ಮಕ್ಕಳ ಕಲ್ಯಾಣಾಭಿವೃದ್ಧಿಗೆ 29.50 ಕೋಟಿ ರೂ.
* ಹಿಂದುಳಿದ ಹಾಗೂ ಅಲ್ಪ ಸಂಖ್ಯಾತರ ಮನೆ ನಿರ್ಮಾಣಕ್ಕೆ 75 ಕೋಟಿ ರೂ.
* ಅಲ್ಪಸಂಖ್ಯಾತರ ಕಲ್ಯಾಣಕ್ಕೆ 15 ಕೋಟಿ ರೂ.
* ಹಿರಿಯ ನಾಗರೀಕರ ಕಲ್ಯಾಣ ಕಾರ್ಯಕ್ರಮಗಳಿಗೆ 1 ಕೋಟಿ ರೂ.
* ಟೈಲರಿಂಗ್ ಮತ್ತು ಎಂಬ್ರಾಯ್ಡರಿಂಗ್ ಕಲಿಕೆಗೆ ಸ್ವಂತ ಕಟ್ಟಡ ನಿರ್ಮಿಸಲು 4 ಕೋಟಿ ರೂ.
* ಟೈಲರಿಂಗ್ ಯಂತ್ರಗಳಿಗೆ 8 ಕೋಟಿ ರೂ.
* ಸೈಕಲ್ ವಿತರಣೆಗಾಗಿ 4 ಕೋಟಿ ರೂ.

ಘನತ್ಯಾಜ್ಯ ನಿರ್ವಹಣೆ ವಿಭಾಗಕ್ಕೆ ಒಟ್ಟು 600 ಕೋಟಿ ರೂ.:

* ನಮ್ಮ ಕಸ, ನಮ್ಮ ಜವಾಬ್ದಾರಿ ಘೋಷವಾಕ್ಯದೊಂದಿಗೆ ಕಾಂಪೋಸ್ಟ್ ಕೇಂದ್ರಗಳನ್ನ ತೆರೆಯಲು ಕ್ರಮ.
* ಕಸದ ಬುಟ್ಟಿ ಮತ್ತು ಚೀಲ ನೀಡಲು 5 ಕೋಟಿ ರೂ.
* ಎಲ್ಲಾ ವಾರ್ಡ್‍ಗಳಲ್ಲೂ ಕಾಂಪೋಸ್ಟ್ ಸಂತೆ – 2 ಕೋಟಿ ರೂ.
* ಪ್ರತಿ ವಾರ್ಡ್ ಕಸ ನಿರ್ವಹಣೆಗೆ ಮಾರ್ಷಲ್‍ಗಳ ಸೇವೆ ಬಳಕೆ – 7 ಕೋಟಿ ರೂ.
* ಪೌರ ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ ನಿರ್ಮಾಣ ಮತ್ತು ನಿರ್ವಹಣೆ – 13 ಕೋಟಿ ರೂ.
* ಯಂತ್ರಗಳ ಮೂಲಕ ರಸ್ತೆ ಸ್ವಚ್ಛಗೊಳಿಸಲು 6 ಕೋಟಿ ರೂ.

ರುದ್ರಭೂಮಿ ಮತ್ತು ವಿದ್ಯುತ್ ಚಿತಾಗಾರಗಳ ಸಮಗ್ರ ಸುಧಾರಣೆಗೆ 168.50 ಕೋಟಿ ರೂ.:

* `ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ’ ಘೋಷವಾಕ್ಯದೊಂದಿಗೆ 125 ಕೋಟಿ ರೂ. ಅನುದಾನದಲ್ಲಿ ರುದ್ರಭೂಮಿಗಳ ಸುಧಾರಣೆ
* ಹೆಚ್ಚುವರಿ ಚಿತಾಗಾರ ನಿರ್ಮಾಣಕ್ಕೆ 15 ಕೋಟಿ ರೂ.
* ಮಾಜಿ ರಾಷ್ಟ್ರಪತಿ ನೀಲಂ ಸಂಜೀವ್ ರೆಡ್ಡಿ ಸಮಾಧಿ ನಿರ್ವಹಣೆಗೆ 1 ಕೋಟಿ ರೂ.
* ರುದ್ರಭೂಮಿಯಲ್ಲಿ ಸಸಿ ನೆಟ್ಟು ನಿರ್ವಹಣೆ ಮಾಡಲು 25 ಕೋಟಿ ರೂ.
* ರುದ್ರಭೂಮಿ ನೌಕರರ ಗೌರವ ಧನ ಹೆಚ್ಚಳಕ್ಕೆ ಕ್ರಮ.
* ವಿಲ್ಸನ್ ಗಾರ್ಡನ್ ರುದ್ರಭೂಮಿ ಸುಂದರೀಕರಣಕ್ಕೆ 1.20 ಕೋಟಿ ರೂ.
* ವಿದ್ಯುತ್ ಚಿತಾಗಾರಗಳ ನಿರ್ವಹಣೆಗೆ 1.30 ಕೋಟಿ ರೂ.

ಸಾರ್ವಜನಿಕ ವಲಯ ಕಾಮಗಾರಿಗಳು:
* ಹಳೇ ವಾರ್ಡ್‍ಗೆ 2 ಕೋಟಿ ರೂ. ಅನುದಾನ
* ಹೊಸ ವಾರ್ಡ್‍ಗಳಿಗೆ 3 ಕೋಟಿ ರೂ. ಅನುದಾನ

ಕುಡಿಯುವ ನೀರು ನಿರ್ವಹಣೆ:
* ಹಳೇ ವಾರ್ಡ್‍ಗಳಿಗೆ 15 ಲಕ್ಷ ರೂ. ಅನುದಾನ
* ಹೊಸ ವಾರ್ಡ್‍ಗಳಿಗೆ 40 ಕೋಟಿ ರೂ. ಅನುದಾನ

* ಪಾಲಿಕೆಯಲ್ಲಿ ಹೊಸ ವಲಯಗಳಲ್ಲಿ 12 ವಿವಾಹ ಸಮುದಾಯ ಭವನಗಳು 24 ಕೋಟಿ ರೂ.
* ಹಾಲಿ ಇರುವ ಸಮುದಾಯ ಭವನಗಳ ಸುಧಾರಣೆ 15 ಕೋಟಿ ರೂ.
* ವಾರ್ಡ್ ಕಚೇರಿಗಳ ನಿರ್ಮಾಣಕ್ಕೆ 10 ಕೋಟಿ ರೂ.
* ಸುವರ್ಣ ಪಾಲಿಕೆ ಸೌಧ ನಿರ್ಮಾಣಕ್ಕೆ 5 ಕೋಟಿ ರೂ.
* ಎಚ್‍ಎಂಟಿ ವಾರ್ಡ್‍ನಲ್ಲಿ ದೇವರಾಜು ಅರಸು ಕಲಾಕ್ಷೇತ್ರ ನಿರ್ಮಾಣಕ್ಕೆ ಭೂಸ್ವಾಧೀನಕ್ಕೆ 10 ಕೋಟಿ ರೂ.
* ಪಾಲಿಕೆ ಕೇಂದ್ರದಲ್ಲಿ ವಿಪತ್ತು ನಿರ್ವಹಣಾ ಘಟಕ ಸ್ಥಾಪಿಸಲು 1 ಕೋಟಿ ರೂ.
* 5 ಲಕ್ಷ ಬೀದಿ ದೀಪಗಳಿಗೆ ಎಲ್‍ಇಡಿ ಅಳವಡಿಕೆ.
* ಕೇಂದ್ರ ಕಚೇರಿ ಕೌನ್ಸಿಲ್ ಕಟ್ಟದ ವಿದ್ಯುತ್ ವ್ಯವಸ್ಥೆಯನ್ನ ಸೋಲಾರ್‍ಗೆ ಪರಿವರ್ತಿಸಲು 4 ಕೋಟಿ ರೂ.

Advertisement
Advertisement