DistrictsKalaburagiKarnatakaLatest
ರಣ ಬಿಸಿಲಿನ ಝಳಕ್ಕೆ 2 ದಿನದ ಹಿಂದೆ ಮದುವೆಯಾಗಿದ್ದ ಯುವಕ ಬಲಿ!

Advertisements
ಕಲಬುರಗಿ: ರಣ ಬಿಸಿಲಿನ ಝಳ ಕಲಬುರಗಿಯಲ್ಲಿ ಮೊದಲ ಬಲಿ ಪಡೆದಿದ್ದು, ಎರಡು ದಿನಗಳ ಹಿಂದೆ ಮದುವೆಯಾಗಿದ್ದ ಕಲಬುರಗಿ ನಗರದ ನಿವಾಸಿಯೊಬ್ಬರು ಸಾವನ್ನಪ್ಪಿದ್ದಾರೆ.
ಮಹ್ಮದ್ ಶರೀಫ್ ಮೃತ ಯುವಕ. ಕಲಬುರಗಿಯ ಎಮ್‍ಎಸ್‍ಕೆ ಮಿಲ್‍ನಲ್ಲಿ ಕೆಲಸ ಮಾಡುತ್ತಿದ್ದ ಮಹ್ಮದ್ ಶರೀಫ್ ಗುರುವಾರ ಮನೆಗೆ ಬಂದ ಮೇಲೆ ನೀರು ಕುಡಿದು ತಕ್ಷಣ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಕಲಬುರಗಿಯಲ್ಲಿ 41 ರಿಂದ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ತಾಪಮಾನ ಪ್ರತಿನಿತ್ಯ ಹೆಚ್ಚಳವಾಗುತ್ತಿದೆ. ಯುವಕನ ಸಾವಿನ ಕುರಿತು ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.