ಖ್ಯಾತ ಗಾಯಕ, ಮ್ಯೂಸಿಕ್ ಡೈರೆಕ್ಟರ್ ಆಗಿ ಗಮನ ಸೆಳೆದಿರುವ ಎ.ಆರ್. ರೆಹಮಾನ್ (A.R. Rahman) ಅವರು ತಮ್ಮ ಸಂಗೀತದ ಮೂಲಕವೇ ಅದೆಷ್ಟೋ ಸಿನಿಮಾಗಳನ್ನು ಗೆಲ್ಲಿಸಿದ್ದಾರೆ. ವಿಶ್ವಾದ್ಯಂತ ಅವರಿಗೆ ಖ್ಯಾತಿ ಇದೆ. ಇನ್ನೂ ಸ್ಟಾರ್ ಸಿಂಗರ್ಸ್ ಸೋನು ನಿಗಮ್, ಶ್ರೇಯಾ ಘೋಷಾಲ್ ಸೇರಿದಂತೆ ಮುಂತಾದರ ಸಂಭಾವನೆಗಿಂತಲೂ 15 ಪಟ್ಟು ಅಧಿಕ ಸಂಭಾವನೆಯನ್ನು ಎ.ಆರ್. ರೆಹಮಾನ್ ಪಡೆಯುತ್ತಾರೆ. ಒಂದು ಹಾಡು ಹಾಡಿದ್ರೆ, ಅದಕ್ಕೆ 3 ಕೋಟಿ ರೂ. ಸಂಭಾವನೆ ಚಾರ್ಜ್ ಮಾಡುತ್ತಾರೆ.
ಹೌದು, ಸಾಕಷ್ಟು ಸೂಪರ್ ಹಿಟ್ ಹಾಡುಗಳನ್ನು ಕೊಟ್ಟಿರುವ ಎ.ಆರ್. ರೆಹಮಾನ್ ಅವರು ಒಂದು ಸಾಂಗ್‌ಗೆ 3 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಎ.ಆರ್. ರೆಹಮಾನ್ ಅವರು ಪೂರ್ಣಾವಧಿ ಸಿಂಗರ್ ಅಲ್ಲ. ಸಂಗೀತ ನಿರ್ದೇಶಕನಾಗಿ ಅವರು ಬ್ಯುಸಿಯಾಗಿದ್ದಾರೆ. ಹಾಗಿದ್ದರೂ ಕೂಡ ಆಗಾಗ ಹಾಡುಗಳಿಗೆ ಮಾತ್ರ ಅವರು ಧ್ವನಿ ನೀಡುತ್ತಾರೆ. ಅವರಿಂದ ಒಂದು ಹಾಡು ಹಾಡಿಸಬೇಕು ಎಂದರೆ ನಿರ್ಮಾಪಕರು 3 ಕೋಟಿ ರೂ. ಸಂಭಾವನೆ ಚಾರ್ಜ್ ಮಾಡುತ್ತಾರೆ. ಇದನ್ನೂ ಓದಿ:ಸದ್ಯದಲ್ಲೇ ನನ್ನ ನಿಶ್ಚಿತಾರ್ಥ: ಮದುವೆಯಾಗಲಿರುವ ಹುಡುಗನ ಬಗ್ಗೆ ಸೋನು ಓಪನ್ ಟಾಕ್
ಇನ್ನೂ ಶ್ರೇಯಾ ಘೋಷಾಲ್, ಸುನಿಧಿ ಚೌಹಾಣ್, ಸೋನು ನಿಗಮ್ ಅವರು ಪ್ರತಿ ಹಾಡಿಗೆ ಹಲವು ಲಕ್ಷ ರೂ. ಚಾರ್ಜ್ ಮಾಡುತ್ತಾರೆ. ಹಾಗಿದ್ದರೂ ಅಪರೂಪಕ್ಕೆ ಹಾಡುವ ಎ.ಆರ್. ರೆಹಮಾನ್ ಸಂಭಾವನೆ ಕೇಳಿ ಬಾಲಿವುಡ್ ಮಂದಿ ಮತ್ತು ಫ್ಯಾನ್ಸ್ ದಂಗಾಗಿದ್ದಾರೆ.