ಬೆಂಗಳೂರು: ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳದ ಕಾರ್ಯವೈಖರಿ ವಿರುದ್ಧ ಹೈಕೋರ್ಟ್ ನ್ಯಾಯಮೂರ್ತಿ ಹೆಚ್‍ಪಿ ಸಂದೇಶ್ ಇವತ್ತು ಕೂಡ ಚಾಟಿ ಬೀಸಿದ್ದಾರೆ. ಇದುವರೆಗೂ ಎಸಿಬಿ ಹಾಕಿರುವ ಬಿ ರಿಪೋರ್ಟ್‍ಗಳ ಬಗ್ಗೆ ಸಹಿಯಿಲ್ಲದ ಅಪೂರ್ಣ ಮಾಹಿತಿ ನೀಡಿದ ಎಸಿಬಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
ಮೊದಲು 99 ಬಿ-ರಿಪೋರ್ಟ್‍ಗಳ ಮಾಹಿತಿ ನೀಡಿದ್ದ ಎಸಿಬಿ ಪರ ವಕೀಲರು ನಂತ್ರ ಅದನ್ನು 105ಕ್ಕೆ ಏರಿಸಿದ್ರು. ಆಗ ಸರಿಯಾಗಿ ಮಾಹಿತಿಯನ್ನು ಕೊಡ್ತಾ ಇಲ್ಲ. ನಾನು ಪದೇ ಪದೇ ಎಸಿಬಿಗೆ ಹೇಳ್ಬೇಕಾ…? ನನಗೆ ಎಲ್ಲಾ ಗೊತ್ತಿದೆ. ನೀವು ಇದರಲ್ಲಿ ಆಟ ಆಡ್ತಾ ಇದ್ದೀರಾ..? 2022ರ ಬಿ ರಿಪೋರ್ಟ್ ಎಲ್ಲಿ..? ನಾನು ಗರಂ ಆದ್ಮೇಲೆ ಮಂಜುನಾಥ್ ಮನೆ ಮೇಲೆ ರೇಡ್ ಮಾಡಿದ್ದೀರಿ..? ಮನೆಯಲ್ಲಿ ಏನು ಸಿಕ್ಕಿಲ್ಲವಂತಲ್ವಾ? ಅಷ್ಟಕ್ಕೂ ಡಿಸಿ ಮಂಜುನಾಥ್ ತಮ್ಮ ಚೇಂಬರ್‍ಗೆ ಹೇಗೆ ಖಾಸಗಿ ವ್ಯಕ್ತಿ ಬಿಟ್ಟುಕೊಂಡ್ರು.
Advertisement
Advertisement
ಪರ್ಸನಲ್ ಅಸಿಸ್ಟೆಂಟ್ ಮಹೇಶ್ ಮೂಲಕ ಡೀಲ್ ಮಾಡಿದ್ದಾರೆ. ಮಹೇಶ್ ನೇಮಕಾತಿ ಆದೇಶ ಎಲ್ಲಿದೆ ತೋರಿಸಿ. ಹಣ ಮಾಡುವ ಸಲುವಾಗಿಯೇ ಅವರನ್ನು ಸೇರಿಸಿಕೊಂಡಿದ್ದಾರೆ. ಸಾಕ್ಷ್ಯ ಸಿಕ್ಕಿದ ಬಳಿಕ ಅರೆಸ್ಟ್ ಮಾಡ್ಬೇಕು ಅಲ್ವಾ? ನಾವು ಹೇಳುವ ತನಕ ಏನ್ ಮಾಡ್ತಾ ಇದ್ರಿ..? ನೀವು ಅರೆಸ್ಟ್ ಮಾಡದೇ ಇದ್ದದ್ದಕ್ಕೆ ನಮಗೆ ಕೋಪ ಬಂತು ಎಂದಿದ್ದಾರೆ. ಇದನ್ನೂ ಓದಿ: ಭ್ರಷ್ಟಾಚಾರ ಸಾಬೀತು – ಸರ್ಕಾರಿ ಸೇವೆಯಿಂದ PDO ವಜಾ
Advertisement
ನನಗೆ ನಿಮ್ಮ ಎಡಿಜಿಪಿ ಬಗ್ಗೆ ವೈಯಕ್ತಿಕ ದ್ವೇಷ ಏನು ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಎಫ್‍ಐಆರ್ ರದ್ದು ಕೋರಿ ಐಎಎಸ್ ಮಂಜುನಾಥ್ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ್ದಾರೆ. ಜುಲೈ 11ಕ್ಕೆ ವಿಚಾರಣೆ ಮುಂದೂಡಿದ್ದಾರೆ. ಇದೇ ವೇಳೆ ಪಿಎಸ್‍ಐ ಹಗರಣದ ವಿಚಾರಣೆಯನ್ನು ಜುಲೈ 14ಕ್ಕೆ ಮುಂದೂಡಿದ್ದಾರೆ. ಇನ್ನು ತಮ್ಮನ್ನು ಟೀಕೆ ಮಾಡದಂತೆ ನಿರ್ಭಂದ ಕೋರಿ ಎಸಿಬಿ ಎಡಿಜಿಪಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸರ್ವಿಸ್ ರೆಕಾರ್ಡ್ ಕೇಳಿರುವ ಹೈಕೋರ್ಟ್ ಆದೇಶ ರದ್ದುಪಡಿಸಬೇಕು ಎಂದು ರಿಟ್ ಅರ್ಜಿ ಸಲ್ಲಿಸಿದ್ದಾರೆ.