ಭೋಪಾಲ್: ಕುಡಿದು ಗಲಾಟೆ ಮಾಡುವವರ ಸಂಖ್ಯೆ ಮಧ್ಯ ಪ್ರದೇಶದಲ್ಲಿ ಹೆಚ್ಚಾಗುತ್ತಿದ್ದು, ಈಗ ಯುವತಿಯೊಬ್ಬಳು ಕುಡಿದ ಮತ್ತಿನಲ್ಲಿ ಹೆದ್ದಾರಿಯಲ್ಲಿಯೇ ಸ್ನೇಹಿತರ ಜೊತೆ ರಾದ್ದಾಂತ ಮಾಡಿದ್ದಾಳೆ.
ಮಧ್ಯಪ್ರದೇಶದ ಸಿಹೋಲ್ ಹೆದ್ದಾರಿಯಲ್ಲಿ ಯುವತಿ ಕುಡಿದು ಸ್ನೇಹಿತರ ಜೊತೆ ರಾದ್ದಾಂತ ಮಾಡಿದ್ದಾಳೆ. ಸ್ನೇಹಿತರ ಜೊತೆ ಮಾತ್ರವಲ್ಲದೇ ಪೊಲೀಸರೊಂದಿಗೆ ಯುವತಿ ವಾಗ್ವಾದ ಮಾಡಿ ಅವರನ್ನು ತಳ್ಳಾಡಿ ಹೆದ್ದಾರಿಯಲ್ಲಿ ಹೈಡ್ರಾಮಾ ಮಾಡಿದ್ದಾಳೆ.
Advertisement
ಯುವತಿ ಹೈದರಾಬಾದ್-ಮಧ್ಯಪ್ರದೇಶ ಹೆದ್ದಾರಿಯಲ್ಲಿ ನಾಲ್ಕು ಹುಡುಗರ ಜೊತೆ ಕಾರಿನಲ್ಲಿ ಮದ್ಯ ಸೇವನೆ ಮಾಡಿ ಗಲಾಟೆ ಮಾಡುತ್ತಿದ್ದಳು. ಈ ಕುರಿತು ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಯುವತಿಯನ್ನು ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ನಶೆಯಲ್ಲಿ ಪ್ರಜ್ಞೆ ಕಳೆದುಕೊಂಡು ಯುವತಿ ಪೊಲೀಸರ ಮೇಲೆ ಹರಿಹಾಯ್ದಿದ್ದಾಳೆ. ಅಷ್ಟೇ ಅಲ್ಲದೇ ಪೊಲೀಸರನ್ನು ಅಸಭ್ಯವಾಗಿ ಬೈದಿದಿದ್ದಾಳೆ.
Advertisement
ಪೊಲೀಸರು ಎಷ್ಟೆ ಪ್ರಯತ್ನ ಮಾಡಿದರು ಯುವತಿಯನ್ನು ಸುಧಾರಿಸಲು ಸಾಧ್ಯವಾಗಿಲ್ಲ. ಯುವತಿಯನ್ನು ಮನವೊಲಿಸಲು ಪೊಲೀಸರು ಮುಂದಾಗಿದ್ದಾರೆ. ಆದರೆ ಯುವತಿ ಪೊಲೀಸರನ್ನೇ ತಳ್ಳಾಡಿದ್ದಾಳೆ. ಯುವತಿಯ ಈ ಹೈಡ್ರಾಮಾ ಸುಮಾರು 40 ನಿಮಿಷಗಳ ಕಾಲ ನಡೆದಿದೆ. ಈ ಹೈಡ್ರಾಮಾವನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.
Advertisement
ಕೊನೆಗೆ ಪೊಲೀಸರು ಯುವತಿಯನ್ನು ಬಲವಂತವಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv