ಕೊಲಂಬೋ: ತೀವ್ರ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾದಲ್ಲಿ (Sri Lanka) ಸದ್ಯಕ್ಕೆ ಪರಿಸ್ಥಿತಿಗಳು ಸರಿ ಹೋಗುವ ಲಕ್ಷಣಗಳು ಕಾಣುತ್ತಿಲ್ಲ. ಇತ್ತೀಚಿಗೆ ಅಸ್ತಿತ್ವಕ್ಕೆ ಬಂದ ಹೊಸ ಸರ್ಕಾರದ ವಿರುದ್ಧವೂ ಪ್ರಜೆಗಳು ಇದೀಗ ಆಕ್ರೋಶಗೊಂಡಿದ್ದಾರೆ.
Advertisement
ಅಧಿಕ ತೆರಿಗೆ, ಹಣದುಬ್ಬರ, ದರ ಹೆಚ್ಚಳದ ವಿರುದ್ಧ ಜನರು ಮತ್ತೆ ಸಿಡಿದೇಳುತ್ತಿದ್ದಾರೆ. ಕೊಲಂಬೋದಲ್ಲಿ (Colombo) ಬುಧವಾರ ಸಾವಿರಾರು ಜನರು ಬೃಹತ್ ಪ್ರತಿಭಟನೆ (Protest) ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಾನಿಲ್ ಗೋ ಹೋಂ ಎಂದು ಘೋಷಣೆ ಕೂಗಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಇದನ್ನೂ ಓದಿ: ಅಲ್ಲ ನನಗೆ ಮತ್ತೊಂದು ಜನ್ಮ ನೀಡಿದ್ದಾನೆ: ಗುಂಡು ತಗುಲಿದ ಬಳಿಕ ಇಮ್ರಾನ್ ಖಾನ್ ಮಾತು
Advertisement
Advertisement
ಈ ಹಿಂದೆ ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ನಲುಗಿ ಶ್ರೀಲಂಕಾದ ಜನರು ಆಗಿನ ಅಧ್ಯಕ್ಷ ಗೊಟಬಯ ರಾಜಪಕ್ಸೆ (Gotabaya Rajapaksa) ವಿರುದ್ಧ ತೀವ್ರವಾದ ಪ್ರತಿಭಟನೆ ನಡೆಸಿದ್ದರು. ಅಧ್ಯಕ್ಷರ ನಿವಾಸಕ್ಕೆ ಸಾವಿರಾರು ಪ್ರತಿಭಟನಾಕಾರರು ನುಗ್ಗಿ ದಾಂಧಲೆ ನಡೆಸಿದ್ದರು. ಇದರಿಂದ ತಪ್ಪಿಸಿಕೊಳ್ಳಲು ರಾಜಪಕ್ಸೆ ಶ್ರೀಲಂಕಾದಿಂದ ಪಲಾಯನಗೈದು, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಮತ್ತೆ ಅಂತಹುದೇ ಸ್ಥಿತಿ ಈಗಿನ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆಗೂ (Ranil Wickremesinghe) ಎದುರಾಗುವ ಭೀತಿ ಹುಟ್ಟಿಕೊಂಡಿದೆ. ಇದನ್ನೂ ಓದಿ: ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ – ಗ್ರೇಟ್ ಎಸ್ಕೇಪ್