ಬೆಂಗಳೂರು: ವಿಧಾನ ಪರಿಷತ್ (Vidhan Parishad) ಟಿಕೆಟ್ ಹಂಚಿಕೆ ವಿಚಾರವಾಗಿ ಮೊದಲೇ ಹೈ ಪವರ್ ಕಮಿಟಿ ನೇಮಿಸಿ ಸಲಹೆ ಪಡೆಯಬೇಕಿತ್ತು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr G Parameshwar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷಕ್ಕೆ ಕೆಲಸ ಮಾಡಿ ಅನೇಕ ಅನುಭವ ಇರುವವರಿಗೆ ಎಂಎಲ್‌ಸಿಯಾಗಲು (MLC) ಅವಕಾಶ ಕೊಡಬೇಕು. ಆದರೆ ಅವರು ನಮ್ಮ ಸಲಹೆಯನ್ನು ಕೇಳಿಲ್ಲ. ಅಭ್ಯರ್ಥಿಗಳ ಆಯ್ಕೆಗೆ ಸ್ಕ್ರೀನಿಂಗ್ ಮಾಡುವುದು ಬಹಳ ಕಷ್ಟ. ಮೊದಲೇ ಹೈ ಪವರ್ ಕಮಿಟಿ ಮಾಡಿ ಸಲಹೆ ಪಡೆಯಬೇಕಿತ್ತು. ಈಗ ಕಾಲ ಮೀರಿ ಹೋಗಿದೆ. ಈಗಾಗಲೇ ಸಿಎಂ ಡಿಸಿಎಂ ದೆಹಲಿಗೆ ಹೋಗಿ ಬಿಟ್ಟಿದ್ದಾರೆ ಎಂದರು.
Advertisement
Advertisement
ಇನ್ಮುಂದೆ ಯಾವುದಾದರೂ ನೇಮಕಕ್ಕೆ ಹೈ ಪವರ್ ರೀತಿಯ ಕಮಿಟಿ ಮಾಡಬೇಕಾ ಎಂಬ ಪ್ರಶ್ನೆಗೆ ನೋಡೋಣ ಎಂದು ಉತ್ತರಿಸಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಜರ್ಮನಿ ಟೂರ್: 7 ದಿನದ ರಹಸ್ಯ
Advertisement
ಇಲಾಖೆ ವಿಚಾರವಾಗಿ ನಾನು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇನೆ. ಭೇಟಿ ವೇಳೆ ಪರಿಷತ್ ವಿಚಾರ ಚರ್ಚೆಯಾಗಿಲ್ಲ. ಒಟ್ಟು ಇರುವ 7 ಸ್ಥಾನಗಳಿಗೆ ಎಷ್ಟು ಅರ್ಜಿಗಳು ಬಂದಿವೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ಹೇಳಿದರು.
Advertisement