ಉದಯಪುರದಲ್ಲಿ ನಡೆದಿದ್ದ ಟ್ರೇಲರ್ ಕನ್ಹಯ್ಯ ಲಾಲ್ (Kanhaiya Lal) ಪ್ರಕರಣದ ಕುರಿತಂತೆ ಉದಯಪುರ ಫೈಲ್ಸ್ (Udaipur Files) ಸಿನಿಮಾ ರೆಡಿ ಆಗಿತ್ತು. ಈ ಸಿನಿಮಾ ಬಿಡುಗಡೆಗೂ ಸಿದ್ಧವಾಗಿತ್ತು. ಈ ಚಿತ್ರವನ್ನು ಬಿಡುಗಡೆ ಮಾಡದಂತೆ ಜಮಿಯತ್ ಉಲಾಮ ಇ ಹಿಂದ್ ಅಧ್ಯಕ್ಷ ಮೌಲಾನಾ ಹರ್ಷದ್ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಸಿನಿಮಾ ರಿಲೀಸ್ ಮಾಡದಂತೆ ದೆಹಲಿ ಹೈಕೋರ್ಟ್ (Delhi High Court) ತಡೆದಿದೆ.
ಜು. 11ಕ್ಕೆ ಉದಯಪುರ ಫೈಲ್ಸ್ ಸಿನಿಮಾ ಬಿಡುಗಡೆ ಆಗಬೇಕಿತ್ತು. ದ್ವೇಷ ಕಾರುವ ಸಿನಿಮಾ ಇದಾಗಿದ್ದರಿಂದ, ಸಿನಿಮಾವನ್ನು ತಡೆಯಬೇಕು ಅಂತ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ಧಾರ್ಮಿಕ ಪ್ರಚೋದನೆಯ ಕಾರಣದಿಂದಾಗಿ ದೆಹಲಿ ಹೈಕೋರ್ಟ್ ಸಿನಿಮಾ ಬಿಡುಗಡೆಯನ್ನು ತಡೆದಿದೆ. ಈ ಸಿನಿಮಾವನ್ನು ಬಿಡುಗಡೆ ಮಾಡಬೇಕೇ, ಬೇಡವೇ ಅನ್ನುವುದನ್ನು ಕೇಂದ್ರ ಸರ್ಕಾರ ನಿರ್ಧಾರ ಮಾಡಬೇಕು ಎಂದು ಒಂದು ವಾರ ಗಡವು ನೀಡಿದೆ. ಇದನ್ನೂ ಓದಿ: ಸೋಮವಾರ ಥೈಲ್ಯಾಂಡ್‌ಗೆ ಹಾರಲಿದ್ದಾರೆ ದರ್ಶನ್
ಈ ಮಧ್ಯ ಸೆನ್ಸಾರ್ ಮಂಡಳಿಯು (CBFC) ಚಿತ್ರಕ್ಕೆ 150 ಕಡೆ ಕತ್ತರಿಸುವಂತೆ ಸೂಚಿಸಲಾಗಿದೆ ಅನ್ನುವ ಸುದ್ದಿಯೂ ಹರಿದಾಡುತ್ತಿದೆ. ಆಕ್ಷೇಪಾರ್ಹ ದೃಶ್ಯಗಳಿಗೆ ಮತ್ತು ಸಂಭಾಷಣೆಗಳಿಗೆ ಕತ್ತರಿ ಹಾಕಬೇಕು ಅಂತ ಸೂಚಿಸಲಾಗಿದೆಯಂತೆ. ಆದರೆ, ನಿರ್ಮಾಪಕರು ಇದಕ್ಕೆ ಒಪ್ಪಿಲ್ಲ ಎನ್ನುವ ಮಾತೂ ಇದೆ. ಒಟ್ಟಿನಲ್ಲಿ ಒಂದು ವಾರದ ಒಳಗೆ ಸಿನಿಮಾ ಬಿಡುಗಡೆ ಕುರಿತು ನಿರ್ಧಾರ ತಗೆದುಕೊಳ್ಳಬೇಕಿದೆ.