ನಾಳೆ ಬೆಳಗ್ಗೆ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ರಜಾಕಾರ್ ಬಿಡುಗಡೆ ಆಗುತ್ತಿದೆ. ಈ ಸಿನಿಮಾ ರಿಲೀಸ್ ಮಾಡದಂತೆ ತಡೆ ಕೋರಿ ಹೈದರಾಬಾದ್ ಹೈಕೋರ್ಟ್ ನಲ್ಲಿ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಮನವಿ ಸಲ್ಲಿಸಿತ್ತು. ಭಾರತ ಸ್ವಾತಂತ್ರ್ಯ ನಂತರ ರಜಾಕಾರರು ನಡೆಸಿದ ದೌರ್ಜನ್ಯವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ಉಲ್ಲೇಖಿಸಿದ್ದರು.
Advertisement
ಸಿನಿಮಾ ತಯಾರಕರೇ ಕಥೆ ಬಗ್ಗೆ ಹೇಳಿದ್ದರಿಂದ ಚಿತ್ರವು ಮುಸ್ಲಿಂ ಮತ್ತು ಹಿಂದುಗಳ ಭಾವನೆಗೆ ಧಕ್ಕೆ ತರಬಹುದು. ಎರಡೂ ಸಮುದಾಯಗಳ ನಡುವೆ ವಿಷ ಬೀಜ ಬಿತ್ತಬಹುದು. ಹಾಗಾಗಿ ಚಿತ್ರ ಪ್ರದರ್ಶನವನ್ನು ತಡೆಯುವಂತೆ ಎಪಿಸಿಆರ್ ನ ತೆಲಂಗಾಣ ಚಾಪ್ಟರ್ ನ ಉಪಾಧ್ಯಕ್ಷ, ಅಡ್ವೋಕೇಟ್ ಅಫ್ಸರ್ ಜಹಾನ್ ಹೈಕೋರ್ಟ್ ನಲ್ಲಿ ಸಂಘಟನೆಯ ಹಿತಾಸಕ್ತಿಗಳನ್ನು ಪ್ರತಿನಿಧಿಸಿದ್ದರು.
Advertisement
Advertisement
ಈ ವಾದಗಳನ್ನು ಆಲಿಸಿದ ಮಾನ್ಯ ನ್ಯಾಯಾಲಯವು ಚಿತ್ರಕ್ಕೆ ನೀಡಿರುವ ಸೆನ್ಸಾರ್ ಪತ್ರದ ಕುರಿತು ಮಾತನಾಡಿದೆ. ಜೊತೆಗೆ ಸಿಬಿಎಫ್ಸಿನಲ್ಲೇ ಇರುವ ಮೇಲ್ಮನವಿ ಪರಿಹಾರವನ್ನು ಸೂಚಿಸಿ, ತಡೆಯನ್ನು ನಿರಾಕರಿಸಿದೆ. ಈ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರ ಸಿಕ್ಕಿದ್ದು, ವಯಸ್ಕರಷ್ಟೇ ಚಿತ್ರವನ್ನು ನೋಡಬಹುದು. ಮತ್ತು ಸೆನ್ಸಾರ್ ಮಂಡಳಿಯಲ್ಲೇ ಮೇಲ್ಮನವಿಯ ಪರಿಹಾರ ಇದೇ ಎಂದು ಉಲ್ಲೇಖಿಸಿದೆ ಮಾನ್ಯ ನ್ಯಾಯಾಲಯ.