ಬೆಂಗಳೂರು: ನಟಿ ರನ್ಯಾರಾವ್ (Ranya Rao) ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ದಿನಕ್ಕೊಂದು ಬೆಳವಣಿಗೆಯಾಗುತ್ತಿದ್ದು, ಇದೀಗ ಹೈಕೋರ್ಟ್ ಏಕಸದಸ್ಯ ಪೀಠ ಆರೋಪಿ ರನ್ಯಾರಾವ್ ಹಾಗೂ ಎ2 ಆರೋಪಿ ತರುಣ್ ರಾಜ್ ಜಾಮೀನು ಅರ್ಜಿ ವಜಾಗೊಳಿಸಿದೆ.
ಇನ್ನು ಮುಂದಿನ ಒಂದು ವರ್ಷಗಳ ಕಾಲ ರನ್ಯಾರಾವ್ ಖಾಯಂ ವಿಳಾಸ ಪರಪ್ಪನ ಅಗ್ರಹಾರವಾಗಿಯೇ ಇರಲಿದೆ. ನ್ಯಾಯಮೂರ್ತಿ ವಿಶ್ವಜಿತ್ ಪೀಠ ಜಾಮೀನು ಅರ್ಜಿ ವಿಚಾರಣೆ ಮಾಡಿದ್ದರು. ಆರೋಪಿ ರನ್ಯಾರಾವ್ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಾಡಿದ್ದರು. ಇದನ್ನೂ ಓದಿ: ಕಲಬುರಗಿ| ಎಸ್‌ಬಿಐ ಎಟಿಎಂ ದರೋಡೆಕೋರರ ಕಾಲಿಗೆ ಪೊಲೀಸರ ಗುಂಡೇಟು
ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ (Gold Smuggling Case) ರನ್ಯಾರಾವ್ ಪರಪ್ಪನ ಅಗ್ರಹಾರಕ್ಕೆ ಹೋಗಿ 50 ದಿನಗಳು ಆಗಿದೆ. ಮಾ. 3ರಂದು ಡಿಆರ್‌ಐ ಅಧಿಕಾರಿಗಳು ರನ್ಯಾರಾವ್‌ರನ್ನ ಬಂಧನ ಮಾಡಿ ಜೈಲಿಗೆ ಕಳಿಸಿದ್ದರು. ಇಲ್ಲಿಯವರೆಗೆ 2 ಬಾರಿ ರನ್ಯಾರಾವ್ ಜಾಮೀನು ಅರ್ಜಿ ವಜಾ ಆಗಿದೆ.