ತುಮಕೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress) ತಲೆದೋರಿರುವ ಅಧಿಕಾರ ಹಂಚಿಕೆ ವಿವಾದದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡೋದಿಲ್ಲ ಎಂದು ಮಾಜಿ ಸಚಿವ ಕೆಎನ್ ರಾಜಣ್ಣ (KN Rajanna) ಅಭಿಪ್ರಾಯಪಟ್ಟಿದ್ದಾರೆ.
ತುಮಕೂರಿನಲ್ಲಿ (Tumakuru) ಮಾತನಾಡಿದ ಅವರು, ಸಿಎಂ ಬದಲಾವಣೆ ಗೊಂದಲ ನಾವು ಸೃಷ್ಟಿ ಮಾಡಿದ್ದಲ್ಲ, ನೀವೇ ಸೃಷ್ಟಿ ಮಾಡಿರೋದು ಅದನ್ನು ನೀವೇ ಬಗೆಹರಿಸಿಕೊಳ್ಳಿ ಎಂದು ಹೈಕಮಾಂಡ್ ಸಂದೇಶ ಸಾರಿದೆ. ಇದರ ಅರ್ಥ ಸಿಎಂ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡೋದಿಲ್ಲ ಅನ್ನೋದು ನನ್ನ ಭಾವನೆ. ಇದರಲಿ ಹೈಕಮಾಂಡ್‌ಗೆ ಬೊಟ್ಟು ಮಾಡಿ ತೋರಿಸುವ ಅಗತ್ಯ ಇಲ್ಲ. ಇದು ಇಲ್ಲೇ ಹಲವರಿಂದ ಸೃಷ್ಟಿಯಾದ ಗೊಂದಲ ಎಂದರು. ಇದನ್ನೂ ಓದಿ: ‘ಡಿಜಿಟಲ್ ಅರೆಸ್ಟ್’ ವಂಚನೆ; 9 ಕೋಟಿ ಹಣ ಕಳೆದುಕೊಂಡ 85ರ ವೃದ್ಧ
ಜನವರಿ ಅಥವಾ ಫೆಬ್ರವರಿಯಲ್ಲಿ ಸಂಪುಟ ಪುನಾರಚನೆ ಆಗಬಹುದು. ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿಯಾದ ಮೇಲೆ ಸಂಪುಟ ಪುನಾರಚನೆ ಆಗಬಹುದು. ಸದ್ಯ ಹೈಕಮಾಂಡ್ ಬ್ಯುಸಿ ಇದ್ದಾರೆ. ಹೈಕಮಾಂಡ್ ನಿರ್ಣಯದ ಮೇಲೆ ಎಲ್ಲವೂ ನಿಂತಿದೆ. ಸಿದ್ದರಾಮಯ್ಯರಿಗೆ ತೊಂದರೆ ಆಗುತ್ತೋ ಬಿಡತ್ತೋ ಅನ್ನೋದು ಹೈಕಮಾಂಡ್‌ಗೆ ಮಾತ್ರ ಗೊತ್ತು. ಈ ನಡುವೆ ಡಿಸಿಎ ಹಾಗೂ ಸಿಎಂ ಇಬ್ಬರನ್ನೂ ನಾನು ಭೇಟಿಯಾಗಿದ್ದೇನೆ. ಇಬ್ಬರ ಜೊತೆ ರಾಜಕೀಯ ಚರ್ಚೆ ಜೊತೆಗೆ ಕ್ಷೇತ್ರದ ಅಭಿವೃದ್ಧಿ ಕುರಿತು ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಭೇಟಿಯಾದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ
ನಾನು ರಾಹುಲ್ ಗಾಂಧಿ ಅವರಿಗೆ ಬರೆದ ಲೆಟರ್ ಈಗ ಲೀಕ್ ಆಗಿದೆ. ವೋಟ್ ಚೋರಿ ಕುರಿತಂತೆ ನಾನು ಕೊಟ್ಟ ಹೇಳಿಕೆ ಲೆಟರ್ ಓದಿದರೆ ಗೊತ್ತಾಗುತ್ತದೆ. ಅದು ಹೈಕಮಾಂಡ್‌ಗೆ ಮನವರಿಕೆ ಮಾಡೋ ಪ್ರಯತ್ನ ಮಾಡಿದ್ದೇನೆ. ಹೈಕಮಾಂಡ್ ಭೇಟಿಗೆ ಸಮಯ ಕೊಟ್ಟರೆ ಹೋಗಿ ಮನವರಿಕೆ ಮಾಡುತ್ತೇನೆ. ಮತ್ತೆ ಸಚಿವ ಸಂಪುಟದಲ್ಲಿ ಸ್ಥಾನ ಕೊಟ್ಟರೆ ಜನರಿಗಾಗಿ ಒಳ್ಳೆ ಕೆಲಸ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಅಧಿಕಾರ ಕೊಡಲ್ಲ, ಡಿ.ಕೆ.ಶಿವಕುಮಾರ್ ದೇವಸ್ಥಾನ ಬಿಡಲ್ಲ: ಅಶೋಕ್ ವ್ಯಂಗ್ಯ

