ಚಿಕ್ಕಬಳ್ಳಾಪುರ: ಕಾಂಗ್ರೆಸ್ (Congress) ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆಯ್ಕೆಯಾಗಿದ್ದಾರೆ. ಈ ವಿಚಾರಕ್ಕೆ ಚಿಕ್ಕಬಳ್ಳಾಪುರದಲ್ಲಿ (Chikkaballapur) ಆರೋಗ್ಯ ಸಚಿವ ಡಾ.ಕೆ. ಸುಧಾಕರ್ (Sudhakar) ಪ್ರತಿಕ್ರಿಯಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯವರು ಆಯ್ಕೆಯಾಗಿರುವುದು ಕನ್ನಡಿಗನಾಗಿ. ನಾನು ಸಂತೋಷಪಡುತ್ತೇನೆ ಹಾಗೂ ಸ್ವಾಗತ ಕೋರುತ್ತೇನೆ. ಆದರೆ ಯಾವ ಸ್ಥಿತಿಯಲ್ಲಿ ಖರ್ಗೆಯವರನ್ನು ಆಯ್ಕೆ ಮಾಡಿದ್ದಾರೆ, ಯಾವ ಸನ್ನಿವೇಶದಲ್ಲಿ ಕೂರಿಸಿದ್ದಾರೆ? ಹೈಕಮಾಂಡ್ ಖರ್ಗೆ ಅವರ ಎರಡೂ ಕೈ ಕಾಲು ಕಟ್ಟಿ ಹಾಕಿ, ಕೆಲಸ ಮಾಡಿಸುತ್ತಾರೆ. ಈಗ ಖರ್ಗೆಯವರಿಗೆ ಸ್ವಾಯತ್ತತೆ, ಸ್ವಾತಂತ್ರ‍್ಯ ಇರುತ್ತಾ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ದೀಪಾವಳಿಯಂದು ದೇವಸ್ಥಾನಗಳಲ್ಲಿ ಗೋಪೂಜೆ: ಶಶಿಕಲಾ ಜೊಲ್ಲೆ
Advertisement
Advertisement
ನಾವು ಈ ಹಿಂದೆಯೇ ಅನೇಕ ಸನ್ನಿವೇಶಗಳನ್ನು ನೋಡಿದ್ದೇವೆ. ಅವರು ನಾಮಿನೇಷನ್ ಸಲ್ಲಿಸಿದಾಗಿನಿಂದ ಕಾಂಗ್ರೆಸ್ ಸರ್ಕಲ್‌ನಲ್ಲಿ ಸಹಜ ಸಂತೋಷವೇ ಇಲ್ಲ. ಯಾರಾದರೂ ಕರ್ನಾಟಕದ ರಾಜಕಾರಣಿ ಸಂತೋಷ, ಉತ್ಸಾಹ ವ್ಯಕ್ತಪಡಿಸಿದ್ದಾರಾ? ಕಾಂಗ್ರೆಸ್‌ನವರು ನೀರಸವಾಗಿದ್ದಾರೆ. ಯಾಕೆ ಎಂಬುದನ್ನು ಅವರಲ್ಲಿಯೇ ಕೇಳಿ ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಪ್ರಧಾನಿಯಲ್ಲ, ಮುಂದೆಯೂ ಆಗಲ್ಲ – ಬೊಮ್ಮಾಯಿ ಭವಿಷ್ಯ