ಬೆಂಗಳೂರು: ಬಿಜೆಪಿ (BJP) ಯ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagauda Patil Yatnal) ನಸೀಬು ಕೈಕೊಡುತ್ತಿರುವ ಲಕ್ಷಣಗಳು ಗೋಚರವಾಗ್ತಿದೆ. ಪಕ್ಷದ ಶಿಸ್ತು ಮೀರಿದ ಯತ್ನಾಳ್ ವಿಚಾರದಲ್ಲಿ ಕೊನೆಗೂ ಹೈಕಮಾಂಡ್ ಗಡುಸಾಗಿರುವ ಸುಳಿವು ಸಿಕ್ಕಿದೆ. ಮೊನ್ನೆಯಷ್ಟೇ ವಿಜಯಪುರಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಯತ್ನಾಳ್‍ಗೆ ಅವರ ತವರು ಜಿಲ್ಲೆಯಲ್ಲೇ ಮೊದಲ ಬಿಸಿ ಮುಟ್ಟಿಸಿದ್ದಾರೆ. ನಡ್ಡಾ ಕೊಟ್ಟ ಫಸ್ಟ್ ಶಾಕ್ ಗೆ ಯತ್ನಾಳ್ ಟೀಮ್‍ನಲ್ಲಿ ಆತಂಕ ಮನೆ ಮಾಡಿದ್ರೆ, ವಿರೋಧಿ ಟೀಮ್ ನಲ್ಲಿ ನಿರೀಕ್ಷೆ, ಖುಷಿ ಕಾಣಿಸಿಕೊಂಡಿದೆ.
Advertisement
ವಿಜಯಪುರದ ಸಿಂದಗಿ ಮತ್ತು ನಾಗಠಾಣ ಕ್ಷೇತ್ರಗಳಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಕಾರ್ಯಕ್ರಮಕ್ಕೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೇ ಎಂಟ್ರಿ ಇರಲಿಲ್ಲ. ವಿಜಯಪುರದ ಶಾಸಕರಿಗೇ ಅವರ ತವರು ಜಿಲ್ಲೆಯ ಕಾರ್ಯಕ್ರಮಕ್ಕೆ ನಿರ್ಬಂಧ ವಿಧಿಸಿದ್ದು, ಬೇರ್ಯಾರೂ ಅಲ್ಲ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಅವರೇ ಎಂದು ಬಿಜೆಪಿ ವಲಯದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಕೇಂದ್ರದ ಶಿಸ್ತು ಸಮಿತಿ ನೊಟೀಸ್ ಕೊಟ್ಟ ಹಿನ್ನೆಲೆಯಲ್ಲಿ ಯತ್ನಾಳ್ ಜೊತೆ ಒಂದೇ ವೇದಿಕೆಯಲ್ಲಿ ಗುರುತಿಸಿಕೊಳ್ಳಲು ಹಿಂಜರಿದರು ಎನ್ನಲಾಗಿದೆ. ನೊಟೀಸ್ ಪಡೆದ ಶಾಸಕನ ಜೊತೆ ವೇದಿಕೆ ಹಂಚಿಕೊಳ್ಳಲ್ಲ ಅಂದ್ರಂತೆ ಜೆಪಿ ನಡ್ಡಾ. ಹೀಗಾಗಿಯೇ ವಿಜಯಪುರದ ಕಾರ್ಯಕ್ರಮಕ್ಕೆ ಯತ್ನಾಳ್ ಬರದಂತೆ ನಿರ್ಬಂಧ ವಿಧಿಸಲಾಯಿತು. ಈ ಮೂಲಕ ಯತ್ನಾಳ್ ಅವರಿಗೆ ಜೆ ಪಿ ನಡ್ಡಾ ಖಡಕ್ ವಾರ್ನಿಂಗ್ ರವಾನಿಸಿದ್ದಾರೆ. ನಿರ್ಬಂಧ ಮೂಲಕ ಅಶಿಸ್ತು ತೋರಿದರೆ ಸಹಿಸಲ್ಲ ಎಂಬ ಖಡಕ್ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.
Advertisement
Advertisement
ಯತ್ನಾಳ್ ವಿಚಾರದಲ್ಲಿ ಜೆ.ಪಿ ನಡ್ಡಾ ಅವರು ಸಾಕಷ್ಟು ಯೋಚಿಸಿಯೇ ನಡೆದುಕೊಂಡಿರುವ ಸಾಧ್ಯತೆ ಇದೆ. ವಿಪಕ್ಷಗಳ ಟೀಕೆಗೂ ಗುರಿಯಾಗದಿರಲು ನಡ್ಡಾ ಎಚ್ಚರಿಕೆ ನಡೆ ಅನುಸರಿಸಿದ್ದಾರೆ. ಜೆ.ಪಿ ನಡ್ಡಾ ಅವರ ಈ ನಡೆಯಿಂದ ಒಂದು ಕಡೆ ಯತ್ನಾಳ್ ವಿರೋಧಿಗಳ ದಿಲ್ ಖುಷ್ ಆಗಿದ್ರೆ, ಇನ್ನೊಂದು ಕಡೆ ಖುದ್ದು ಯತ್ನಾಳ್ ಮತ್ತು ಟೀಮ್ ವಿಚಲಿತವಾಗಿದ್ದಾರಂತೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದಲ್ಲಿ PHD ಪಡೆದಿದ್ದಾರೆ, ಬೆಂಗ್ಳೂರನ್ನ ಹಾಳು ಮಾಡಿದ್ದಾರೆ: ಬೊಮ್ಮಾಯಿ
Advertisement
ಈ ವಾರವೇ ದೆಹಲಿಗೆ ಬರುವಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ರನ್ನು ಹೈಕಮಾಂಡ್ ಬುಲಾವ್ ಕೊಟ್ಟಿದೆ. ಮುಜುಗರದ, ಕೀಳು ಮಟ್ಟದ ಹೇಳಿಕೆಗಳಿಗೆ ಖುದ್ದು ಬಂದು ವಿವರಣೆ ಕೊಡುವಂತೆ ವರಿಷ್ಠರು ತಾಕೀತು ಮಾಡಿದ್ದಾರೆ. ಈಗಾಗಲೇ ಕಳೆದ ವಾರ ಶಾಸಕ ಯತ್ನಾಳ್ ಗೆ ಕೇಂದ್ರದ ಶಿಸ್ತು ಸಮಿತಿಯಿಂದ ಶೋಕಾಸ್ ನೊಟೀಸ್ ಕೊಡಲಾಗಿದೆ. ನೊಟೀಸ್ ನಲ್ಲಿ ಖುದ್ದು ಹಾಜರಾಗಿ ವಿವರಣೆ ಕೊಡುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ಹೀಗಾಗಿ ದೆಹಲಿಗೆ ಯತ್ನಾಳ್ ಹೋಗಿಬರುವ ಸಾಧ್ಯತೆ ಹೆಚ್ಚಾಗಿದೆ.
ದೆಹಲಿಯಲ್ಲಿ ಯತ್ನಾಳ್ ಗೆ ಹೈಕಮಾಂಡ್ ವಾರ್ನಿಂಗ್ ಕೊಡ್ತಾರಾ, ಪನಿಶ್ಮೆಂಟ್ ಕೊಡ್ತಾರಾ ಅನ್ನೋದು ಸ್ಪಷ್ಟವಿಲ್ಲ. ಆದರೆ ಕೊನೆಗೂ ಈ ರೀತಿಯ ಟಫ್ ನಡೆಯನ್ನು ಯತ್ನಾಳ್ ವಿಚಾರದಲ್ಲಿ ಹೈಕಮಾಂಡ್ ಪ್ರದರ್ಶನ ಮಾಡಿರುವುದು ಅಚ್ಚರಿಯೇ ಸರಿ. ಒಟ್ಟಿನಲ್ಲಿ ಶಾಸಕ ಯತ್ನಾಳ್ ಅವರ ದೆಹಲಿ ಭೇಟಿ ಮತ್ತು ಅದರ ಫಲಿತಾಂಶ ಸಾಕಷ್ಟು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಕಾಂಗ್ರೆಸ್ ಪಕ್ಷವನ್ನ ನಂಬುವ ಪರಿಸ್ಥಿತಿಯಲ್ಲಿ ಜನರಿಲ್ಲ: ಹೆಚ್ಡಿಕೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k