ಬೆಂಗಳೂರು: ಬಿಜೆಪಿಯಲ್ಲೀಗ ಡಿಸಿಎಂ ಪದವಿ ಬಗ್ಗೆಯೇ ಬಿಸಿ ಬಿಸಿ ಚರ್ಚೆ. ಡಿಸಿಎಂ ಬೇಕು ಎಂದು ಒಂದು ಗುಂಪು ಹೇಳುತ್ತಿದ್ದರೆ, ಬೇಡ ಎಂದು ಇನ್ನೊಂದು ಗುಂಪು ಹೇಳ್ತಿದೆ. ಆದರೆ ಸಿಎಂ ಬಿಎಸ್‍ವೈ ಅವರ ನಡೆ ಮಾತ್ರ ಯಾರಿಗೂ ಅರ್ಥವಾಗುತ್ತಿಲ್ಲ. ಹಾಗಾದ್ರೆ ಯಡಿಯೂರಪ್ಪ ಅವರು ಡಿಸಿಎಂ ಪದವಿಯನ್ನು ಹೇಗೆ ನೋಡುತ್ತಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಬಿಜೆಪಿಯಲ್ಲಿ ಡಿಸಿಎಂ ಸ್ಥಾನಗಳು ಸೃಷ್ಟಿಯಾಗಿನಿಂದ ಒಂದಲ್ಲ ಒಂದು ಚರ್ಚೆ ನಡೆಯುತ್ತಿದೆ. ಡಿಸಿಎಂಗಳು ಯಾರೂ ಇರಲ್ಲ ಅಂತಿದೆ ಬಿಜೆಪಿ ಒಂದು ಗುಂಪು. ಇಬ್ಬರು ಡಿಸಿಎಂ ಔಟ್ ಆಗ್ತಾರೆ, ಮೂವರು ಹೊಸಬರು ಬರುತ್ತಾರೆ ಎಂದು ಮತ್ತೊಂದು ಗುಂಪು ಹೇಳುತ್ತಿದೆ. ಹಾಗಾಗಿ ಬಿಜೆಪಿಯಲ್ಲಿ ಡಿಸಿಎಂ ಬೇಕು, ಬೇಡ ಎನ್ನುವ ಬಣಗಳ ಕಾದಾಟ ಜೋರಾಗಿದೆ. ಡಿಸಿಎಂ ಇದ್ದರೆ ಇನ್ನೊಂದು ಹೆಚ್ಚಳ ಮಾಡಿ, ಇಲ್ಲದಿದ್ದರೆ ಡಿಸಿಎಂಗಳೇ ಬೇಡ ಎನ್ನುವ ಕೂಗು ಕೂಡ ಇನ್ನೊಂದೆಡೆ ವ್ಯಕ್ತವಾಗುತ್ತಿದೆ. ಅಲ್ಲದೆ ಹೈಕಮಾಂಡ್‍ನ ಎದುರು ರಾಜ್ಯ ಬಿಜೆಪಿ ನಾಯಕರ ಒಂದು ಗುಂಪು ಪ್ರಸ್ತಾಪ ಕೂಡ ಮಾಡಿದೆ ಎನ್ನಲಾಗಿದೆ.
Advertisement
Advertisement
ಮುಖ್ಯಮಂತ್ರಿ ಯಡಿಯೂರಪ್ಪ ಕೇಳದೆ ಮುಂದುವರಿಯದಿರಲು ಹೈಕಮಾಂಡ್ ನಿರ್ಧಾರ ಮಾಡಿದೆ ಎಂಬ ಮಾತುಗಳು ಬಿಜೆಪಿ ಪಡಸಾಲೆಯಿಂದ ಕೇಳಿಬಂದಿವೆ. ಯಡಿಯೂರಪ್ಪ ಓಕೆ ಎಂದರೆ ಮತ್ತೊಂದು ಡಿಸಿಎಂ ಹುದ್ದೆ ಸೃಷ್ಟಿ, ಇಲ್ಲ ಅಂದ್ರೆ ಡಿಸಿಎಂ ಹುದ್ದೆಗಳೇ ಖಾಲಿ ಎಂಬುವುದು ಹೈಕಮಾಂಡ್ ವಲಯದ ಪ್ಲ್ಯಾನ್ ಎನ್ನಲಾಗಿದೆ. ಇದರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ನಡೆ ಯಾರ ಕಡೆ ಎಂಬ ಕುತೂಹಲ ಮೂಡಿಸಿದೆ. ಹಾಲಿ ಡಿಸಿಎಂಗಳಿಗೆ ಬಿಎಸ್‍ವೈ ವರವಾಗ್ತಾರಾ? ಕಂಟಕವಾಗ್ತಾರಾ ಎಂಬ ಕುತೂಹಲವಿದ್ದು, ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗುವುದರೊಳಗೆ ಡಿಸಿಎಂ ಬಗ್ಗೆ ಸ್ಪಷ್ಟ ನಿರ್ಧಾರ ಮಾಡುತ್ತಾರೆ ಅನ್ನೋದು ಆಪ್ತವಲಯದ ಮಾಹಿತಿ.