– ಅಧಿಕಾರ ಸಿಗದಿದ್ರೆ ಡಿಕೆ ನಡೆ ಏನು?
ಬೆಂಗಳೂರು: ದೆಹಲಿಗೆ ತೆರಳಿರುವ ಸಿಎಂ ಸಿದ್ದರಾಮಯ್ಯ (Siddaramaiah) ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಬಿಹಾರ ಚುನಾವಣೆ ಸೋಲಿನ ಸಮಾಧಾನದ ನೆಪದಲ್ಲಿ ಕ್ಯಾಬಿನೆಟ್ ಪುನಾರಚನೆ (Cabinet Reshuffle) ಕ್ಲೈಮ್ ಮಾಡಿದ್ದಾರೆ. ಸಂಪುಟ ಪುನಾರಚನೆಗೆ ಗ್ರೀನ್ ಸಿಗ್ನಿಲ್ ಕೊಟ್ಟ ರಾಹುಲ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಜೊತೆ ಮಾತನಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಸುಮಾರು 12ರಿಂದ 15ಕ್ಕೂ ಹೆಚ್ಚು ಸಚಿವರಿಗೆ ಸಂಪುಟದಿಂದ ಕೊಕ್ ನೀಡಲಿದ್ದು, 15 ಹೊಸ ಸೇರ್ಪಡೆಗೆ ಸಿಎಂ ಪ್ಲ್ಯಾನ್ ಮಾಡಿದ್ದಾರೆ. ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ಸಮಯ ಕೇಳಿರುವ ಸಿಎಂ ಸಿದ್ದರಾಮಯ್ಯ, ಅವತ್ತೇ ಹೈಕಮಾಂಡ್ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ಇನ್ನು ಸಿಎಂ ಸಿದ್ದರಾಮಯ್ಯ ಮಾಸ್ಟರ್ ಸ್ಟ್ರೋಕ್‍ಗೆ ಡಿಕೆಶಿ ಚಿತ್ ಆಗಿದ್ದಾರೆ. ಡಿಕೆಶಿ ಡೆಲ್ಲಿ ಎಂಟ್ರಿಗೂ ಮುನ್ನವೇ ರಾಹುಲ್ ಭೇಟಿಯಾಗಿ ಸಿದ್ದರಾಮಯ್ಯ ಟಕ್ಕರ್ ಕೊಟ್ಟಿದ್ದಾರೆ. ಪವರ್ ಶೇರ್ ವಿಚಾರದಲ್ಲಿ ವಿಶ್ವಾಸದಲ್ಲಿದ್ದ ಡಿಕೆಶಿಗೆ ಇವತ್ತಿನ ಮಟ್ಟಿಗೆ ಶಾಕ್ ಎನ್ನಬಹುದು. ಡಿಕೆಶಿ ಇವತ್ತು ದೆಹಲಿಯಲ್ಲೇ ವಾಸ್ತವ್ಯ ಹೂಡಲಿದ್ದು, ರಾಹುಲ್ ಗಾಂಧಿ ಭೇಟಿ ಮಾಡುವ ಸಾಧ್ಯತೆ ಇದೆ. ಆದ್ರೆ ಸಿದ್ದರಾಮಯ್ಯ ಸಂಪುಟ ರಚನೆಗೆ ಗೇಮ್ ಪ್ಲ್ಯಾನ್‍ಗೆ ಡಿಕೆಶಿ ಚೆಕ್‍ಮೇಟ್ ಕುತೂಹಲ ಮೂಡಿಸಿದ್ದು, ಹೈಕಮಾಂಡ್ ಕ್ಲಾರಿಟಿ ಕೊಡುತ್ತಾ ಕಾದುನೋಡಬೇಕಿದೆ. ಹಾಗಾದ್ರೆ ಡಿಕೆಶಿ ಮುಂದಿರುವ ಆಯ್ಕೆಗಳೇನು..?
ಡಿಕೆಶಿ ಮುಂದಿರುವ ಆಯ್ಕೆಗಳೇನು..?
> ಸದ್ಯಕ್ಕೆ 6 ತಿಂಗಳ ವ್ಯಾಲಿಡಿಟಿ ಸಂಪುಟ ಪುನಾರಚನೆಗೆ ಒಪ್ಪುವುದು
> ಕೆಪಿಸಿಸಿ ಅಧ್ಯಕ್ಷ ಸ್ಥಾನ ತ್ಯಜಿಸಿ ಪವರ್ ಶೇರ್‌ಗೆ ಒತ್ತಡ ಏರುವುದು
> ಮುಂದಿನ ಮೇ ತನಕ ಸಿದ್ದರಾಮಯ್ಯ ಮನವೊಲಿಸಿ ಸುಮ್ಮನಿರುವುದು
> ಹೈಕಮಾಂಡ್ ಮುಂದೆ ನಿಷ್ಠೆ ಕ್ಲೈಮ್ ಮಾಡಿ ತಾಳ್ಮೆಯಿಂದ ಕಾಯುವುದು
ಕ್ಯಾಬಿನೆಟ್‍ಗೆ ಕ್ಯೂನಲ್ಲಿ ಇರೋರು ಯಾರು?
> ಯು.ಟಿ.ಖಾದರ್- ಸ್ಪೀಕರ್
> ಕೆ.ಎನ್.ರಾಜಣ್ಣ- ಮಧುಗಿರಿ ಶಾಸಕ
> ಆರ್.ವಿ.ದೇಶಪಾಂಡೆ- ಹಳಿಯಾಳ ಶಾಸಕ
> ಬಿ.ಕೆ.ಹರಿಪ್ರಸಾದ್- ಪರಿಷತ್ ಸದಸ್ಯ
> ಎಂ.ಕೃಷ್ಣಪ್ಪ- ವಿಜಯನಗರ ಶಾಸಕ
> ತನ್ವೀರ್ ಸೇಠ್- ನರಸಿಂಹರಾಜ ಶಾಸಕ
> ಸಲೀಂ ಅಹಮದ್- ಪರಿಷತ್ ಸದಸ್ಯ
> ರಿಜ್ವಾನ್ ಅರ್ಷಾದ್ – ಶಿವಾಜಿ ನಗರ ಶಾಸಕ
> ಮಾಗಡಿ ಬಾಲಕೃಷ್ಣ- ಮಾಗಡಿ ಶಾಸಕ
> ಎನ್.ಎ.ಹ್ಯಾರಿಸ್- ಶಾಸಕ
> ರೂಪಕಲಾ ಶಶಿಧರ್- ಶಾಸಕಿ
> ಶಿವಲಿಂಗೇಗೌಡ- ಅರಸೀಕೆರೆ ಶಾಸಕ
> ನರೇಂದ್ರಸ್ವಾಮಿ- ಮಳವಳ್ಳಿ ಶಾಸಕ
> ಲಕ್ಷ್ಮಣ್ ಸವದಿ- ಅಥಣಿ ಶಾಸಕ
> ಪ್ರಸಾದ್ ಅಬ್ಬಯ್ಯ- ಹುಬ್ಬಳ್ಳಿ ಧಾರವಾಡ ಪೂರ್ವ ಶಾಸಕ
> ಸಿ.ಎಸ್.ನಾಡಗೌಡ- ಮುದ್ದೇಬಿಹಾಳ ಶಾಸಕ
> ಬೇಳೂರು ಗೋಪಾಲಕೃಷ್ಣ- ಸಾಗರ

