ಬೆಳಗಾವಿ: ರಾಜ್ಯದಲ್ಲಿ ಚುನಾವಣೆಗೆ(Karnataka Election) ಇನ್ನು 6 ತಿಂಗಳು ಮಾತ್ರ ಇದ್ದರೂ ಮತ್ತೆ ಸಂಪುಟ(Cabinet) ಸರ್ಕಸ್ ಶುರುವಾಗಿದೆ. ಕೆಲವು ಸಚಿವಾಕಾಂಕ್ಷಿಗಳ ಒತ್ತಡ ಹಿನ್ನೆಲೆ ಸಿಎಂ ಬೊಮ್ಮಾಯಿ(CM Basvaraj Bommai), ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೋಮವಾರ ರಾತ್ರಿ ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ(Amit Shah) ಅವರನ್ನು ಭೇಟಿಯಾಗಿದ್ದರು.
ಎರಡೂವರೆ ಗಂಟೆಗಳ ಚರ್ಚೆಯಲ್ಲಿ ಸಚಿವ ಸಂಪುಟ ವಿಸ್ತರಣೆಯ ತುರ್ತು ಅಗತ್ಯದ ಬಗ್ಗೆ ಸಿಎಂ ಮನವರಿಕೆ ಮಾಡಿಕೊಟ್ಟಿದ್ದಾರೆ ಅಂತ ತಿಳಿದು ಬಂದಿದೆ. ಸಂಪುಟದ ಪ್ರಾಂತ್ಯವಾರು ಮತ್ತು ಜಾತಿವಾರು ಸಚಿವರ ಮಾಹಿತಿ ಪಡೆದ ಹೈಕಮಾಂಡ್, ವಿಸ್ತರಣೆ ಬಗ್ಗೆ ಮುಂದೆ ತಿಳಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಆರ್‌ಎಸ್‍ಎಸ್ ಭಾರತೀಯ ಸಂಸ್ಕೃತಿ, ಮೌಲ್ಯಗಳನ್ನು ಶ್ರೀಮಂತಗೊಳಿಸುತ್ತಿದೆ: ರವೀಂದ್ರ ಜಡೇಜಾ
Advertisement
Advertisement
ಈ ಬೆನ್ನಲ್ಲೇ ಬೆಳಗ್ಗೆ ಈಶ್ವರಪ್ಪ(Eshwarappa) ಅವರಿಗೆ ಸಿಎಂ ಬೊಮ್ಮಾಯಿ ದೂರವಾಣಿ ಕರೆ ಮಾಡಿ ಸಂಪುಟ ಸೇರ್ಪಡೆಗೆ ಹೈಕಮಾಂಡ್ ಒಪ್ಪಿಕೊಂಡಿದೆ ಎಂದು ಮಾಹಿತಿ ಕೊಟ್ಟಿದ್ದಾರೆ ಅಂತ ತಿಳಿದು ಬಂದಿದೆ. ಆದರೆ ಈಶ್ವರಪ್ಪ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.
Advertisement
ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಕಾಂಗ್ರೆಸ್ ಎಂಎಲ್‍ಸಿ ಬಿ.ಕೆ.ಹರಿಪ್ರಸಾದ್ ಲೇವಡಿ ಮಾಡಿದ್ದಾರೆ. ಎಲ್ಲ ತಾಲೂಕುಗಳಲ್ಲಿ ಬಿಜೆಪಿ ಕಚೇರಿ ಓಪನ್ ಮಾಡಬೇಕಿದೆ. ಹಾಗಾಗಿ ದೆಹಲಿ ನಾಯಕರಿಗೆ ಕಪ್ಪ ಕಾಣಿಕೆ ಕೊಡಲು ಸಿಎಂ ದೆಹಲಿಗೆ ಹೋಗಿ ಬಂದಿದ್ದಾರೆ ಅಂತ ಆರೋಪಿಸಿದ್ದಾರೆ.