ಬೆಂಗಳೂರು: ದಲಿತ ಸಮಾವೇಶ (Dalit Conference) ಮಾಡಬೇಡಿ ಎಂದು ಹೈಕಮಾಂಡ್ ಹೇಳಿಲ್ಲ. ಹೈಕಮಾಂಡ್ ಒಪ್ಪಿದರೆ ದಲಿತ ಸಮಾವೇಶ ಮಾಡೋದಾಗಿ ಸಚಿವ ಮುನಿಯಪ್ಪ (KH Muniyappa) ತಿಳಿಸಿದ್ದಾರೆ.
ದಲಿತ ಸಮಾವೇಶ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಮಾವೇಶ ಮಾಡಬೇಡಿ ಅಂತ ಹೈಕಮಾಂಡ್ ಏನು ಹೇಳಿಲ್ಲ. ಸಮಾವೇಶ ಮಾಡಬೇಕು ಅಂತ ರಾಜಣ್ಣ, ಪರಮೇಶ್ವರ್ ಸೇರಿ ಹಲವರು ಮನವಿ ಮಾಡಿದ್ದಾರೆ. ಈ ಹಿಂದೆ ಚಿತ್ರದುರ್ಗದಲ್ಲಿ ಮಾಡಿದ್ದ ಎಸ್ಸಿ-ಎಸ್ಟಿ ಸಮಾವೇಶ ಯಶಸ್ವಿಯಾಗಿತ್ತು. ಅದರಿಂದ ನಮಗೆ ಹೆಚ್ಚು ಲಾಭ ಆಗಿತ್ತು. ಚಿತ್ರದುರ್ಗದಲ್ಲಿ ಸಮಾವೇಶ ಮಾಡಬೇಕು ಎಂದು ಹೈಕಮಾಂಡ್ ನಾಯಕರೇ ಹೇಳಿದ್ದರು. ಸಮಾವೇಶ ಮಾಡಿ ಅದು ನಮಗೆ ಯಶಸ್ವಿಯಾಗಿತ್ತು. ಹೀಗಾಗಿ ಅಭಿನಂದನೆ ಹೆಸರಿನಲ್ಲಿ ಸಮಾವೇಶ ಮಾಡಬೇಕು ಅಂತ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಸಾಕ್ಷ್ಯಾಧಾರಗಳ ಕೊರತೆ; ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್‌ಚಿಟ್
ಸಮಾವೇಶ ಮಾಡುವ ಬಗ್ಗೆ ಹೈಕಮಾಂಡ್ ಮನವಿ ಮಾಡಲಾಗಿದೆ. ಸಮಾವೇಶ ಮಾಡೋದು ಅವಶ್ಯಕತೆ ಇದೆ. ಸಮಾವೇಶ ಮಾಡುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಹೇಳಿದರು. ಇದನ್ನೂ ಓದಿ: ಅರ್ಹತೆ ಇಲ್ಲದೇ ಬಿಪಿಎಲ್ ಕಾರ್ಡ್ ಪಡೆದವರಿಗೆ ದಂಡ ಪ್ರಯೋಗ: ಮುನಿಯಪ್ಪ