ರಾಯಚೂರು: ಜಿಲ್ಲೆಯಲ್ಲಿ ಮದ್ಯದಂಗಡಿ ಆರಂಭದ ದಿನವೇ ಅಂಗಡಿಗಳು ಖಾಲಿಯಾಗಿವೆ. ಮೊದಲನೇ ದಿನವೇ ಮದ್ಯದ ಕೊರತೆ ಎದುರಾಗಿದ್ದು, ದುಬಾರಿ ಬೆಲೆಯ ಮದ್ಯದ ಬಾಟಲಿಗಳು ಬಹುತೇಕ ಖಾಲಿಯಾಗಿವೆ. ಹೈ ಬ್ರಾಂಡ್, ವಿದೇಶಿ ಎಣ್ಣೆ ಕೇಳಲೇಬೇಡಿ ಮಧ್ಯಾಹ್ನವೇ ಖಾಲಿಯಾಗಿದೆ ಎಂದು ಮದ್ಯದ ಅಂಗಡಿಗಳ ಮಾಲೀಕರು ಹೇಳುತ್ತಿದ್ದಾರೆ.
Advertisement
ಅಗ್ಗದ ಮದ್ಯ ನಾಳೆಯವರೆಗೂ ಮಾರಾಟಕ್ಕೆ ಲಭ್ಯವಾಗಲಿದೆ. ಸಂಜೆ 7 ಗಂಟೆಯವರೆಗೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದರೂ ಜಿಲ್ಲೆಯ ಬಹುತೇಕ ಮದ್ಯದ ಅಂಗಡಿಗಳಲ್ಲಿ ಮಧ್ಯಾಹ್ನದ ಹೊತ್ತಿಗೆ ದುಬಾರಿ ಬೆಲೆಯ ಮದ್ಯದ ಬಾಟಲ್ ಗಳು ಖಾಲಿಯಾಗಿವೆ. ಒಂದೊಂದು ಅಂಗಡಿಗೆ ಹಿಂದೆಂದೂ ಬರದಷ್ಟು ಜನ ಬಂದು ವ್ಯಾಪಾರ ಮಾಡುತ್ತಿರುವುದರಿಂದ ಇದ್ದುದೆಲ್ಲ ಖಾಲಿಯಾಗುತ್ತಿದೆ.
Advertisement
Advertisement
ಒಬ್ಬರಿಗೆ 2.4 ಲೀಟರ್ ಮಾತ್ರ ಕೊಳ್ಳಲು ಅವಕಾಶ ನೀಡಲಾಗಿದೆ. ಆದರೂ ಒಂದೇ ದಿನಕ್ಕೆ ಮದ್ಯ ಖಾಲಿಯಾಗಿದ್ದಕ್ಕೆ ಮದ್ಯ ಪ್ರೀಯರಿಗೆ ನಿರಾಸೆಯಾಗಿದೆ. ಇನ್ನು ಲಾಕ್‍ಡೌನ್ ಸಮಯದಲ್ಲಿ ಅಕ್ರಮ ಮದ್ಯ ಮಾರಾಟ ದೂರುಗಳು ಇರುವುದರಿಂದ ಅಬಕಾರಿ ಅಧಿಕಾರಿಗಳು ಮದ್ಯದಂಗಡಿಗಳ ದಾಸ್ತಾನಿನ ಲೆಕ್ಕ ಪರಿಶೀಲನೆ ಮುಂದುವರೆಸಿದ್ದಾರೆ.