ಚಿತ್ರದುರ್ಗ: ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ರೆ, ಕಾಂಗ್ರೆಸ್ ಸರ್ಕಾರ ಮಾತ್ರ ಕಮಲಪಾಳಯದ ಬೆದರಿಗೆ ಸೆಡ್ಡು ಹೊಡೆದು ಜಯಂತಿ ಆಚರಣೆಗೆ ಮುಂದಾಗಿದೆ. ಚಿತ್ರದುರ್ಗದಲ್ಲಿಯೂ ಟಿಪ್ಪು ಆಚರಣೆಗೆ ವಿರೋಧ ವ್ಯಕ್ತವಾಗಿದ್ದು, ಇನ್ನೂ ಮೂರು ದಿನ ಇರುವಂತೆಯೇ 144 ಸೆಕ್ಷನ್ ಜಾರಿಯಾಗಿದೆ.
ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಖಾಕಿ ಪಡೆ, ಪ್ಯಾರಾ ಮಿಲಿಟರಿ, ಆರ್‍ಎಎಫ್ ಪಡೆಗಳ ಟೈಟ್ ಸೆಕ್ಯೂರಿಟಿಗಳ ದಂಡೇ ಕಾಣಸಿಗುತ್ತದೆ. ಇದೆಲ್ಲಾ ಟಿಪ್ಪು ಜಯಂತಿ ವೇಳೆ ಅಹಿತಕರ ಘಟನೆಗಳು ನಡೆಯದಿರಲಿ ಎಂದು ಕೋಟೆನಾಡು ಚಿತ್ರದುರ್ಗದಲ್ಲಿ ಪೊಲೀಸ್ ಮಾಡಿರುವ ಟೈಟ್ ಸೆಕ್ಯೂರಿಟಿ.
ಇಂದಿನಿಂದ ನವೆಂಬರ್ 10ರ ಮಧ್ಯರಾತ್ರಿ 12ಗಂಟೆವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಹೀಗಾಗಿ ಬಿಜೆಪಿಯ ಪ್ರತಿಭಟನೆಯ ಮಾಸ್ಟರ್ ಪ್ಲಾನ್ ಠುಸ್ ಪಟಾಕಿ ಮಾಡಲು ಸರ್ಕಾರ ಸಜ್ಜಾಗಿದೆ. ಬಾಲ ಬಿಚ್ಚಿದರೆ ಬಂಧಿಸಿ ಜೈಲಿಗಟ್ಟುವುದುದಾಗಿ ಜಿಲ್ಲಾಡಳಿತ ಖಡಕ್ ಎಚ್ಚರಿಕೆ ನೀಡಿದೆ.
ನಗರದಲ್ಲಿ ನಿಷೇಧಾಜ್ಞೆ ಇದ್ದರೂ ಕಾಂಗ್ರೆಸ್ ಮುಖಂಡರು ಸಭೆ ನಡೆಸಿದ್ದಾರೆ. ಬಿಜೆಪಿಗೆ ಮಾತ್ರ ಅನುಮತಿ ನಿರಾಕರಿಸಲಾಗಿದೆ. ಈ ತಾರತಮ್ಯ ಧೋರಣೆ ಮುಂದುವರೆದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಎಚ್ಚರಿಸಿದ್ದಾರೆ.
ಮಂಗಳವಾರ ನಡೆದ ವಿಚಾರ ಸಂಕಿರಣದಲ್ಲಿ ಕೊಡಗು – ಮೈಸೂರು ಸಂಸದ ಪ್ರತಾಪ್ ಸಿಂಹ ಪಾಲ್ಗೊಳ್ಳಬೇಕಿತ್ತು. ಆದ್ರೆ ಪೊಲೀಸರು ಸಂಸದರಿಗಾಗಿ ಹುಡುಕಾಟ ನಡೆಸಿದ್ರು ಕೈಗೆ ಸಿಗದೆ ಸಂಸದರು, ನೇರವಾಗಿ ಪ್ರತಿಕಾಗೋಷ್ಠಿಗೆ ಹಾಜರಾದ್ರು. ಇನ್ನೂ ಮುಂಜಾಗೃತಾ ಕ್ರಮವಾಗಿ ಹಿಂದೂ ಸಂಘಟನೆಯ ಕೆಲ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟಿನಲ್ಲಿ ಟಿಪ್ಪು ಜಯಂತಿ ಹೆಸರಲ್ಲಿ ನಡೆಯಬಹುದಾಗಿದ್ದ ಅಹಿತಕರ ಘಟನೆಗಳಿಗೆ ಚಿತ್ರದುರ್ಗ ಪೊಲೀಸರು ಕಡಿವಾಣ ಹಾಕಲು ಸಖತ್ ಪ್ಲಾನ್ ಮಾಡಿಕೊಂಡಿದ್ದಾರೆ.