ರಾಯಗಢ ಕರಾವಳಿಯಲ್ಲಿ ಅನುಮಾನಾಸ್ಪದ ದೋಣಿ ಪತ್ತೆ – ಹೈ ಅಲರ್ಟ್‌ ಘೋಷಣೆ

Public TV
1 Min Read
High Alert After Suspicious Boat Likely From Another Nation Spotted Off Maharashtras Raigad Coast

ಮುಂಬೈ: ಮಹಾರಾಷ್ಟ್ರದ ರಾಯಗಢ (Maharashtra’s Raigad) ಜಿಲ್ಲೆಯ ರೇವದಂಡ ಕರಾವಳಿಯ ಬಳಿ ಅನುಮಾನಾಸ್ಪದ ದೋಣಿಯೊಂದು (Suspicious Boat) ಪತ್ತೆಯಾಗಿದ್ದು ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ.

ರೇವದಂಡದ ಕೊರ್ಲೈ ಕರಾವಳಿಯಿಂದ ಎರಡು ನಾಟಿಕಲ್ ಮೈಲುಗಳ ದೂರದಲ್ಲಿ ಭದ್ರತಾ ಸಿಬ್ಬಂದಿ ದೋಣಿಯನ್ನು ನೋಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪತ್ತೆಯಾದ ದೋಣಿ ಬೇರೆ ದೇಶದ ಗುರುತುಗಳನ್ನು ಹೊಂದಿದ್ದು ರಾಯಗಢ ಕರಾವಳಿಗೆ ತೇಲಿ ಹೋಗಿರಬಹುದು ಎಂದು ಅವರು ಹೇಳಿದರು.  ಇದನ್ನೂ ಓದಿ: ರೀಲ್ಸ್ ಹುಚ್ಚು ಹೃದಯಕ್ಕೆ ತರ್ತಿದ್ಯಾ ಕುತ್ತು? ಮೊಬೈಲ್ ವಿಕಿರಣದಿಂದಲೂ ಹೃದಯಕ್ಕೆ ಘಾಸಿ ಆಗ್ತಿದ್ಯಾ?

ಹೈ ಅಲರ್ಟ್‌ ಘೋಷಣೆಯಾದ ಬೆನ್ನಲ್ಲೇ ರಾಯಗಢ ಪೊಲೀಸ್, ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ (ಬಿಡಿಡಿಎಸ್), ತ್ವರಿತ ಪ್ರತಿಕ್ರಿಯೆ ತಂಡ (ಕ್ಯೂಆರ್‌ಟಿ), ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಗಳ ತಂಡಗಳು ಸ್ಥಳಕ್ಕೆ ಧಾವಿಸಿವೆ.

ರಾಯಗಢ ಪೊಲೀಸ್ ವರಿಷ್ಠಾಧಿಕಾರಿ ಅಂಚಲ್ ದಲಾಲ್, ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಕರಾವಳಿಗೆ ತಲುಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

Share This Article