ಬೆಂಗಳೂರು: ರಸ್ತೆ ಧೂಳು, ಕಟ್ಟಡ ನಿರ್ಮಾಣದಿಂದ ಬೆಂಗಳೂರಿನಲ್ಲಿ (Bengaluru) ವಾಯು ಮಾಲಿನ್ಯ (Air Pollution) ಹೆಚ್ಚಾಗುತ್ತಿದೆ ಎಂದು ಸರ್ಕಾರ ಮಾಹಿತಿ ನೀಡಿದ್ದು, ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯ ವಿವಿಧ ಕಾರಣಗಳಿಂದ ಹೆಚ್ಚಾಗುತ್ತಿದೆ ಎಂದು ತಿಳಿಸಿದೆ ಎಂದು ಸಚಿವ ಬೋಸರಾಜು (NS Boseraju) ಹೇಳಿದ್ದಾರೆ.
ಸದನದಲ್ಲಿ ಜೆಡಿಎಸ್‌ನ ಗೋವಿಂದರಾಜು ಪ್ರಶ್ನೆಗೆ ಈಶ್ವರ್ ಖಂಡ್ರೆ ಬದಲಾಗಿ ಸಚಿವ ಬೋಸರಾಜು ಉತ್ತರ ನೀಡಿದರು. ವಾಹನಗಳ ಸಂಚಾರ, ಹೊರಸೂಸುವಿಕೆ, ರಸ್ತೆ ಧೂಳಿನ ಮರು ತೇಲಾಡುವಿಕೆ, ಹೆಚ್ಚಾದ ಕಟ್ಟಡ ಕಾಮಗಾರಿಯಿಂದ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಉಂಟಾಗಿದೆ. 2022-23ನೇ ಸಾಲಿನಲ್ಲಿ 7 ನಿರಂತರ ಪರಿವೇಷ್ಠಕ ವಾಯು ಮಾಪನ ಕೇಂದ್ರದ ವರದಿ ಪ್ರಕಾರ ಪಿಎಂ10 ಮತ್ತು ಪಿಎಂ2.5 ಗಳನ್ನ ಹೊರತುಪಡಿಸಿ ಉಳಿದ ಮಾನಕಗಳು ರಾಷ್ಟ್ರೀಯ ಮಿತಿಯನ್ನು ಮೀರಿರುವುದಿಲ್ಲ. ಬೆಂಗಳೂರು ನಗರದ ಸ್ಥಳಗಳಲ್ಲಿ ಗಂಧಕದ ಡೈಆಕ್ಸೈಡ್, ಸಾರಜನಕದ ಡೈಆಕ್ಸೈಡ್, ಅಮೋನಿಯಾ ಮೌಲ್ಯಗಳು ರಾಷ್ಟ್ರೀಯ ಮಿತಿಗಿಂತ ಮತ್ತು ಸಾಕಷ್ಟು ಕಡಿಮೆ ಇದೆ ಎಂದರು. ಇದನ್ನೂ ಓದಿ: NDA ಸೇರುತ್ತಾರಾ ನವನಿರ್ಮಾಣ ಸೇನೆಯ ರಾಜ್ ಠಾಕ್ರೆ?
ಬೆಂಗಳೂರು ನಗರದ ವಾಯು ಮಾಲಿನ್ಯ ಮೂಲ ತಿಳಿಯಲು ಕರ್ನಾಟಕ ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯು ಸೆಂಟರ್ ಫಾರ್ ಸ್ಟಡಿ ಫಾರ್ ಸೈನ್ಸ್, ಟೆಕ್ನಾಲಜಿ ಮತ್ತು ಪಾಲಿಸಿ (ಸಿಎಸ್‌ಟಿಇಪಿ) ಬೆಂಗಳೂರು ಇವರಿಂದ ಅಧ್ಯಯನ ಮಾಡಲಾಗಿದೆ. ಇದರಲ್ಲಿ ಪಿಎಂ10 ವಾಯು ಮಾಲಿನ್ಯ ಪ್ರಮಾಣ ರಸ್ತೆ ಧೂಳು- 51.1%, ಸಾರಿಗೆ- 18.6%, ಕಟ್ಟಡ ನಿರ್ಮಾಣ-6.0%, ತ್ಯಾಜ್ಯ ಸುಡುವುದು- 7.8%, ಸೆಕೆಂಡರಿ ಸಲ್ಫೇಟ್ -5.2%, ಸೆಕೆಂಡರಿ ನೈಟ್ರೇಟ್- 2.3%, ಡಿ.ಜಿ.ಸೆಟ್- 0.6%, ಇತರೆ- 8.2% ಇದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದ ಎಲ್ಲಾ ವಿವಿಗಳಲ್ಲಿ ಏಕರೂಪದ ಅಂಕ ಮತ್ತು ಗ್ರೇಡಿಂಗ್ ವ್ಯವಸ್ಥೆ ಜಾರಿ: ಸುಧಾಕರ್
ಇನ್ನು ಪಿಎಂ 2.5 ವಾಯು ಮಾಲಿನ್ಯದ ಪ್ರಮಾಣ, ರಸ್ತೆ ಧೂಳು- 25.3%, ಸಾರಿಗೆ- 39.9, ಕಟ್ಟಡ ನಿರ್ಮಾಣ-0.4, ತ್ಯಾಜ್ಯ ಸುಡುವುದು-10.3, ಸೆಕೆಂಡರಿ ಸಲ್ಫೇಟ್ -13.2, ಸೆಕೆಂಡರಿ ನೈಟ್ರೇಟ್- 0.3, ಡಿ.ಜಿ.ಸೆಟ್- 0.3%, ಇತರೆ- 7.6% ಇದೆ ಎಂದು ಸರ್ಕಾರ ಮಾಹಿತಿ ನೀಡಿದೆ ಎಂದು ಹೇಳಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್- ವಸತಿ ಶಾಲೆಯ ಘೋಷವಾಕ್ಯ ಯಥಾಸ್ಥಿತಿ