ಬೆಂಗಳೂರು: 2023ರ ಚುನಾವಣೆ (Election) ಗೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸಿದ್ಧರಾಗುತ್ತಿದ್ದಾರೆ. ಒಂದು ಕಡೆ ಕ್ಷೇತ್ರದ ಸಿದ್ಧತೆ, ಮತ್ತೊಂದು ಕಡೆ ಚುನಾವಣಾ ಪ್ರಚಾರಕ್ಕೆ ಸಿದ್ಧತೆ ಶುರು ಮಾಡಿದ್ದಾರೆ.
ಇವತ್ತು ಕ್ಷೇತ್ರದ ಅಖಾಡ ತಿಳಿಯಲು ಕೋಲಾರಕ್ಕೆ ಪ್ರಯಾಣ ಮಾಡಿದ್ದಾರೆ. ವಿಶೇಷ ಅಂದರೆ ಕಾರ್ ನಲ್ಲಿ ತೆರಳದೆ ವಿಶೇಷ ಬಸ್ (Bus) ನಲ್ಲಿ ಸಿದ್ದರಾಮಯ್ಯ ಆ್ಯಂಡ್ ಟೀಂ ಕೋಲಾರಕ್ಕೆ ತೆರಳಿದೆ. ಈ ವಿಶೇಷ ಬಸ್ ಸಿದ್ದರಾಮಯ್ಯಗಾಗಿಯೇ ಸಿದ್ಧವಾಗಿದೆ. ಹೌದು ಈ ಬಸನ್ನ 2023ರ ಚುನಾವಣೆ ವೇಳೆ ಸಿದ್ದರಾಮಯ್ಯ ಪ್ರಚಾರ ಮಾಡಲು ತೆರಳಲು ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಇದೇ ಬಸ್ ನಲ್ಲಿ ಸಿದ್ದರಾಮಯ್ಯ 224 ಕ್ಷೇತ್ರಗಳಲ್ಲಿ ಸಂಚಾರ ಮಾಡ್ತಾರೆ.
Advertisement
Advertisement
ಅತ್ಯಾಧುನಿಕ ತಂತ್ರಜ್ಞಾನದ ಜೊತೆ ಹೈಫೈ ವ್ಯವಸ್ಥೆ ಇರೋ ಈ ಬಸ್ ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಈ ಬಸ್ ನ ವಿಶೇಷತೆಗಳೇನು? ಈ ಬಸ್ ನಲ್ಲಿ ಏನೆಲ್ಲ ಇದೆ ಅಂತ ನಾವು ನಿಮಗೆ ಹೇಳ್ತೀವಿ ಬನ್ನಿ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಬಗ್ಗೆ ಮಾತಾಡಿದ್ರೆ ನುಗ್ಗಿ ಹೊಡಿತೀವಿ- ಯತ್ನಾಳ್‌ಗೆ ಬೆಂಬಲಿಗರು ಎಚ್ಚರಿಕೆ
Advertisement
ಸಿದ್ದರಾಮಯ್ಯ ಬಸ್ ನ ವಿಶೇಷತೆಗಳು!: ಈ ವಿಶೇಷ ಬಸ್ ಡ್ರೈವರ್ ಹೊರತುಪಡಿಸಿ 6 ಜನ ಕೂತು ಪಯಣ ಮಾಡಲು ವಿಶೇಷ ಸೀಟ್ ವ್ಯವಸ್ಥೆ ಇದೆ. ಎಲ್ಲಾ ಫುಶಿಂಗ್ ಸೀಟುಗಳೇ ಆಗಿವೆ. ಇಡೀ ಬಸ್ ಗೆ ಸಂಪೂರ್ಣ ಎಸಿಯಿಂದ ಮಾಡಲ್ಪಟ್ಟಿದೆ. ಇಡೀ ಬಸ್‍ಗೆ ವಿಶೇ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ.
Advertisement
ಬಸ್ ವಿಂಡೋಗಳನ್ನ ಗಾಜಿನಲ್ಲಿ ಮಾಡಲಾಗಿದ್ದು, ಬಸ್‍ನಲ್ಲಿ ಕುಳಿತು ಜನರನ್ನ ನೋಡುವ ವ್ಯವಸ್ಥೆ ಇದೆ. ಬಸ್ಸಿನ ಒಳಗೆ ನಿಂತು ಭಾಷಣ ಮಾಡಲು ವಿಶೇಷ ತಂತ್ರಜ್ಞಾನದ ಲಿಫ್ಟ್ ಪೋಡಿಯಂ ವ್ಯವಸ್ಥೆ ಮಾಡಲಾಗಿದೆ. ಪ್ರಚಾರದ ವೇಳೆ ಆಯಾಸವಾದ್ರೆ ವಿಶ್ರಾಂತಿ ತೆಗೆದುಕೊಳ್ಳಲು ಬೆಡ್ ವ್ಯವಸ್ಥೆ. ಪ್ರತ್ಯೇಕ ಬಾತ್ ರೂಂ ವ್ಯವಸ್ಥೆ ಮಾಡಲಾಗಿದೆ.
ಪ್ರಚಾರ ಸಮಯದಲ್ಲಿ ಟಿವಿ ವೀಕ್ಷಣೆಗೆ 3 LED TV ಗಳ ಅಳವಡಿಕೆ ಮಾಡಲಾಗಿದೆ. ಹ್ಯಾಂಡ್ ವಾಶ್ ಗೆ ಸಿಂಕ್ ವ್ಯವಸ್ಥೆ, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಇದೆ. ಇನ್ನು ಇಡೀ ಬಸ್ ಗೆ ವೈಫೈ ಕನೆಕ್ಷನ್ ವ್ಯವಸ್ಥೆ ಇದೆ. ನೀರು, ತಿಂಡಿ ಇಡಲು ವಿಶೇಷವಾಗಿ ಚಿಕ್ಕ ಫ್ರಿಜ್ ವ್ಯವಸ್ಥೆ ಕೂಡಾ ಈ ಬಸ್ ನಲ್ಲಿ ಇದೆ. ಸಿದ್ದರಾಮಯ್ಯರ ಆಪ್ತರು ಸಿದ್ದರಾಮಯ್ಯಗಾಗಿಯೇ ಈ ವಿಶೇಷ ಬಸ್ ಸಿದ್ದ ಮಾಡಿದ್ದಾರೆ.