ಲಕ್ನೋ: ಪೆಟ್ರೋಲ್, ಡೀಸೆಲ್‌ನಂತೆಯೇ ದಿನಬಳಕೆ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದೆ. ಕೆಲದಿನಗಳ ಹಿಂದೆಯಷ್ಟೇ ಅಡುಗೆ ಎಣ್ಣೆದರ, ಅಡುಗೆ ಅನಿಲದರವೂ ಏರಿಕೆಯಾಗಿದೆ. ಆದರೀಗ ನಿಂಬೆ ಹಣ್ಣು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ.
ಗಗನಕ್ಕೇರುತ್ತಿರುವ ಬೆಲೆಗಳ ನಡುವೆ, ಗಾಜಿಯಾಬಾದ್‌ನ ಮೋದಿನಗರ ಪ್ರದೇಶದ ತರಕಾರಿ ಮಾರುಕಟ್ಟೆಯಲ್ಲಿ ಕಳ್ಳರು ಅಂದಾಜು 70,000 ರೂಪಾಯಿ ಮೌಲ್ಯದ 12 ಮೂಟೆ ನಿಂಬೆಹಣ್ಣುಗಳನ್ನು ಕದ್ದಿರುವುದು ಬೆಳಕಿಗೆ ಬಂದಿದೆ. ಮಾರುಕಟ್ಟೆಲ್ಲಿದ್ದ ಯಾವುದೇ ತರಕಾರಿಗಳನ್ನು ಮುಟ್ಟದೇ ನಿಂಬೆಹಣ್ಣನ್ನು ಮಾತ್ರವೇ ಕದ್ದೊಯ್ದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ರಾಜ್ ಠಾಕ್ರೆ ಬೊಗಳುವ ನಾಯಿ – ಪರೋಕ್ಷವಾಗಿ ಅಕ್ಬರುದ್ದೀನ್ ಟಾಂಗ್
Advertisement
Advertisement
ಘಾಜಿಯಾಬಾದ್‌ನ ಮೋದಿನಗರ-ಹಾಪುರ್ ರಸ್ತೆಯಲ್ಲಿರುವ ಗಡನಾ ಗ್ರಾಮದ ಮಾರುಕಟ್ಟೆಯ ವ್ಯಾಪಾರಿಯಾಗಿರುವ ಭೋಜ್‌ಪುರ ನಿವಾಸಿ ರಶೀದ್ ಮಳಿಗೆಯಲ್ಲಿ ನಿಂಬಿಹಣ್ಣು ಕಳವಾಗಿದೆ. ಇತ್ತೀಚಿಗೆ ನಿಂಬೆಹಣ್ಣು ಕದಿಯುತ್ತಿರುವ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ತರಕಾರಿ ಮಾರುಕಟ್ಟೆಯಲ್ಲೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹಾಗಿದ್ದೂ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ವಿರುದ್ಧ ಹೋರಾಡಿ, ರಮ್ಯಾ ವಿರುದ್ಧ ಅಲ್ಲ – ಡಿಕೆಶಿ ಬೆಂಬಲಿಗರಿಗೆ ಮಹದೇವಪ್ಪ ಟಾಂಗ್
Advertisement
Advertisement
ಇದೇ ರೀತಿಯ ಘಟನೆಯಲ್ಲಿ ಶಹಜಹಾನ್‌ಪುರದ ಗೋಡೌನ್‌ನಲ್ಲಿಯೂ 50 ಕೆಜಿಯಷ್ಟು ನಿಂಬೆಹಣ್ಣು ಕಳವಾಗಿತ್ತು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇಲ್ಲಿನ ತಿಲ್ಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಗೋದಾಮಿನಲ್ಲಿಯೂ 40 ಕೆಜಿ ಈರುಳ್ಳಿ ಮತ್ತು 38 ಕೆಜಿ ಬೆಳ್ಳುಳ್ಳಿಯೂ ಕಳವಾಗಿರುವುದು ಬೆಳಕಿಗೆ ಬಂದಿತ್ತು. ಇದೀಗ 3ನೇ ಬಾರಿಗೆ ನಿಂಬೆಹಣ್ಣು ಕಳವಾಗಿರುವುದು ಕಂಡುಬಂದಿದೆ.