ಚಂಡೀಘಢ: ಮನೆಕೆಲಸದವಳು 1 ವರ್ಷದ ಮಗುವನ್ನ ಅಮಾನುಷವಾಗಿ ಥಳಿಸಿರೋ ಘಟನೆ ಪಂಜಾಬ್‍ನ ಕಪುರ್‍ತಲಾದಲ್ಲಿ ನಡೆದಿದ್ದು, ಕ್ರೂರಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
Advertisement
1 ವರ್ಷದ ಪುಟ್ಟ ಮಗುವಿಗೆ ಮಹಿಳೆ ಅಮಾನುಷವಾಗಿ ಥಳಿಸಿದ್ದಾಳೆ. ಕೋಲಿನಿಂದ ಮಗುವಿಗೆ ಹೊಡೆದು, ಮಗುವಿನ ಕೆನ್ನೆಯನ್ನ ಕಚ್ಚಿದ್ದಾಳೆ. ಅಲ್ಲದೆ ಮಗುವಿನ ಕಾಲರ್ ಹಿಡಿದು ಮೇಲೆತ್ತಿದ್ದಾಳೆ. ಮಗು ನೋವಿನಿಂದ ಅಳುತ್ತಿದ್ದರೂ ಕ್ರೂರಿ ಮಹಿಳೆಗೆ ಅದು ಯಾವುದೇ ಪರಿಣಾಮ ಬೀರಲಿಲ್ಲ. ಮಗು ಅಳುತ್ತಿರೋ ಧ್ವನಿ ಹೊರಗೆ ಕೇಳಿಸಬಾರದೆಂದು ಟಿವಿಯ ಶಬ್ದವನ್ನ ಜಾಸ್ತಿ ಮಾಡಿದ್ದಾಳೆ. ಈ ಎಲ್ಲಾ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿತ್ತು.
Advertisement
Advertisement
ಮಗುವಿನ ತಂದೆ ಸುಖ್‍ದೇವ್ ಸಿಂಗ್ ನೀಡಿದ ದೂರಿನನ್ವಯ ಇದೀಗ ಪೊಲೀಸರು ಆರೋಪಿ ಮಹಿಳೆಯನ್ನ ಬಂಧಿಸಿದ್ದಾರೆ. ಬಂಧಿತಳನ್ನು ಪರ್ವೀನ್(35) ಎಂದು ಗುರುತಿಸಲಾಗಿದ್ದು, ಈಕೆ ಕಪುರ್‍ತಲಾದ ಮೆಹ್ಟಾಬ್‍ಘರ್ ನಿವಾಸಿಯಾಗಿದ್ದಾಳೆ.
Advertisement
ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರಿಂದ ಮಗುವನ್ನ ನೋಡಿಕೊಳ್ಳಲು ಪರ್ವೀನ್‍ಳನ್ನ ಕೆಲಸಕ್ಕೆ ತೆಗೆದುಕೊಂಡಿದ್ದರು. ಆಕೆಗೆ ತಿಂಗಳಿಗೆ 1500 ರೂ. ಸಂಬಳ ನೀಡಲಾಗುತ್ತಿತ್ತು ಎಂದು ಮಗುವಿನ ತಂದೆ ಸುಖ್‍ದೇವ್ ಸಿಂಗ್ ಪೊಲೀಸರಿಗೆ ಹೇಳಿದ್ದಾರೆ. ನಿರೀಕ್ಷೆಯಂತೆ ತಂದೆ ತಾಯಿ ಸಮ್ಮುಖದಲ್ಲಿ ಪರ್ವೀನ್ ಮಗುವನ್ನ ಚೆನ್ನಾಗೇ ನೋಡಿಕೊಳ್ಳುತ್ತಿದ್ದಳು.
ಆದ್ರೆ ಮಗುವಿನ ವರ್ತನೆಯಲ್ಲಿ ಬದಲಾವಣೆ ಕಂಡುಬಂದಾಗ, ಜೊತೆಗೆ ಗಾಯದ ಗುರುತುಗಳು ಕಂಡುಬಂದಾಗ ತಂದೆ ತಾಯಿಗೆ ಅನುಮಾನ ಬಂದಿತ್ತು. ಹೀಗಾಗಿ ಗೌಪ್ಯವಾಗಿ ಮನೆಯ ಮೂಲೆಯೊಂದರಲ್ಲಿ ಮೊಬೈಲ್ ಫೋನ್ ಕ್ಯಾಮೆರಾ ಆನ್ ಮಾಡಿ ಇಟ್ಟಿದ್ದರು. ಆಗ ಪರ್ವೀನ್‍ಳ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಮಗುವನ್ನ ಸುಮ್ಮನಿರಿಸಲು ಹೊಡೆದಿದ್ದಾಗಿ ಪರ್ವೀನ್ ಪೊಲೀಸರಿಗೆ ಹೇಳಿದ್ದಾಳೆ. ಆರೋಪಿ ಪರ್ವೀನ್ ವಿರುದ್ಧ ಐಪಿಸಿ ಸೆಕ್ಷನ್ 323 ಹಾಗೂ 380ರಡಿ ಪ್ರಕರಣ ದಾಖಲಾಗಿದೆ.