ಮುಂಬೈ: ತಂತ್ರಜ್ಞಾನದ ಮೂಲಕ ಜನರು ಈಗ ಹೈಟೆಕ್ ವಂಚನೆಗೆ ಮುಂದಾಗಿದ್ದಾರೆ. ಇದೇ ರೀತಿ ವಿದ್ಯಾರ್ಥಿಯೊಬ್ಬ ಎಲೆಕ್ಟ್ರಾನಿಕ್ ಸಾಧನದೊಂದಿಗೆ ಫೇಸ್ ಮಾಸ್ಕ್ ಧರಿಸಿ ಸಿಕ್ಕಿಹಾಕಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಕಳೆದ ಶುಕ್ರವಾರ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆ ಮಹಾರಾಷ್ಟ್ರದಲ್ಲಿ ನಡೆಯುತ್ತಿತ್ತು. ಈ ವೇಳೆ ಮಹಾರಾಷ್ಟ್ರದ ಪಿಂಪ್ರಿ-ಚಿಂಚ್‍ವಾಡ್‍ನ ಹಿಂಜೆವರ್ಡಿ ಪ್ರದೇಶದ ಬ್ಲೂ ರಿಡ್ಜ್ ಪಬ್ಲಿಕ್ ಸ್ಕೂಲ್‍ನಲ್ಲಿ ವಿದ್ಯಾರ್ಥಿಯೊಬ್ಬ ಎಲೆಕ್ಟ್ರಾನಿಕ್ ಸಾಧನದೊಂದಿಗೆ ಫೇಸ್ ಮಾಸ್ಕ್ ಧರಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: ಇನ್ನು ಮುಂದೆ ಪತಿ ಪತ್ನಿಯ ಹುಟ್ಟುಹಬ್ಬ ಮರೆತರೆ ಜೈಲೇ ಗತಿ!
Advertisement
Maharashtra | Pimpri Chinchwad police seized a face mask fitted with an electronic device from a candidate who had arrived to appear for the police constable recruitment exam in Hinjewadi yesterday pic.twitter.com/sSFUy3NNM6
— ANI (@ANI) November 20, 2021
Advertisement
ವಿದ್ಯಾರ್ಥಿಗಳನ್ನು ತಪಾಸಣೆ ಮಾಡುತ್ತಿದ್ದ ಸಮಯದಲ್ಲಿ, ಪೊಲೀಸ್ ನಾಯಕ್ ಶಶಿಕಾಂತ್ ದೇವಕಾಂತ್ ಅವರು ವಿದ್ಯಾರ್ಥಿಯೊಬ್ಬನನ್ನು ತಡೆದಿದ್ದಾರೆ. ಈ ವೇಳೆ ವಿದ್ಯಾರ್ಥಿಯ ಫೇಸ್ ಮಾಸ್ಕ್ ಅನ್ನು ಪರಿಶೀಲಿಸಿದಾಗ ಅದಕ್ಕೆ ಎಲೆಕ್ಟ್ರಾನಿಕ್ ಸಾಧನವನ್ನು ಅಳವಡಿಸಿರುವುದನ್ನು ಪತ್ತೆ ಹಚ್ಚಲಾಗಿದೆ. ಅಷ್ಟೇ ಅಲ್ಲದೇ, ಫೇಸ್ ಮಾಸ್ಕ್ ಗೆ ಜಿಬಿಎಸ್ ಬ್ಯಾಟರಿ, ಚಾರ್ಜಿಂಗ್ ಪಾಯಿಂಟ್, ಏರ್‍ಟೆಲ್ ಸಿಮ್ ಕಾರ್ಡ್, ಸ್ವಿಚ್ ಮತ್ತು ಮೈಕ್ ಅನ್ನು ಸಹ ಅಳವಡಿಸಲಾಗಿದ್ದು, ಈ ಎಲ್ಲವನ್ನೂ ವೈರ್‌ಗಳೊಂದಿಗೆ ಸಂಪರ್ಕಿಸಲಾಗಿತ್ತು.
Advertisement
Advertisement
ಇದು ಪೊಲೀಸರಿಗೆ ತಿಳಿಯುತ್ತಿದ್ದಂತೆ ವಿದ್ಯಾರ್ಥಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಸ್ತುತ ಈ ವಿದ್ಯಾರ್ಥಿ ವಿರುದ್ಧ ಹಿಂಜೇವಾಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಾರಾಷ್ಟ್ರ ವಿಶ್ವವಿದ್ಯಾಲಯ, ಮಂಡಳಿ ಮತ್ತು ಇತರೆ ನಿಗದಿತ ಪರೀಕ್ಷೆಗಳ ಕಾಯ್ದೆ, 1982ರಲ್ಲಿ ಅಕ್ರಮಗಳ ತಡೆ ಕಾಯ್ದೆಯ ಸೆಕ್ಷನ್ ಅಡಿಯಲ್ಲಿ ಆರೋಪಿಯನ್ನು ಬಂಧನಕ್ಕೆ ಶೋಧ ನಡೆಯುತ್ತಿದೆ. ಇದನ್ನೂ ಓದಿ: 100 ರೂ. ನೋಟ್ ಒಳಗೆ ವೈಟ್ ಪೇಪರ್ ಇಟ್ಟು ವಂಚನೆ- ಐವರು ಅರೆಸ್ಟ್