ಬರಿ(ಇಟಲಿ): ಜಿ7 ಸಭೆ ಮುಗಿದ ನಂತರ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Italian PM Giorgia Meloni) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೊಂದಿಗೆ ಸೆಲ್ಫಿ ವಿಡಿಯೋ ಮಾಡಿ #Melodi ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.
ಇಟಲಿಯಲ್ಲಿ ನಡೆದ ಜಿ7 ರಾಷ್ಟ್ರಗಳ ಸಭೆಗೆ ವಿಶೇಷ ಆಹ್ವಾನಿತರಾಗಿ ಮೋದಿ ಹೋಗಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಮೆಲೋನಿ ಅವರು ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ ‘Hello From The Melody Team’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
Advertisement
Hi friends, from #Melodi pic.twitter.com/OslCnWlB86
— Giorgia Meloni (@GiorgiaMeloni) June 15, 2024
Advertisement
ಮೆಲೋನಿ ಅವರು ಮೋದಿ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸುತ್ತಿರುವುದು ಇದೇ ಮೊದಲೆನಲ್ಲ. ಈ ಹಿಂದೆ ದುಬೈನಲ್ಲಿ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನ ನಡೆದಿತ್ತು. ಈ ವೇಳೆ ಮೋದಿ ಮತ್ತು ಮೆಲೋನಿ ಭಾಗವಹಿಸಿದ್ದರು. ಈ ಸಂದರ್ಭದಲ್ಲೂ ಮೆಲೋನಿ ಅವರು ಸೆಲ್ಫಿ ಕ್ಲಿಕ್ಕಿಸಿದ್ದರು. ಇದನ್ನೂ ಓದಿ: G7 Group Photo | ಮಧ್ಯದಲ್ಲಿ ನಿಂತ ಭಾರತ: ಮೋದಿ ಹೇಳಿದ್ದೇನು?
Advertisement
ಜಿ7 ಸಭೆ ಮುಗಿದ ಬಳಿಕ ಕೊನೆಯಲ್ಲಿ ಎಲ್ಲಾ ದೇಶದ ನಾಯಕರ ಗ್ರೂಪ್ ಫೋಟೋ ತೆಗೆಯಲಾಗಿತ್ತು. ಈ ಫೋಟೋದಲ್ಲಿ ಪ್ರಧಾನಿ ಮೋದಿ ಮಧ್ಯದಲ್ಲಿ ನಿಂತಿದ್ದು ವಿಶೇಷವಾಗಿತ್ತು.
Advertisement
ಭಾರತದ ಚುನಾವಣಾ ಫಲಿತಾಂಶ ಪ್ರಕಟವಾಗುವ ಮೊದಲೇ ಪ್ರಧಾನಿ ಮೋದಿ ಅವರಿಗೆ ಏಪ್ರಿಲ್ ತಿಂಗಳಿನಲ್ಲಿ ಜಿ7 ಸಭೆಗೆ ಆಗಮಿಸುವಂತೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಆಹ್ವಾನ ನೀಡಿದ್ದರು. ಭಾರತ ಜಿ7 ದೇಶಗಳ ಒಕ್ಕೂಟದಲ್ಲಿ ಇಲ್ಲ. ಆದರೆ ವಿಶೇಷ ಅತಿಥಿಯಾಗಿ ಈ ಸಭೆಯಲ್ಲಿ ಭಾಗವಹಿಸಲು ಇಟಲಿ ಆಹ್ವಾನ ನೀಡಿತ್ತು.
An important G7 Summit, where I presented India’s perspective at the world stage. Here are highlights. pic.twitter.com/amU77yJ79Z
— Narendra Modi (@narendramodi) June 15, 2024
ಏನಿದು ಮೆಲೋಡಿ?
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ನರೇಂದ್ರ ಮೋದಿ ಇಬ್ಬರು ಉತ್ತಮ ಸ್ನೇಹಿತರಾಗಿದ್ದಾರೆ. ಜಿ20 ಸಮ್ಮೇಳನಕ್ಕೆ ಮೆಲೋನಿ ಬಂದಾಗ #Melodi ಹ್ಯಾಶ್ ಟ್ಯಾಗ್ ಫೇಮಸ್ ಆಗಿತ್ತು. ಮೆಲೋನಿ ಮತ್ತು ಮೋದಿ ಹೆಸರನ್ನು ಸೇರಿಸಿ ಅಭಿಮಾನಿಗಳು Melodi ಟ್ಯಾಗ್ ಬಳಸಿ ಪೋಸ್ಟ್ ಮಾಡುತ್ತಿದ್ದರು. ಈಗ ಸ್ವತ: ಜಾರ್ಜಿಯಾ ಮೆಲೋನಿ ಅವರೇ ಈ ಹ್ಯಾಶ್‌ಟ್ಯಾಗ್ ಬಳಸಿ ಪೋಸ್ಟ್ ಮಾಡಿದ್ದು ಸೆಲ್ಫಿ ಫೋಟೋ ವೈರಲ್‌ಆಗಿದೆ.