ಬೈರೂತ್: ಕಳೆದ ಕೆಲವು ದಿನಗಳಿಂದ ತಣ್ಣಗಾಗಿದ್ದ ಇಸ್ರೇಲ್-ಹಿಜ್ಬುಲ್ಲಾ (Israel vs Hezbollah) ನಡುವೆ ಮತ್ತೆ ಯುದ್ಧದ ಕಿಡಿ ಹೊತ್ತಿಕೊಂಡಿದೆ. ಸೋಮವಾರ (ಇಂದು) ಹಿಜ್ಬುಲ್ಲಾ ಭಯೋತ್ಪಾದಕ ಗುಂಪು ಇಸ್ರೇಲ್ ಮೇಲೆ ಭೀಕರ ವಾಯು ದಾಳಿ ನಡೆಸಿದೆ. ಇಸ್ರೇಲ್‌ನ ಹೈಫಾ ನಗರವನ್ನ (Haifa City) ಗುರಿಯಾಗಿಸಿಕೊಂಡು 150 ರಾಕೆಟ್‌ಗಳಿಂದ ದಾಳಿ ನಡೆಸಿದೆ.
#Northern_Israel_Is_Under_Attack
We will continue to defend our civilians against Hezbollah’s aggression. pic.twitter.com/0fd0Wq6pxa
— Israel Defense Forces (@IDF) November 11, 2024
ಹಿಜ್ಬುಲ್ಲಾ ಕ್ಷಿಪಣಿ ದಾಳಿಗೆ ಇಸ್ರೇಲ್‌ನಲ್ಲಿ ಅನೇಕ ನಾಗರಿಕರು ಗಾಯಗೊಂಡಿದ್ದಾರೆ. ಒಂದು ಮಗು ಸೇರಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಹಲವು ವಾಹನಗಳು, ಕಟ್ಟಡಗಳು ಹಾನಿಯಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೇ ಇದು ಇಸ್ರೇಲ್ ಮೇಲೆ ನಡೆದ ಅತಿದೊಡ್ಡ ರಾಕೆಟ್ ದಾಳಿಗಳಲ್ಲಿ ಒಂದೆಂದು ಹೇಳಲಾಗಿದೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಯುದ್ಧವನ್ನು ಉಲ್ಬಣಗೊಳಿಸಬೇಡಿ: ಪುಟಿನ್‌ಗೆ ಕರೆ ಮಾಡಿ ಮಾತಾಡಿದ ಟ್ರಂಪ್
ಇಸ್ರೇಲ್‌ನ ರಕ್ಷಣಾ ವ್ಯವಸ್ಥೆ ʻಐರನ್ ಡೋಮ್ʼ ನಿಂದ ಹೆಜ್ಬೊಲ್ಲಾ ರಾಕೆಟ್‌ಗಳ ದಾಳಿಯನ್ನು ಯಶಸ್ವಿಯಾಗಿ ತಡೆಯಲಾಗಿದ್ದು, ಹೆಚ್ಚಿನ ಹಾನಿ ಆಗುವುದನ್ನು ತಪ್ಪಿಸಲಾಗಿದೆ. ಆದ್ರೆ ಹೈಫಾ ನಗರದಲ್ಲಿನ ಜನನಿಬಿಡ ಪ್ರದೇಶಗಳಲ್ಲಿ ಹಾನಿಯುಂಟುಮಾಡಿವೆ.
ಇರಾನ್ (Iran) ನಡೆಸಿದ ಕ್ಷಿಪಣಿ ದಾಳಿಗೆ ಇಸ್ರೇಲ್ (Israel) ಪ್ರತೀಕಾರವಾಗಿ ಕಳೆದ ಅಕ್ಟೋಬರ್ 25ರಂದು 100ಕ್ಕೂ ಹೆಚ್ಚು ಯುದ್ಧ ವಿಮಾನಗಳ (Air Strike) ಮೂಲಕ ಇರಾನ್‌ನ 20ಕ್ಕೂ ಹೆಚ್ಚು ಮಿಲಿಟರಿ ಸ್ಥಳಗಳಲ್ಲಿ ಇಸ್ರೇಲ್ ಏರ್‌ಸ್ಟ್ರೈಕ್ ನಡೆಸಿತ್ತು. ಆ ಬಳಿಕ ಪಾಶ್ಚಿಮಾತ್ಯ ದೇಶಗಳ ನಡುವೆ ಹೇಳಿಕೊಳ್ಳುವಂತಹ ದೊಡ್ಡಮಟ್ಟದಲ್ಲಿ ದಾಳಿಗಳು ನಡೆದಿರಲಿಲ್ಲ. ಇದೀಗ ಪೇಜರ್ ಸ್ಫೋಟದ ಹಿಂದೆ ಇಸ್ರೇಲ್ ಇರುವುದಾಗಿ ಪ್ರಧಾನಿ ಒಪ್ಪಿಕೊಂಡ ಮರುದಿನ ದಾಳಿ ನಡೆಸಿದೆ.
ಕಳೆದ ಒಂದು ದಿನದ ಹಿಂದೆಯಷ್ಟೇ ನಡೆದ ಪೇಜರ್ ಮತ್ತು ವಾಕಿಟಾಕಿ ಸ್ಫೋಟದ ಹಿಂದೆ ಟೆಲ್ ಅವೀವ್ (ಇಸ್ರೇಲ್ ರಾಜಧಾನಿ) ಇದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದರು. ಇದರ ಬೆನ್ನಲ್ಲೇ ಹಿಜ್ಬುಲ್ಲಾ ಭಯೋತ್ಪಾದಕ ಗುಂಪು ದಾಳಿ ನಡೆಸಿದೆ. ಇದನ್ನೂ ಓದಿ: ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸಲು ಯುವಕರನ್ನ ಪ್ರಚೋದಿಸುತ್ತಿದ್ದ ಖಲಿಸ್ತಾನಿ ಉಗ್ರ ಕೆನಡಾದಲ್ಲಿ ಬಂಧನ
ಕಳೆದ ಸೆಪ್ಟೆಂಬರ್‌ನಲ್ಲಿ ಲೆಬನಾನ್‌ನಾದ್ಯಂತ ಸುಮಾರು ಸಾವಿರಾರು ಪೇಜರ್‌ಗಳು ಸ್ಫೋಟಗೊಂಡಿದ್ದವು, ಇದರ ಮರುದಿನ ವಾಕಿಟಾಕಿಗಳೂ ಸ್ಫೋಟಗೊಂಡಿದ್ದವು. ಈ ಘಟನೆಯನ್ನು ಸುಮಾರು 39 ಮಂದಿ ಮೃತಪಟ್ಟು 3,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.