ಇಸ್ರೇಲ್‌ ಅಧ್ಯಕ್ಷ ನೆತನ್ಯಾಹು ನಿವಾಸದ ಮೇಲೆ ಹಿಜ್ಬುಲ್ಲಾ ಡ್ರೋನ್‌ ದಾಳಿ

Public TV
1 Min Read
Benjamin Netanyahus Home Targeted In Drone Attack

– ಹಮಾಸ್‌ ಮುಖ್ಯಸ್ಥ ಸಿನ್ವಾರ್‌ ಹತ್ಯೆ ಪ್ರತೀಕಾರಕ್ಕೆ ಮುಂದಾದ ಹಿಜ್ಬುಲ್ಲಾ

ಜೆರುಸಲೇಂ: ಹಮಾಸ್‌ (Hamas) ಮುಖ್ಯಸ್ಥ ಯಾಹ್ಯಾ ಸಿನ್ವಾರ್‌ ಹತ್ಯೆ ಪ್ರತೀಕಾರಕ್ಕೆ ಮುಂದಾಗಿರುವ ಹಿಜ್ಬುಲ್ಲಾ (Hezbollah), ಇಸ್ರೇಲ್‌ ಅಧ್ಯಕ್ಷ ಬೆಂಜಮಿನ್‌ ನೆತನ್ಯಾಹು ನಿವಾಸದ ಮೇಲೆ ಡ್ರೋನ್‌ ದಾಳಿ ನಡೆಸಿದೆ.

ನೆತನ್ಯಾಹು (Benjamain Netanyahu) ಖಾಸಗಿ ನಿವಾಸದ ಮೇಲೆ ಹಿಜ್ಬುಲ್ಲಾ ಡ್ರೋನ್ ದಾಳಿ ನಡೆಸಿದೆ. ಖಾಸಗಿ ನಿವಾಸದ ದೂರದಲ್ಲಿ ಡ್ರೋನ್ ಸ್ಫೋಟಗೊಂಡಿದೆ. ಆ ಮೂಲಕ ಇಸ್ರೇಲ್ ಅಧ್ಯಕ್ಷರ ಹತ್ಯೆಗೆ ಪ್ರಯತ್ನ ನಡೆಸಲಾಗಿದೆ. ಸದ್ಯ ಅಧ್ಯಕ್ಷರ ನಿವಾಸಕ್ಕೆ ಯಾವುದೇ ಹಾನಿಯಾಗಿಲ್ಲ. ಇದನ್ನೂ ಓದಿ: ತಲೆ ಸೀಳಿದ ಬುಲೆಟ್‌, ಬೆರಳು ಕಟ್‌; ಭೀಕರ ಹತ್ಯೆಯಾದ ಹಮಾಸ್‌ ಮುಖ್ಯಸ್ಥನ ದೇಹ ಸ್ಥಿತಿ ಹೇಗಿತ್ತು?

ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಹತ್ಯೆಯ ಬೆನ್ನಲ್ಲೇ ಶನಿವಾರ ಇಸ್ರೇಲ್‌ನ ಸಿಸೇರಿಯಾ ಪಟ್ಟಣದಲ್ಲಿರುವ ನೆತನ್ಯಾಹು ಅವರ ನಿವಾಸದ ಕಡೆಗೆ ಡ್ರೋನ್ ಹಾರಿಸಲಾಯಿತು. ಲೆಬನಾನ್‌ನಿಂದ ಡ್ರೋನ್ ಉಡಾವಣೆ ಮಾಡಲಾಗಿದ್ದು, ಅದು ಕಟ್ಟಡಕ್ಕೆ ಅಪ್ಪಳಿಸಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಇಸ್ರೇಲ್ ಭೂಪ್ರದೇಶಕ್ಕೆ ಎಂಟ್ರಿ ಕೊಟ್ಟಿದ್ದ ಇನ್ನೂ ಎರಡು ಡ್ರೋನ್‌ಗಳನ್ನು ತಡೆಹಿಡಿಯಲಾಗಿದೆ ಎಂದು ಮಿಲಿಟರಿ ತಿಳಿಸಿದೆ.

ಲೆಬನಾನ್‌ನಿಂದ ಲಾಂಚ್‌ ಆಗಿದ್ದ ಡ್ರೋನ್‌ ಅನ್ನು ಇಸ್ರೇಲಿ ಮಿಲಿಟರಿ ಬೆನ್ನಟ್ಟಿತು. ಆದರೂ ಅದರನ್ನು ತಡೆಯಲು ಸಾಧ್ಯವಾಗಲಿಲ್ಲ. ಕೊನೆಗೆ ಇಸ್ರೇಲ್‌ ಅಧ್ಯಕ್ಷ ನಿವಾಸದ ಬಳಿ ಡ್ರೋನ್‌ ಸ್ಫೋಟಗೊಂಡಿದೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿದ್ದ ವೈದ್ಯಕೀಯ ದಾಖಲೆಗಳಿಂದ ಹಮಾಸ್ ನಾಯಕ ಸಿನ್ವಾರ್‌ ಗುರುತು ಪತ್ತೆ!

Share This Article