ಬೈರುತ್: ಲೆಬನಾನ್‌ನ (Lebanon) ಮೇಲೆ ಇಸ್ರೇಲ್‌ನ ದಾಳಿಯ ಮಧ್ಯೆ ಹಿಜ್ಬುಲ್ಲಾದ ಎರಡನೇ-ಕಮಾಂಡ್ ಮತ್ತು ಡೆಪ್ಯೂಟಿ ಸೆಕ್ರೆಟರಿ ಜನರಲ್ ನಯಿಮ್ ಕಾಸ್ಸೆಮ್ (Naim Qassem )ಲೆಬನಾನ್‌ನಿಂದ ಇರಾನ್‌ಗೆ ಪಲಾಯನ ಮಾಡಿದ್ದಾನೆ.
ಹಮಾಸ್, ಹಿಜ್ಬುಲ್ಲಾ (Hezbollah) ಮತ್ತು ಇತರ ಇರಾನ್ ಪೋಷಿತ ಉಗ್ರ ಸಂಘಟನೆಗಳನ್ನು ನಾಶಮಾಡುವ ಹೊರಟಿರುವ ಇಸ್ರೇಲ್ ದೇಶವು ಎರಡೂ ಗುಂಪುಗಳ ಹಲವಾರು ಪ್ರಮುಖ ನಾಯಕರನ್ನು ಹತ್ಯೆ ಮಾಡಿದೆ. ಇದರಲ್ಲಿ ಬದುಕುಳಿದರುವ ಹಿಜ್ಬುಲ್ಲಾ ಸಂಘಟನೆಯ ಕೆಲವು ನಾಯಕರಲ್ಲಿ ಹಿಜ್ಬುಲ್ಲಾದ ಎರಡನೇ ಕಮಾಂಡರ್ ಆಗಿದ್ದ ಡೆಪ್ಯೂಟಿ ಸೆಕ್ರೆಟರಿ ಜನರಲ್ ನಯಿಮ್ ಕಾಸ್ಸೆಮ್ ಕೂಡ ಒಬ್ಬ. ಈತ ಭಯದಿಂದ ಇರಾನ್‌ಗೆ ಪಲಾಯನ ಮಾಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ವಸತಿ ಕಾಲೇಜಿನ ಮೊದಲನೇ ಮಹಡಿಯಿಂದ ಬಿದ್ದು ಪಿಯುಸಿ ವಿದ್ಯಾರ್ಥಿನಿ ಸಾವು
Advertisement
ಇಸ್ರೇಲ್ ಹಿಜ್ಬುಲ್ಲಾ ಉಗ್ರ ಸಂಘಟನೆಯ ವಿರುದ್ಧ ತನ್ನ ಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸುತ್ತಿದೆ. ಈಗಾಗಲೇ ಹಮಾಸ್ ಮುಖ್ಯಸ್ಥ ಮುಖ್ಯಸ್ಥ ಹಸನ್ ನಡ್ರೆಲ್ಲಾ ಸೇರಿದಂತೆ ಸಂಘಟನೆಯೊಳಗಿನ ಹಲವಾರು ಪ್ರಮುಖ ನಾಯಕರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಅ.24 ರಂದು ಒಡಿಶಾಕ್ಕೆ ಅಪ್ಪಳಿಸಲಿದೆ ಚಂಡಮಾರುತ – ಗಂಟೆಗೆ 100 -120 ಕಿ.ಮೀ ವೇಗದಲ್ಲಿ ಗಾಳಿ ಜೊತೆ ಸುರಿಯಲಿದೆ ಮಳೆ
Advertisement
ಲೆಬನಾನ್ ಹಿಜ್ಬುಲ್ಲಾ ಮೇಲೆ ಪ್ರತಿಕಾರದಲ್ಲಿ ತೊಡಗಿರುವ ಇಸ್ರೇಲ್ ಹಿಜ್ಬುಲ್ಲಾ ಸಂಘಟನೆಯ ದೊಡ್ಡ ನಾಯಕರನ್ನೆಲ್ಲ ಹೊಡೆದು ಹಾಕಿದೆ. ಇದರ ನಡುವೆ ಜೀವ ಭಯದಿಂದಾಗಿ ಇಸ್ಲಾಮಿಕ್ ರಿಪಬ್ಲಿಕ್‌ನ ಉನ್ನತ ನಾಯಕರು ನಯಿಮ್ ಕಾಸ್ಸೆಮ್ ವರ್ಗಾವಣೆಗೆ ಆದೇಶಿಸಿದ್ದಾರೆ ಎಂದು ಮೂಲಗಳು ಉಲ್ಲೇಖಿಸಿವೆ. ಸೆ. 27 ರಂದು ಇಸ್ರೇಲ್‌ನಿಂದ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನನು ಕೊಂದ ನಂತರ ಕಾಸ್ಸೆಮ್ ಮೂರು ಭಾಷಣಗಳನ್ನು ಮಾಡಿದ್ದಾನೆ ಅದರಲ್ಲಿ, ಒಂದು ಬೈರುತ್‌ನಿಂದ ಮತ್ತು ಇನ್ನೆರಡು ಟೆಹ್ರಾನ್‌ನಿಂದ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ರಷ್ಯಾವನ್ನು ಹಾಡಿ ಹೊಗಳಿ ಪಾಶ್ಚಿಮಾತ್ಯ ದೇಶಗಳಿಗೆ ಮಾತಿನಲ್ಲೇ ತಿವಿದ ಜೈಶಂಕರ್
Advertisement
Advertisement
ನಯಿಮ್ ಕಾಸ್ಸೆಮ್ ರಾಜಕೀಯ ಚಟುವಟಿಕೆಯು ಲೆಬನಾನಿನ ಶಿಯಾ ಅಮಲ್ ಚಳವಳಿಯೊಂದಿಗೆ ಪ್ರಾರಂಭವಾಗಿತ್ತು. ನಂತರ ಇರಾನ್‌ನಲ್ಲಿ (Iran) ಇಸ್ಲಾಮಿಕ್ ಕ್ರಾಂತಿಯ ಹಿನ್ನೆಲೆಯಲ್ಲಿ ಕಾಸ್ಸೆಮ್ 1979ರಲ್ಲಿ ಸಂಘಟನೆಯನ್ನು ತೊರೆದಿದ್ದ. 1982ರಲ್ಲಿ ಇಸ್ರೇಲ್ ಮೇಲೆ ಲೆಬನಾನ್ ಆಕ್ರಮಣದ ನಂತರ ಇರಾನ್ ರೆವಲ್ಯೂಷನ್ ಗಾರ್ಡ್ ಬೆಂಬಲದೊಂದಿಗೆ ರಚನೆಯಾದ ಹಿಜ್ಬುಲ್ಲಾ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. 1992 ರಲ್ಲಿ ಲೆಬೆನಾನ್ ಸಂಸತ್ತಿನ ಚುನಾವಣೆಯಲ್ಲಿ ಹಿಜ್ಬುಲ್ಲಾ ಉಗ್ರಗಾಮಿ ಗುಂಪು ಸ್ಪರ್ಧಿಸಿದಾಗಿನಿಂದಲೂ ಈತ ಅದರ ಪ್ರಚಾರಗಳ ಸಂಯೋಜಕರಾಗಿದ್ದಾನೆ ಎಂದು ವರದಿಗಳು ತಿಳಿಸಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ವರುಣ ರೌದ್ರನರ್ತನ – ತಗ್ಗು ಪ್ರದೇಶ ಜಲಾವೃತ, ಕೆಟ್ಟು ನಿಂತ ವಾಹನಗಳು