ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹತ್ಯೆ – ಇಸ್ರೇಲ್ ಸೇನೆಯಿಂದ ಘೋಷಣೆ

Public TV
1 Min Read
Hasan Nasrallah

ಬೈರುತ್: ಇಸ್ರೇಲ್ (Israel) ವಾಯು ಪಡೆ ಲೆಬನಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಉಗ್ರ ಸಂಘಟನೆ ಹಿಜ್ಬುಲ್ಲಾ (Hezbollah) ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆಗೀಡಾಗಿದ್ದಾನೆ ಎಂದು ಇಸ್ರೇಲ್ ಸೇನೆ ಘೋಷಿಸಿದೆ.

ಲೆಬನಾನ್‍ನಲ್ಲಿರುವ ಹಿಬ್ಜುಲ್ಲಾ ಉಗ್ರರ ಕೇಂದ್ರಗಳನ್ನು ಗುರಿಯಾಗಿರಿಸಿಕೊಂಡು ಇಸ್ರೇಲ್ ವಾಯುಪಡೆ ದಾಳಿ ನಡೆಸಿತ್ತು. ಈ ವೇಳೆ ಹಿಜ್ಬುಲ್ಲಾಗೆ ಸೇರಿದ ಹಲವಾರು ಕಟ್ಟಡಗಳು ನೆಲಸಮಗೊಂಡಿದ್ದವು. ಈ ದಾಳಿಯಲ್ಲಿ ನಸ್ರಲ್ಲಾ ಸಹ ಹತ್ಯೆಗೀಡಾಗಿದ್ದಾನೆ. ಇದನ್ನೂ ಓದಿ: ಇಸ್ರೇಲ್ ವೈಮಾನಿಕ ದಾಳಿ – ಹಿಬ್ಜುಲ್ಲಾ ಡ್ರೋನ್ ಘಟಕದ ಮುಖ್ಯಸ್ಥನ ಹತ್ಯೆ

ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು `ಹಸನ್ ನಸ್ರಲ್ಲಾ ಇನ್ನು ಮುಂದೆ ಜಗತ್ತನ್ನು ಭಯಭೀತಗೊಳಿಸಲು ಸಾಧ್ಯವಾಗುವುದಿಲ್ಲ’ ಎಂದು ಹೇಳಿಕೊಂಡಿದೆ.

ಇನ್ನೂ ಲೆಫ್ಟಿನೆಂಟ್ ಜನರಲ್ ಹರ್ಜಿ ಹಲೆವಿ ಹೇಳಿಕೆ ಬಿಡುಗಡೆ ಮಾಡಿದ್ದು, ಯಾರಾದರೂ ಇಸ್ರೇಲ್ ನಾಗರಿಕರಿಗೆ ಬೆದರಿಕೆ ಹಾಕಿದರೆ ಅವರನ್ನು ಮಟ್ಟ ಹಾಕುವುದು ಹೇಗೆ ಎಂದು ನಮಗೆ ತಿಳಿದಿದೆ ಎಂದು ಎಚ್ಚರಿಸಿದ್ದಾರೆ.

ಇನ್ನೂ ನಸ್ರಲ್ಲಾ ಹತ್ಯೆ ಬಗ್ಗೆ ಹಿಜ್ಬುಲ್ಲಾ ಅಥವಾ ಲೆಬನಾನ್ ಮಾಧ್ಯಮದಿಂದ ಯಾವುದೇ ವರದಿಯಾಗಿಲ್ಲ. 2006 ರಲ್ಲಿ ಇಸ್ರೇಲ್ ಲೆಬನಾನ್ ಮೇಲೆ ಆಕ್ರಮಣ ಮಾಡಿದ ನಂತರ ನಸ್ರಲ್ಲಾ ಹತ್ಯೆಗೀಡಾಗಿದ್ದರು ಎಂದು ವದಂತಿಯಾಗಿತ್ತು. ಕೆಲವು ದಿನಗಳ ಬಳಿಕ ಆತ ಮತ್ತೆ ಕಾಣಿಸಿಕೊಂಡಿದ್ದ. ಇದನ್ನೂ ಓದಿ: 1982-2024: ಇಸ್ರೇಲ್‌ vs ಹಿಜ್ಬುಲ್ಲಾ ನಡುವೆ ನಿಲ್ಲದ ಸಂಘರ್ಷ – 42 ವರ್ಷಗಳ ರಕ್ತಸಿಕ್ತ ಚರಿತ್ರೆ ಬಗ್ಗೆ ನಿಮಗೆಷ್ಟು ಗೊತ್ತು?

Share This Article