Bengaluru CityDistrictsKarnatakaLatestLeading NewsMain Post
ಬೆಂಗಳೂರಿನಲ್ಲಿ ತಂಪೆರೆದ ಮಳೆರಾಯ- ಹಲವೆಡೆ ಧರೆಗುರುಳಿದ ಮರಗಳು

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೆಖೆ ಮಿತಿಮೀರುತ್ತಿದ್ದು, ಈ ಬೆನ್ನಲ್ಲೇ ಇಂದು ಕೂಡ ಸಿಲಿಕಾನ್ ಸಿಟಿಯಲ್ಲಿ ವರುಣ ತಂಪೆರೆದಿದ್ದಾನೆ.
ಸದ್ಯ ಮಾರತಹಳ್ಳಿ, ಮಡಿವಾಳ, ಬನ್ನೇರುಘಟ್ಟ ರಸ್ತೆ, ಹೆಚ್ ಎಸ್ ಲೇಔಟ್ ಭಾಗದಲ್ಲಿ ಆಲಿಕಲ್ಲು ಮಳೆಯಾಗುತ್ತಿದೆ. ಮೆಜೆಸ್ಟಿಕ್, ಕಾರ್ಪೋರೇಷನ್, ಟೌನ್ ಹಾಲ್, ರಾಜಾಜಿನಗರ, ಕೆಆರ್ ಮಾರ್ಕೆಟ್, ಕಾಮಾಕ್ಷಿ ಪಾಳ್ಯ, ಕೆಆರ್ ಸರ್ಕಲ್, ವಿಧಾನಸೌಧ, ಚಾಲುಕ್ಯ, ಕೆ ಆರ್ ಸರ್ಕಲ್, ರೇಸ್ ಕೋರ್ಸ್ ಚಿಕ್ಕಪೇಟೆ ಸುತ್ತಮುತ್ತ ಮಳೆಯಾಗುತ್ತಿದ್ದು, ಸಂಜೆ ಆಗ್ತಿದಂತೆ ವರುಣನ ಆರ್ಭಟ ಶುರುವಾಗಿದೆ. ಇದನ್ನೂ ಓದಿ: ಬಿಜೆಪಿ ಸೇರಿ ಸುಖವಾಗಿದ್ದೇವೆ: ನಾರಾಯಣ ಗೌಡ
ಇದೀಗ ಸುರಿದ ಮಳೆಗೆ ಬೆಂಗಳೂರಿನ ಹಲವೆಡೆ ಮರಗಳು ಧರೆಗುರುಳಿದೆ. ಬಿಟಿಎಂ ಲೇಔಟ್, ಕೋರಮಂಗಲದಲ್ಲಿ ಮರಗಳು ಉರುಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.