Connect with us

Bengaluru City

ರಕ್ಷಿತ್ ಶೆಟ್ಟಿ ಸಿನಿಮಾಗೆ ನೀವೂ ನಾಯಕಿ ಆಗಬಹುದು!

Published

on

ಬೆಂಗಳೂರು: ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿರುವ ಚಿತ್ರಕ್ಕೆ ಚಿತ್ರತಂಡ ನಾಯಕಿ ಹುಡುಕಾಟದಲ್ಲಿದ್ದು, ನಿರ್ಮಾಪಕರು ಹೊಸ ನಾಯಕಿಗಾಗಿ ಒಂದು ಆಫರ್ ಕೊಟ್ಟಿದ್ದಾರೆ.

ನಟ ರಕ್ಷಿತ್ ಶೆಟ್ಟಿ `ಚಾರ್ಲಿ 777′ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾವನನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಈಗ ಅವರೇ ತಮ್ಮ ಫೇಸ್ ಬುಕ್ ನಲ್ಲಿ ನಾಯಕಿಗಾಗಿ ಒಂದು ಪೋಸ್ಟ್ ಹಾಕಿದ್ದಾರೆ.

“ನಟ ರಕ್ಷಿತ್ ಶೆಟ್ಟಿ ನಾಯಕನಾಗಿ `ಚಾರ್ಲಿ 777′ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾಗಾಗಿ ಹೊಸ ನಟಿಯಯನ್ನ ಹುಡುಕುತ್ತಿದ್ದೇವೆ. ಆಸಕ್ತಿ ಇದ್ದವರು [email protected] ಸಂಪರ್ಕಿಸಿ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

`777 ಚಾರ್ಲಿ’ ಸಿನಿಮಾ ಶ್ವಾನ ಮತ್ತು ವ್ಯಕ್ತಿ ನಡುವಿನ ಬಾಂಧವ್ಯವನ್ನು ಹೇಳುವಂತಹ ಕಥೆಯಾಗಿದೆ. ಈ ಸಿನಿಮಾದಲ್ಲಿ ಶ್ವಾನದ ಹೆಸರು ಚಾರ್ಲಿ. ಶ್ವಾನದ ಲೈಸನ್ಸ್ ನಂಬರ್ 777 ಎಂದು ತಿಳಿದು ಬಂದಿದೆ. ಆದ್ದರಿಂದ ಈ ಸಿನಿಮಾಗಾಗಿ `777 ಚಾರ್ಲಿ’ ಎಂಬ ಹೆಸರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.

ಈ ಮೊದಲು ಈ ಚಿತ್ರದಲ್ಲಿ `ಕಿರಿಕ್ ಪಾರ್ಟಿ’ ಖ್ಯಾತಿಯ ಅರವಿಂದ್ ಅಯ್ಯರ್ ನಾಯಕನಾಗಿದ್ದರು. ಆದರೆ ಈಗ ಆ ಜಾಗಕ್ಕೆ ರಕ್ಷಿತ್ ಶೆಟ್ಟಿ ಬಂದಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ಕೆಲಸ ಮಾಡಿರುವ ಕಿರಣ್ ರಾಜ್ ಎಂಬುವವರು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ ವುಡ್‍ಗೆ ಪರಿಚಯವಾಗುತ್ತಿದ್ದಾರೆ.

ಈ ಹಿಂದೆ ತಯರಾಗಿದ್ದ ಕಿರಿಕ್ ಪಾರ್ಟಿಗೆ ರಶ್ಮಿಕಾ ಮಂದಣ್ಣ ಹಾಗೂ ಸಂಯುಕ್ತ ಹೆಗ್ಡೆ ಆಡಿಷನ್ ಮೂಲಕ ಆಯ್ಕೆಯಾಗಿದ್ದರು. ಈಗ 777 ಚಾರ್ಲಿ ಸಿನಿಮಕ್ಕೂ ಆಡಿಷನ್ ಮೂಲಕ ನಾಯಕಿಯರನ್ನು ಸೆಲೆಕ್ಟ್ ಮಾಡಲು ಮುಂದಾಗಿದ್ದಾರೆ.

Click to comment

Leave a Reply

Your email address will not be published. Required fields are marked *