ಸದಾ ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ‘ವಜ್ರಕಾಯ’ (Vajrakaya) ನಟಿ ನಭಾ ನಟೇಶ್ (Nabha Natesh), ಈ ಬಾರಿ ಬ್ಲಾಕ್ ಸೀರೆಯಲ್ಲಿ ಕಲರ್‌ಫುಲ್ ಆಗಿ ಮಿಂಚಿದ್ದಾರೆ. ಸೀರೆಯಲ್ಲಿ ಮೈ ಕೈ ಕಾಣುವ ಹಾಗೆ ಬೆಚ್ಚಗೆ ಪೋಸ್ ಕೊಟ್ಟಿರುವ ನಟಿ, ಟ್ರೆಡಿಷನಲ್ ಆಗಿಯೂ ಕಣ್ಕುಕ್ಕುವಂತೆ ಕಾಣಿಸಿಕೊಂಡಿದ್ದಾರೆ.
ಕ್ಯಾಮೆರಾ ಮುಂದೆ ಬೆಳ್ಳಿಗೆರೆಯಂತಹ ಸೊಂಟವನ್ನು ಪ್ರದರ್ಶಿಸಿರುವ ನಭಾ, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸೀರೆಯಲ್ಲೂ ಗ್ಲಾಮರ್ ಆಗಿ ಮಿಂಚುತ್ತಿರುವ ನಟಿಗೆ, ಸಾಕಷ್ಟು ಕಾಮೆಂಟ್‌ಗಳು ಬಹುಮಾನವಾಗಿ ಸಿಕ್ಕಿವೆ.
View this post on Instagram
‘ನಾನು ದೋಚುಕುಂಡುವತೆ’ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದ ನಭಾ ನಟೇಶ್, ಯುವ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಅದಾದ ನಂತರ, ‘ಇಸ್ಮಾರ್ಟ್ ಶಂಕರ್’ ಚಿತ್ರದ ಮೂಲಕ ರಾತ್ರೋರಾತ್ರಿ ಕ್ರೇಜ್ ಸೃಷ್ಟಿಸಿದ್ದರು. ಪುರಿ ಜಗನ್ನಾಥ್ ನಿರ್ದೇಶನದ ಈ ಚಿತ್ರದಲ್ಲಿ ನಭಾ ಅವರ ಸೌಂದರ್ಯಕ್ಕೆ ಯುವ ಲೋಕ ಮಾರುಹೋಗಿದೆ.
ತೆಲುಗಿನಲ್ಲಿ ಸದ್ಯಕ್ಕೆ ಅವರಿಗೆ ಅವಕಾಶಗಳು ಕಡಿಮೆಯಾಗುತ್ತಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಸೌಂದರ್ಯ ಲೋಕದ ಸೃಷ್ಟಿಗೆ ಮುಂದಾಗಿದ್ದಾರೆ. ಈ ಮೂಲಕ ನಿರಂತರ ಹಾಟ್ ಲುಕ್‌ನಲ್ಲಿ ಟ್ರೆಂಡಿಂಗ್ ಆಗುತ್ತಿದ್ದಾರೆ.
ಈ ಫೋಟೋಗಳನ್ನು ನೋಡಿದರೆ ನಭಾ ತಮ್ಮ ಸೌಂದರ್ಯದ ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಯಾಕೆಂದರೆ ಹಿಂದಿನ ಫೋಟೋಗಳಿಗೆ ಹೋಲಿಸಿದರೆ ಈ ಫೋಟೋಗಳು ಹೆಚ್ಚು ಕಣ್ಣು ಕುಕ್ಕುವಂತಿವೆ. ಅಷ್ಟೇ ಅಲ್ಲದೇ, ಈ ಫೋಟೋಗಳಿಗೆ ಹೆಚ್ಚಿನ ಲೈಕ್ಸ್ ಸಹ ಬರುತ್ತಿವೆ. ಆದರೆ ಈ ಫೋಟೋಶೂಟ್‌ಗಳು ಕೇವಲ ಅವಕಾಶಗಳಿಗಾಗಿ ಎಂಬ ಮಾತುಗಳು ಕೇಳಿಬರುತ್ತಿವೆ. ಮತ್ತೆ ಹಳಿಗೆ ಮರಳುವ ಸಲುವಾಗಿ ಅವರು ಈ ಗ್ಲಾಮರ್ ಟ್ರೀಟ್ ನೀಡುತ್ತಿದ್ದಾರೆ. ಈ ಸುಂದರಿ ಐಟಂ ಸಾಂಗ್‌ಗಳಲ್ಲಿ ನಟಿಸಲು ಕೂಡ ಸಿದ್ಧಳಾಗಿದ್ದಾರೆ ಎಂದು ಹೇಳಲಾಗುತ್ತಿದೆ.