ಕಂಗನಾ ರಣಾವತ್ (Kangana Ranaut) ನಟನೆಯ ಬಹುನಿರೀಕ್ಷಿತ ‘ಎಮರ್ಜೆನ್ಸಿ’ (Emergency Film) ಸಿನಿಮಾದ ಟ್ರೈಲರ್ ಈಗ ರಿಲೀಸ್ ಆಗಿದೆ. ಇಂದಿರಾ ಗಾಂಧಿ (Indira Gandhi) ಪಾತ್ರದಲ್ಲಿ ಕಂಗನಾ ಪರಕಾಯ ಪ್ರವೇಶ ಮಾಡಿದ್ದಾರೆ. ಇಂಡಿಯಾ ಅಂದರೆ ಇಂದಿರಾ ಎಂದು ಖಡಕ್ ಆಗಿ ನಟಿ ಡೈಲಾಗ್ ಹೊಡೆದಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ನತ್ತ ಕನ್ನಡದ ನಟ- ಬಾಬಿ ಡಿಯೋಲ್ ಜೊತೆ ರಾಜ್ ಬಿ ಶೆಟ್ಟಿ ಹೊಸ ಸಿನಿಮಾ

View this post on Instagram
ತುರ್ತು ಪರಿಸ್ಥಿತಿ ಹೇರಿಕೆ ವಿರುದ್ಧ ರಾಷ್ಟ್ರ ವ್ಯಾಪಿ ನಡೆದ ಪ್ರತಿಭಟನೆಗಳು, ಕರ್ಫ್ಯೂ, ರಾಜಕೀಯ ವಿರೋಧ ಹೀಗೆ ಹಲವು ಸನ್ನಿವೇಶಗಳನ್ನು ಟ್ರೈಲರ್‌ನಲ್ಲಿ ಹೈಲೆಟ್ ಮಾಡಲಾಗಿದೆ. ಕಂಗನಾ ‘ಇಂದಿರಾ ಗಾಂಧಿ’ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಂಡಿಯಾ ಅಂದರೆ ಇಂದಿರಾ, ಇಂದಿರಾ ಅಂದರೆ ಇಂಡಿಯಾ ಎಂದಿದ್ದಾರೆ ಕಂಗನಾ. ದೇಶದ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಮಹಿಳೆ. ಆದರೆ, ಇತಿಹಾಸದಲ್ಲಿ ಅವರು ಬರೆದ ಕರಾಳ ಅಧ್ಯಾಯ! (ಎಮರ್ಜೆನ್ಸಿ). ಸಾಕ್ಷಿಯ ಮಹತ್ವಾಕಾಂಕ್ಷೆಯು ದಬ್ಬಾಳಿಕೆಯೊಂದಿಗೆ ಘರ್ಷಿಸುತ್ತದೆ ಎಂದು ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಈ ಟ್ರೈಲರ್ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಸಿನಿಮಾ ಕುರಿತು ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ.
ಈ ಚಿತ್ರದಲ್ಲಿ ಕಂಗನಾ ಜೊತೆ ಅನುಪಮ್ ಖೇರ್, ಮಹಿಮಾ ಚೌಧರಿ, ಶ್ರೇಯಸ್ ತಲ್ಪಾಡೆ ಸೇರಿದಂತೆ ಅನೇಕರು ನಟಿಸಿದ್ದಾರೆ. ಇದೇ ಸೆ.6ರಂದು ‘ಎಮೆರ್ಜೆನ್ಸಿ’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ನಟಿಸುವ ಜೊತೆ ನಿರ್ದೇಶನ ಕೂಡ ಮಾಡಿದ್ದಾರೆ ಕಂಗನಾ. ರಿಂಕು ಪಿಟ್ಟಿ ಜೊತೆ ಸಹ ನಿರ್ಮಾಪಕಿಯಾಗಿ ಕೂಡ ಕಂಗನಾ ಸಾಥ್ ನೀಡಿದ್ದಾರೆ.

